ಬೆಂಗಳೂರು: ಕಳೆದ ನಾಲ್ಕು ವರ್ಷಗಳ ಹಿಂದೆ ನಾಗಾಲ್ಯಾಂಡ್‌ನಿಂದ ಬ್ಯೂಟಿ ಪಾರ್ಲರ್ ಸೇಲ್ಸ್ ಗರ್ಲ್ ಆಗಿ ಬಂದವಳು ಬೆಂಗಳೂರಿಗೆ ಬಂದವಳು ಆಪ್ತರೊಂದಿಗೆ ಜೈಲು ಪಾಲಾಗಿದ್ದಾರೆ.

ಇ-ಮೇಲ್ ಹ್ಯಾಕ್ ಮಾಡುತ್ತಿದ್ದ ನಾಗಾಲ್ಯಾಂಡ್ ಮೂಲದ ಗ್ಯಾಂಗ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದೆ. ಬಂಧಿರನ್ನು ಥಿಯಾ (31), ಸೆರೋಪಾ (27) ಹಾಗೂ ಇಸ್ಟರ್ ಕೊನ್ಯಾಕ್ ಅಲಿಯಾಸ್ ರುಬಿಕಾ ಎಂದು ಗುರುತಿಸಲಾಗಿದೆ.

ಇವರು ನಿವೃತ್ತ ಡಿಜಿಐಜಿಪಿ ಶಂಕರ್ ಬಿದರಿ ಖಾತೆಯನ್ನು ಹ್ಯಾಕ್ ಮಾಡಿ, ಬಿದರಿ ಸ್ನೇಹಿತರಿಗೆ ಹಣಕ್ಕಾಗಿ ಮೆಸೇಜ್ ಮಾಡಿದ್ದರು. ಮೆಸೇಜ್ ನೋಡಿದ ಬಿದರಿ ಸ್ನೇಹಿತ 25 ಸಾವಿರ ರೂಪಾಯಿ ಹಣವನ್ನು ಆರೋಪಿಗಳ ಖಾತೆಗೆ ಜಮಾ ಮಾಡಿದ್ದರು.

ಬಳಿಕ ಇಮೇಲ್ ದುರ್ಬಳಕೆ ಆಗುತ್ತಿದೆ ಎಂದು ಶಂಕರ್ ಬಿದರಿ ಅವರು ಈ ಬಗ್ಗೆ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನನ್ವಯ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳು ಸುಮಾರು 60 ಬ್ಯಾಂಕ್ ಅಕೌಂಟ್ ಹೊಂದಿದ್ದರು. ಕಳೆದ ವರ್ಷ ನವೆಂಬರನಿಂದ ಇತ್ತೀಚೆಗೆ 60 ಬ್ಯಾಂಕ್ ಅಕೌಂಟ್ ಒಪನ್ ಆಗಿದೆ. ನಾಗಾಲ್ಯಾಂಡ್ನ ನಿರುದ್ಯೋಗಿ ಯುವಕರಿಗೆ ಹಣದ ಆಮಿಷವೊಡ್ಡಿ ಆಧಾರ್ ಕರ್ಡ್ , ಮನೆ ಬಾಡಿಗೆ ಪತ್ರ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.

ಪ್ರಕರಣದಲ್ಲಿರುವ ಮಹಿಳಾ ಆರೋಪಿ ರುಬಿಕಾ ಇದರ ಮಾಸ್ಟರ್ ಮೈಂಡ್ ಎಂದು ತಿಳಿದುಬಂದಿದೆ. ನಾಲ್ಕು ವರ್ಷಗಳ ಹಿಂದೆ ನಗರಕ್ಕೆ ಬಂದು ಬ್ಯೂಟಿ ಪಾರ್ಲರ್ ವೋಂದರಲ್ಲಿ ಸೆಲ್ಸ ಗರ್ಲ್ ಆಗಿದ್ದಳು. ಫೇಸ್ಬುಕ್ನಲ್ಲಿ ಪೀಟರ್ ಹಾಗೂ ಜೇಮ್ಸ್ ಎನ್ನುವವರ ಪರಿಚಯ ಮಾಡಿಕೊಂಡಿದ್ದ ರುಬಿಕಾ, ಜೇಮ್ಸ್ ಹಾಗೂ ಪೀಟರ್ ಮಾರ್ಗದರ್ಶನದಂತೆ ಅಕೌಂಟ್ ಹ್ಯಾಕ್ ಮಾಡಿ ಹಣ ಎಗರಿಸುತ್ತಿದ್ದಳು. ಸದ್ಯ ಆರೋಪಿಗಳನ್ನ ಬಂಧಿಸಿರುವ ಸೈಬರ್ ಕ್ರೈಂ ಪೊಲೀಸರು ವಿಚಾರಣೆಯನ್ನು ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಪೋಷಕರ ಕಣ್ಣ ಮುಂದೆಯೇ ಆತ್ಮಹತ್ಯೆಗೆ ಶರಣಾದ ಯುವತಿ!

ವಿಜಯಪುರ : ಪೋಷಕರ ಎದುರೇ ಯುವತಿ ಭೀಮಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಕರುಳು ಹಿಂಡುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಸೌರ ಚಾಲಿತ ಕೃಷಿ ಪಂಪ್ ಸೆಟ್ ಗೆ ಆನ್ಲೈನ್ ಅಜಿ೯ – ಸವಿತಾ ಮೇಟಿ

ಆಲಮಟ್ಟಿ : ಕೇಂದ್ರ ಸರ್ಕಾರದ ಪಿಎಂ ಕುಸುಮ ಕಂಪೋನೆಟ್ ಬಿ ಯೋಜನೆ ಯಡಿ ಮೊದಲನೆ ಹಂತದಲ್ಲಿ…

ಕಪ್ಪತ್ತಗುಡ್ಡ ಸಂರಕ್ಷಣೆಗೆ ಸ್ವಾಮೀಜಿಗಳ ನೇತೃತ್ವದಲ್ಲಿ ಜನಾಂದೋಲನವೇ ಪರಿಹಾರ : ಜಾರಕಿಹೊಳಿ

ಕಪ್ಪತ್ತಗುಡ್ಡ ರಕ್ಷಣೆ ಮಾಡುವ ವಿಚಾರದಲ್ಲಿ ನಮ್ಮ ಅವಧಿಯಲ್ಲಿ ಅಗತ್ಯ ಕ್ರಮ ಕೈಗೊಂಡಿದ್ದೇವೆ. ಆದರೆ ಈಗೀನ ಬಿ.ಎಸ್.ವೈ ಸರ್ಕಾರ ಗಣಿಗಾರಿಕೆ ಮುಕ್ತ ಮಾಡುವಲ್ಲಿ ಬಹುತೇಕ ಕೆಲಸ ಮುಗಿಸಿದೆ.

ಕಡಕೋಳದಲ್ಲಿ ಸಿಡಿಲು: ಮೂವರು ಸಾವು: ನಾಲ್ವರಿಗೆ ಗಂಭೀರ ಗಾಯ

ತಾಲೂಕಿನ ಕಡಕೋಳ ಗ್ರಾಮದಲ್ಲಿ ಶನಿವಾರ ಸುರಿದ ಭಾರಿ ಮಳೆಗೆ ಸಿಡಿಲು ಬಡಿದು ಮೂವರು ಸಾವನ್ನಪ್ಪಿದ ಧಾರುಣ ಘಟನೆ ಜರುಗಿದೆ. ಘಟನೆಯ ವಿವರ: ಕಡಕೋಳ ಗ್ರಾಮದ ನಿವಾಸಿಗಳಾದ ಕುಮಾರ(24), ಶರಣಪ್ಪ ಮಾಲಿಂಗಪ್ಪ(38) ಮಾರುತಿ(50) ಹೊಲ ನೋಡಿ ಬರಲು ಹೋಗಿದ್ದು, ಮಳೆ, ಗಾಳಿ ಪ್ರಾರಂಭವಾಗಿದ್ದರಿಂದ ಅಲ್ಲಿಯೇ ಗಿಡದ ಮರೆಯಲ್ಲಿ ನಿಂತುಕೊಂಡಿದ್ದಾರೆ. ದುರಾದೃಷ್ಟವಶಾತ್ ಸಿಡಿಲು ಬಡಿದು ಈ ಮೂವರು ಸಾವನ್ನಪ್ಪಿದ್ದಾರೆ.