ಬೆಂಗಳೂರು : ಕೊರೊನಾ ಮಹಾಮಾರಿ ನಿಯಂತ್ರಣಕ್ಕೆ ಸಿಗದ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರಿಗೆ ಹೊಸ ನಿಯಮ ಜಾರಿಗೊಳಿಸಲು ಮುಂದಾಗಿದೆ.

ಸರ್ಕಾರಿ ನೌಕರಸ್ಥರು ಇನ್ನು ಮುಂದೆ ಐಟಿ – ಬಿಟಿ ಉದ್ಯೋಗಿಗಳ ರೀತಿಯಲ್ಲಿಯೇ ಕೆಲಸ ನಿರ್ವಹಿಸಬೇಕು. ವಾರದಲ್ಲಿ ಕೇವಲ 5 ದಿನ ಮಾತ್ರ ಕೆಲಸ ಮಾಡಬೇಕು. ಸರ್ಕಾರಿ ನೌಕರರಿಗೆ ಶನಿವಾರ, ಭಾನುವಾರ ರಜೆ ಎರಡು ದಿನ ರಜೆ ಇರಲಿದೆ. ಜುಲೈ 10ರಿಂದ ತಿಂಗಳ ನಾಲ್ಕೂ ಶನಿವಾರಗಳು ರಜೆ ಸಿಗಲಿದೆ. ಎಲ್ಲ ಶನಿವಾರ ರಜೆಯು ಸದ್ಯಕ್ಕೆ ಜುಲೈ ತಿಂಗಳಲ್ಲಿ ಅನ್ವಯವಾಲಿದೆ ಎಂದು ತಿಳಿದು ಬಂದಿದೆ.

ಸರ್ಕಾರಿ ನೌಕರರು ಆಯಾ ಏರಿಯಾಗಳಿಗೆ ಅನುಗುಣವಾಗಿ ಒಂದು ದಿನ ಬಿಟ್ಟು ಒಂದು ದಿನ ಕೆಲಸ ಮಾಡಬೇಕು. ಈ ನಿರ್ಧಾರವನ್ನು ಆಯಾ ಸ್ಥಳೀಯ ಕಚೇರಿಗಳ ಮುಖ್ಯಸ್ಥರೇ ತೆಗೆದುಕೊಳ್ಳಬಹುದು. ವಾರದ 5 ದಿನಗಳು ಕಚೇರಿ ಇರಬೇಕು. ಆದರೆ ನೌಕರರಿಗೆ ಒಂದು ದಿನ ಬಿಟ್ಟು ಒಂದು ದಿನ ಕೆಲಸ ನೀಡಬೇಕು ಎಂದು ಸರ್ಕಾರ ಸೂಚಿಸಿದೆ ಎನ್ನಲಾಗಿದೆ.

ವಾರಕ್ಕೆ 2 ದಿನ ರಜೆ ಎಲ್ಲ ಸರ್ಕಾರಿ ಕಚೇರಿಗಳಿಗೆ ಅನ್ವಯವಾಗಲ್ಲ. ಸೋಂಕು ಹೆಚ್ಚಾದ ಪ್ರದೇಶಗಳಲ್ಲಿ ಆಯಾ ಸ್ಥಳೀಯ ಮುಖ್ಯಸ್ಥರು ಕ್ರಮ ಕೈಗೊಳ್ಳಬಹುದು. ದಿನಕ್ಕೆ ಶೇ. 50ರಷ್ಟು ನೌಕರರು ಮಾತ್ರ ಕಾರ್ಯ ನಿರ್ವಹಿಸಬೇಕು. ಇವತ್ತು ಬಂದವರು, ನಾಳೆ ಬರುವಂತಿಲ್ಲ ಎಂಬ ನಿಯಮ ರೂಪಿಸುವ ಯೋಚನೆ ಹೊಂದಿದೆ.

Leave a Reply

Your email address will not be published. Required fields are marked *

You May Also Like

ಯುವ ಘಟಕದ ಅಧ್ಯಕ್ಷರಾಗಿ ಅನಿಲ್ ಸಿದ್ದಮ್ಮನಹಳ್ಳಿ ನೇಮಕ

ಅನಿಲ್ ಕುಮಾರ್ ಸಿದ್ದಮ್ಮನಹಳ್ಳಿ ಅವರನ್ನು ಯುವ ಘಟಕದ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿದ ಪತ್ರವನ್ನು ವಿತರಿಸಲಾಯಿತು.

ಮದುವೆ ಇನ್ನಿತರ ಸಾರ್ವಜನಿಕ ಕಾರ್ಯಕ್ರಮಗಳು ನಿಷೇಧಿಸಿದ ಜಿಲ್ಲಾಡಳಿತ

ಬಾಗಲಕೋಟೆ:ಕೊರೊನಾ ಸೋಂಕು ನಿಯಂತ್ರಣ ಹಿನ್ನೆಲೆ ಮದುವೆ, ಸೀಮಂತ ಕಾರ್ಯಕ್ರಮಗಳನ್ನು ಮಾಡುವಂತಿಲ್ಲ. ಮದುವೆ ತುರ್ತು ನಡೆಸಲೇ ಬೇಕಿದ್ದರೆ…

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಾಧನೆ ಗೈದ ಬಾಲೆ ಸೃುಷ್ಟಿ ಜಾಧವ

ಉತ್ತರಪ್ರಭವಿಜಯಪುರ: ಅವಳಿಗೆ ಅಜ್ಜಿಯಂದರೆ ಪ್ರಾಣ. ಕಾಕಾ ಎಂದರೆ ಎಲ್ಲಿಲ್ಲದ ಪ್ರೀತಿ. ಈ ಅಕ್ಕರೆಯ ಸಿಹಿ ಸಿಂಚನದ…

ನೂರರ ಗಡಿದಾಟಿದ ಕೊರೊನಾ ಪ್ರಕರಣಗಳು

ಗದಗ : ಜಿಲ್ಲೆಯಲ್ಲಿ ದಿನದ ಲೆಕ್ಕದಲ್ಲಿ ಪತ್ತೆಯಾಗುತ್ತಿರುವ ಕೋವಿಡ್-19 ಸೋಂಕಿನ ಪ್ರಕರಣಗಳು ನೂರರ ಗಡಿಯ ಆಸುಪಾಸಿನಲ್ಲೇ…