ಕುಕ್ಕರ್ ಬಾಂಬರ್ ಗಳಿಗೆ ಬಿರಿಯಾನಿ ತಿನ್ನಿಸುವವರು ಅಧಿಕಾರಕ್ಕೆ ಬಂದರೆ ಭದ್ರತೆಗೆ ಅಪಾಯ !
ನಿಡಗುಂದಿ: ರಾಜ್ಯದಲ್ಲಿ ಕುಕ್ಕರ್ ಬಾಂಬ್ ಹಾಕಲು ಬಂದವರಿಗೆ ಬಿರಿಯಾನಿ ತಿನಿಸಿ ಓಟ ಹಾಕಿಸಿಕೊಳ್ಳುವ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಭದ್ರತೆಗೆ ಅಪಾಯವಾಗುವದರಿಂದ ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಜನ ಕಿತ್ತೊಗೆಯುತಿದ್ದಾರೆ ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ನಿಡಗುಂದಿ ಪಟ್ಟಣದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ರೋಡ್ ಶೋ ದಲ್ಲಿ ಮಾತನಾಡಿ, ಈ ಭೂಮಿಯ ಭದ್ರತೆಗೆ ದಕ್ಕೆ ತರುವ ಯಾವ ಉಗ್ರಗಾಮಿಯನ್ನು ಬೀಡದೆ ಶಿಕ್ಷಿಸುವದೆ ಬಿಜೆಪಿ ಮೂಲ ಗುರಿ ನಮಗೆ ದೇಶ ಮೊದಲು ಕಾಂಗ್ರೆಸಗರಿಗೆ ಅಧಿಕಾರ ಮೊದಲು ಎನ್ನುವದರಿಂದ ಅವರಿಗೆ ಸುರಕ್ಷೆಯ ಅರಿವಿಲ್ಲ, ಕೋಮು ಭಾವನೆ ಕೆರಳಿಸುವದು, ಮುಸ್ಲಿಂರ ಒಲೈಕೆ ಮಾಡುವದೆ ಅವರ ಚಾಳಿಯಾಗಿದೆ. ಬಿಜೆಪಿಯ ಎಲ್ಲ ಯೋಜನೆಗೆಳು ಜಾತಿ, ಮತ ಪಂಥಗಳನ್ನು ಮಿರಿ ಸರ್ವರಿಗೂ ಸಮಬಾಳು ಎನ್ನುವಂತೆ ಯಾವ ಯೊಜನೆಯನ್ನು ಜಾತಿ ಆಧಾರವಾಗಿ ಮಾಡದೆ ಬಡವರ ಪರವಾಗಿ, ಸೌಲಭ್ಯ ವಂಚಿತ ವರ್ಗದ ಪರವಾಗಿವೆ.

ಕನ್ನಡ ನಾಡಿಗೆ ಬೇಡಾದ ಟಿಪ್ಪು ಜಯಂತಿ ಮಾಡುವ ಉಲ್ಲಾಖಾನ ನಾಡಿಗೆ ಅವರ ಕೊಡುಗೆ ಏನು ಬಿಜೆಪಿ ಮುಸ್ಲಿಂ ವಿರೋಧಿಯಲ್ಲ ನಾಡು, ನುಡಿ, ಜಲ ಜನರ ಜೀವಕ್ಕೆ ಬೆಲೆ ಕೊಡುವವರನ್ನ ಗೌರವಿಸುತ್ತೆವೆ, ಜೀವ ತಗೆಯಲು ಬಂದವರನ್ನ ಜೀವಸಹಿತ ಉಳಿಸುವದು ಹೇಗೆ ಅದಕ್ಕಾಗಿ ಬಿಜೆಪಿ ಪರವಾಗಿ ರಾಜ್ಯದ ಜನತೆ ನಿಂತಿದ್ದಾರೆ ಎಂದರು.
ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವರಾದ ಮುರಗೇಶ ನಿರಾಣಿ, ಗೋ ಕಾರಜೋಳ ಮಾತನಾಡಿದರು.
ರಾಜ್ಯಧ್ಯಕ್ಷ ನಳೀನಕುಮಾರ ಕಟೀಲ
ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ, ಶಾಸಕ ಮಾಲಿಕಯ್ಯ ಗುತ್ತೆದಾರ, ಮಾಜಿ ಶಾಸಕರಾದ, ಎಸ್.ಕೆ.ಬೆಳ್ಳುಬ್ಬಿ, ಅಪ್ಪು ಪಟ್ಟಣಶೆಟ್ಟಿ ಹಾಗೂ ಸೋಮನಗೌಡ ಪಾಟೀಲ ನೇತೃತ್ವದಲ್ಲಿ ಅದ್ದೂರಿಯಾದ ವಿಜಯ ಯಾತ್ರೆಯಲ್ಲಿ ಸಾವಿರಾರು ಜನ ಭಾಗವಹಿಸಿದ್ದರು.