ಗದಗ: ಜಿಲ್ಲೆಯಲ್ಲಿ ಇಂದು 19 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಗ್ರಾಮೀಣ ಭಾಗದಲ್ಲೂ ಹೆಚ್ಚಿನ ಸೋಂಕಿತರು ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ.

ಗದಗ
ಗದಗ ನಗರದ ಸಿದ್ದರಾಮೇಶ್ವರ ನಗರ ನಿವಾಸಿ 31 ವರ್ಷದ ಪುರುಷ (ಪಿ-10148) ಸೋಂಕಿತರ ಸಂಪರ್ಕದಿಂದಾಗಿ ಅದೇ ಪ್ರದೇಶದ 31 ವರ್ಷದ ಪುರುಷ (ಪಿ-18272) ಹಾಗೂ 24 ವರ್ಷದ ಮಹಿಳೆ((ಪಿ-18273)ಗೆ ಸೋಂಕು ದೃಢವಾಗಿದೆ.
ಗುಜರಾತ್ ರಾಜ್ಯದಿಂದ ಜುಲೈ 2ರಂದು ಜಿಲ್ಲೆಗೆ ಆಗಮಿಸಿದ್ದ ಗದಗ ತಾಲ್ಲೂಕಿನ ಮಲ್ಲಸಮುದ್ರದ ಜಿಮ್ಸ್ ಹಾಸ್ಟೆಲ್‌ನ 19 ವರ್ಷದ ಯುವಕ (ಪಿ-18283), ಮಹರಾಷ್ಟ್ರದಿಂದ ಜೂನ್ 30ರಂದು ಆಗಮಿಸಿದ್ದ ಕಳಸಾಪುರ ರಿಂಗ್ ರೋಡ್ ಪ್ರದೇಶದ 33 ವರ್ಷದ ಪುರುಷ (ಪಿ-18289) ಹಾಗೂ ಹಾವೇರಿ ಜಿಲ್ಲೆಯಿಂದ ಜೂನ್ 26 ರಂದು ಜಿಲ್ಲೆಗೆ ಆಗಮಿಸಿದ ಗದಗ-ಬೆಟಗೇರಿಯ ನರಸಾಪುರದ ರಂಗಪ್ಪಜ್ಜ ಮಠದ ಹತ್ತಿರದ ನಿವಾಸಿ 60 ವರ್ಷದ ಮಹಿಳೆ (ಪಿ-18271) ಇವರಿಗೆ ಜ್ವರ ಹಾಗೂ ಕೆಮ್ಮು ರೋಗ ಲಕ್ಷಣದಿಂದಾಗಿ ಕೋವಿಡ್-19 ಸೋಂಕು ದೃಢಪಟ್ಟಿದೆ.
ಇನ್‌ಪ್ಲೂಯೆಂಜಾ ರೋಗ ಲಕ್ಷಣಗಳಿರುವ ಜ್ವರ ಮತ್ತು ಶೀತದಿಂದ ಬಳಲುತ್ತಿದ್ದ ಮಲ್ಲಸಮುದ್ರದ ಅಂಜುಮನ್ ಕಾಲೇಜ್ ಹತ್ತಿರದ ನಿವಾಸಿ 31 ವರ್ಷದ ಪುರುಷ(ಪಿ-18280), ಗದಗ ನಗರದ ಕಾಗದಗೆರೆ ನಿವಾಸಿ 60 ವರ್ಷದ ಮಹಿಳೆ (ಪಿ-18281) ಹಾಗೂ ಹರ್ತಿ ಗ್ರಾಮದ ಈರಣ್ಣ ದೇವಸ್ಥಾನ ಹತ್ತಿರದ ನಿವಾಸಿ 22 ವರ್ಷದ ಮಹಿಳೆ (ಪಿ-18287)ಗೆ ಸೋಂಕು ದೃಢಪಟ್ಟಿದೆ.
ತಾಲ್ಲೂಕಿನ ಬೆಳದಡಿ ಗ್ರಾಮದ ಶಾಲೆಯ ಹಿಂಭಾಗದ ನಿವಾಸಿ 40 ವರ್ಷದ ಪುರುಷ (ಪಿ-18286), ಅಡವಿ ಸೋಮಾಪುರ ತಾಂಡಾ ನಿವಾಸಿ 60 ವರ್ಷದ ಮಹಿಳೆ (ಪಿ-18288)ಗೆ ಸೋಂಕು ದೃಢವಾಗಿದೆ. ಸೋಂಕಿನ ಪತ್ತೆ ಕಾರ್ಯ ನಡೆಯುತ್ತಿದೆ.

ನರಗುಂದ
ನರಗುಂದ ಪಟ್ಟಣದ ಗಡಿ ಓಣಿ ನಿವಾಸಿ 39 ವರ್ಷದ ಪುರುಷ (ಪಿ-15320) ಸಂಪರ್ಕದಿಂದ ಅದೇ ಪ್ರದೇಶದ 7 ವರ್ಷದ ಬಾಲಕಿ (ಪಿ-18275), 65 ವರ್ಷದ ಮಹಿಳೆ (ಪಿ-18276), 36 ವರ್ಷದ ಮಹಿಳೆ (ಪಿ-18277), 15 ವರ್ಷದ ಯುವಕ (ಪಿ-18278), 42 ವರ್ಷದ ಪುರುಷ (ಪಿ-18279) ಸೋಂಕು ದೃಢಪಟ್ಟಿದೆ. ಧಾರವಾಡ ಜಿಲ್ಲೆಯಿಂದ ಜೂನ್ 30ರಂದು ಆಗಮಿಸಿದ ನರಗುಂದ ಗುಡ್ಡದಕೇರಿ ಅಂಬಾಭವಾನಿ ದೇವಸ್ಥಾನದ ಹತ್ತಿರದ ನಿವಾಸಿ 25 ವರ್ಷದ ಮಹಿಳೆ (ಪಿ-18274) ಕೋವಿಡ್-19 ಸೋಂಕು ದೃಢವಾಗಿದೆ.
ಜಿಮ್ಸ್ ಆಸ್ಪತ್ರೆಗೆ ದಾಖಲಾಗಿರುವ ಧಾರವಾಡ ಜಿಲ್ಲೆ ನವಲಗುಂದ ತಾಲ್ಲೂಕಿನ ಅಡ್ನೂರು ಗ್ರಾಮದ 31 ವರ್ಷದ ಪುರುಷ (ಪಿ-18284) ಇನ್‌ಪ್ಲೂಯೆಂಜಾ ರೋಗ ಲಕ್ಷಣದಿಂದಾಗಿ ಸೋಂಕು ದೃಢವಾಗಿದೆ.

ಲಕ್ಷ್ಮೇಶ್ವರ
ಲಕ್ಷ್ಮೇಶ್ವರದ 39 ವರ್ಷದ ಪುರುಷ (ಪಿ-11230) ಸಂಪರ್ಕದಿAದಾಗಿ ಲಕ್ಷ್ಮೇಶ್ವರ ಹೊಸ ಬಸ್ ನಿಲ್ದಾಣದ ಹತ್ತಿರದ ಇಂದಿರಾ ನಗರ ನಿವಾಸಿ 40 ವರ್ಷದ ಮಹಿಳೆ (ಪಿ-18285) ಸೋಂಕು ದೃಢವಾಗಿದೆ.

ಶಿರಹಟ್ಟಿ
ಶಿರಹಟ್ಟಿ ತಾಲ್ಲೂಕಿನ ಗೊಜನೂರು ಗ್ರಾಮದ 23 ವರ್ಷದ ಮಹಿಳೆ (ಪಿ-18282) ಸೋಂಕು ದೃಢವಾಗಿದ್ದು, ಸೋಂಕಿನ ಪತ್ತೆ ಕಾರ್ಯ ನಡೆಯುತ್ತಿದೆ.
ಇವರಿಗೆ ನಿಗದಿತ ಕೊವಿಡ್-19 ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ.

1 comment
  1. ಇದರಲ್ಲಿ ಮುಂಡರಗಿ ತಾಲೂಕಿನ ಮಾಹಿತಿಯನ್ನೇ ಕೊಟ್ಟಿಲ್ವಲ್ಲಾ ಸರ್……

Leave a Reply

Your email address will not be published. Required fields are marked *

You May Also Like

ಪರಿಸರ ಕಾಳಜಿಯಲ್ಲಿ ಯುವಕರ ಪಾತ್ರ ಮಹತ್ವದ್ದು : ವಿ.ಎಫ್.ಅಂಗಡಿ

ಪರಿಸರ ದಿನಾಚರಣೆ ಅಂಗವಾಗಿ ಅರಣ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ ಕಾರ್ಯಮ.

ಪರಿಷತ್ತ ಕ್ಷೇತ್ರ ಪ್ರಜ್ಞಾವಂತರನ್ನು ಒಳಗೊಂಡ ಪವಿತ್ರ ಕ್ಷೇತ್ರ: ಬಸವರಾಜ ಧಾರವಾಡ

ಉತ್ತರಪ್ರಭ ನರೆಗಲ್ಲ: ಪಶ್ಚಿಮ ಶಿಕ್ಷಕರ ವಿಧಾನ ಪರಿಷತ್ ಕ್ಷೇತ್ರ ಪ್ರಜ್ಞಾವಂತರನ್ನು ಒಳಗೊಂಡ ಪವಿತ್ರ ಕ್ಷೇತ್ರವಾಗಿದ್ದು ಈ…

ರೆಮ್ ಡೆಸಿವರ್ ಈಗ 800 ಮೆಟ್ರಿಕ್ ಟನ್ ಹೆಚ್ಚಿಸಿದ ಕೇಂದ್ರ ಸರ್ಕಾರ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮನವಿ ಸ್ಪಂದಿಸಿದ ಪ್ರಾಧನಿ ನರೇಂದ್ರ ಮೋದಿ ಅವರು ಒಂದೇ ದಿನದಲ್ಲಿ ರಾಜ್ಯಕ್ಕೆ ರೆಮ್ ಡೆಸವಿರ್ ಹಂಚಿಕೆಯನ್ನು 800 ಮೆಟ್ರಿಕ್ ಟನ್ ಗಳಿಗೆ ಹೆಚ್ಚಿಸಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ .ಕೆ ತಮ್ಮ ಅಧಿಕೃತ ಟ್ವೀಟರ್ ನಲ್ಲಿ ಪೋಷ್ಟ ಮಾಡಿದ್ದಾರೆ.

ರಾಜ್ಯದಲ್ಲಿಂದು 249 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ಬೆಂಗಳೂರು: ರಾಜ್ಯದಲ್ಲಿಂದು 249 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 9399…