ಮುಂಡರಗಿ: ಪಟ್ಟಣದಲ್ಲಿ ಕಳೆದ ಎರಡು ಮೂರು ದಿನಗಳಿಂದ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಇದರಿಂದ ಮುಂಡರಗಿಯ ಜನ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳ ದಿಂದ ಆತಂಕಕ್ಕೀಡಾಗಿದ್ದಾರೆ. ಆದರೆ ಇಂದು ಪಟ್ಟಣದ ಮಿನಿವಿಧಾನ ಸೌಧ ಕಾರ್ಯಾಲಯ ಗೇಟ್ ಗೆ ಬೀಗ ಹಾಕಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

ಇಂದು ಸೋಮವಾರ ಆಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಚೇರಿ ಕೆಲಸಕ್ಕೆ ಬಂದ ಜನ ತಹಶೀಲ್ದಾರ್ ಕಾರ್ಯಾಲಯದ ಗೇಟ್ ಬೀಗ ನೋಡಿ ನಿರಾಶೆಗೊಳಗಾದರು. ಗೇಟ್ ಬಳಿ ಒಬ್ಬ ಸಿಬ್ಬಂಧಿಯನ್ನು ಕೂರಿಸಿ ತುರ್ತು ಕಾರ್ಯದವರನ್ನು ಮಾತ್ರ ಬಿಡಲಾಗುತ್ತಿದೆ. ಬೆಳಿಗ್ಗೆಯಿಂದ ಮದ್ಯಾಹ್ನ 3:30 ಗಂಟೆಯ ಸುಮಾರಿಗೆ ಕೇವಲ 5 ಜನರನ್ನು ಮಾತ್ರ ಕಚೇರಿ ಕೆಲಸಕ್ಕೆ ಒಳಬಿಡಲಾಗಿತ್ತು. ಈ ಬಗ್ಗೆ ಸ್ವತಃ ಕಚೇರಿ ಸಿಬ್ಬಂಧಿಯೇ ಉತ್ತರಪ್ರಭಕ್ಕೆ ಮಾಹಿತಿ ನೀಡಿದರು.

ಸಿಬ್ಬಂಧಿಗಳು ಎಂದಿನಂತೆ ಕಾರ್ಯಾಲಯದ ಒಳಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಮಿನಿವಿಧಾನ ಸೌಧದಲ್ಲಿ ತಹಶಿಲ್ದಾರ, ಸಬ್ ರಜಿಸ್ಟಾರ, ಸರ್ವೇ ಸೇರಿದಂತೆ ಹಲವು ಕಚೇರಿಗಳಿವೆ. ಜೊತೆಗೆ ಈಗ ಬೆಳೆವಿಮೆ ಪ್ರಕ್ರಿಯೇ ಆರಂಭವಾಗಿದ್ದು ಪಹಣಿಗಾಗಿಯೂ ಸಾಕಷ್ಟು ಜನರು ಬಂದಿದ್ದಾರೆ. ಇದರಿಂದ ಸಾರ್ವಜನಿಕರು ಪರದಾಡುತ್ತಿದ್ದಾರೆ. ಮುಂಡರಗಿ ಪಟ್ಟಣದಲ್ಲಿ 40 ಕ್ಕೂ ಅಧಿಕ ಕೊರೊನಾ ಪತ್ತೆಯಾದ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ ಕಚೇರಿಗೆ ಗೇಟ್ ಗೆ ಬೀಗ ಜಡಿದು ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

You May Also Like

ಕೋವಿಡ್ ನಿಂದಾಗಿ ನಲುಗಿದ ಭಾರತಕ್ಕೆ ನೆರವು ನೀಡುವುದಾಗಿ ಅಮೆರಿಕ ಕಾನ್ಸುಲೇಟ್ ಕಚೇರಿಯ ಕನ್ನಡಲ್ಲೂ ಸಂದೇಶದಲ್ಲಿ ಪ್ರಕಟ

ದೇಶ ಕೊರೋನಾ ಸೋಂಕಿನಿಂದ ನಲಗುತ್ತಿದ್ದು, ದೇಶಕ್ಕೆ ಅಗತ್ಯ ನೆರವು ನೀಡುವುದಾಗಿ ಅಮೆರಿಕ ಸರ್ಕಾರ ಪ್ರಕಟಿಸಿದೆ ಎಂದು ಚೆನ್ನೈನಲ್ಲಿರುವ ಅಮೆರಿಕ ಕಾನ್ಸುಲೇಟ್ ಕಚೇರಿಯ ಕನ್ನಡಲ್ಲೂ ಸಂದೇಶ ಪ್ರಕಟಿಸಿದೆ.

ಲಕ್ಷ್ಮೇಶ್ವರ: ಹೆಚ್ಚಿನ ಬಸ್ ವ್ಯವಸ್ಥೆಗೆ ಒತ್ತಾಯಿಸಿ ಎಬಿವಿಪಿ ಪ್ರತಿಭಟನೆ

ಪಟ್ಟಣದಿಂದ ಗದಗ ನಗರಕ್ಕೆ ಹೆಚ್ಚಿನ ಬಸ್‍ಗಳ ವ್ಯವಸ್ಥೆ ಕಲ್ಪಿಸಬೇಕೆಂದು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಪ್ರತಿಭಟನೆ ನಡೆಸಿದರು.

ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಸವರಾಜ ಕುರಿಕಾರ ಗೆಲುವು ಖಚಿತ: ಮಾಜಿ ಶಾಸಕ ಜಿ.ಎಸ್.ಪಾಟೀಲ

ಉತ್ತರಪ್ರಭ ನರೆಗಲ್: ವಿಧಾನ ಪರಿಷತ್‍ನ ಪಶ್ಚಿಮ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ಪರವಾಗಿ…

ಸಿನಿಪ್ರಿಯರಿಗೆ ಸಿಹಿ ಸುದ್ದಿ; ಯೂಟ್ಯೂಬ್‌ನಲ್ಲಿ 10 ದಿನಗಳ ಜಾಗತಿಕ ಸಿನಿ ಉತ್ಸವ

ಯೂಟ್ಯೂಬ್ 10 ದಿನಗಳ ಕಾಲ ಸಿನಿ ಉತ್ಸವ ಆಯೋಜಿಸುವ ಮೂಲಕ ಸಿನಿ ಪ್ರೀಯರಿಗೆ ಸಿಹಿ ಸುದ್ದಿ ನೀಡಿರುವ ಜೊತೆಗೆ ಉತ್ಸವದ ಜಾಹಿರಾತಿನಿಂದ ಬಂದ ಲಾಭವನ್ನು ವಿಶ್ವ ಆರೋಗ್ಯ ಸಂಸ್ಥೆಯ ಕೋವಿಡ್‌ 19 ಸಾಲಿಡಾರಿಟಿ ರೆಸ್ಪಾನ್ಸ್‌ ಫಂಡ್‌ಗೆ ನೀಡುವುದಾಗಿ ಯೂಟ್ಯೂಬ್‌ ತಿಳಿಸಿದೆ.