ಮರ್ಯಾದೆಗೇಡು ಹತ್ಯೆ ಕುರಿತ ಸಿನಿಮಾ ಮರ್ಡರ್ ನ ಪೋಸ್ಟರ್ ಬಿಡುಗಡೆ ಮಾಡಿದ ರಾಮ್ ಗೋಪಾಲ್ ವರ್ಮಾ. ಸಿನಿಮಾದಲ್ಲಿ ಮೂರು ಜಿಜ್ಞಾಸೆಗಳ ಎಳೆ ಇರುವುದಾಗಿ ರಾಮ್ ಗೋಪಾಲ್ ವರ್ಮಾ ಹೇಳಿಕೊಂಡಿದ್ದಾರೆ.
ದಲಿತ ಹುಡುಗನ್ನು ವಿವಾಹವಾದ ಕಾರಣಕ್ಕೆ ಅಮೃತಾಳ ಪತಿಯನ್ನು ಮಾರುತಿ ರಾವ್ ಹತ್ಯೆಗೈದದ್ದು ನೈಜ ಘಟನೆ. ಇದನ್ನು ಆಧರಿಸಿ ಸಿನಿಮಾ ನಿರ್ಮಿಸಲು ರಾಮ್ ಗೋಪಾಲ್ ವರ್ಮಾ ಮುಂದಾಗಿದ್ದಾರೆ.
ಚಿತ್ರದಲ್ಲಿ ಮಗುವಿನ ಮೇಲೆ ತಂದೆಯ ನಿಂಯಂತ್ರಣಕ್ಕೆ ಇರಬೇಕಾದ ಮಿತಿ, ಮಗಳ ಸಂಭಾವ್ಯ ಒಳಿತು, ಯಾರೋ ಒಬ್ಬರ ಒಳಿತಿಗಾಗ ಇನ್ನೊಬ್ಬರನ್ನು ಕೊಲ್ಲುವುದು ನ್ಯಾಯವೇ? ಎಂಬ ವಿಷಯಗಳನ್ನು ಚಿತ್ರದಲ್ಲಿ ಒಳಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಇದು ಅಮೃತ ಮತ್ತು ಮಾರುತಿ ರಾವ್ ಅವರ ಹೃದಯ ಹಿಂಡುವ ಕತೆ. ತನ್ನ ಮಗಳನ್ನು ಅತಿಯಾಗಿ ಪ್ರೀತಿಸುವ ಅಪಾಯದ ಮಹಾಗಾಥೆ ಎಂದು ರಾಮ್ ಗೋಪಾಲ್ ವರ್ಮಾ ಕತೆಯ ಎಳೆಯ ಕುರಿತು ಹೇಳಿಕೊಂಡಿದ್ದಾರೆ.
ಚಿತ್ರದಲ್ಲಿ ಅಮೃತಾ ಪಾತ್ರವನ್ನು ಅವಂಚ ಸಾಹಿತಿ, ತಂದೆ ಮಾರುತಿ ರಾವ್ ಪಾತ್ರವನ್ನು ಶ್ರೀಕಾಂತ್ ಅಯ್ಯಂಗಾರ್ ನಿರ್ವಹಿಸುತ್ತಿದ್ದಾರೆ. ಈ ವಿಷಯವನ್ನು ಕೂಡ ಟ್ವೀಟರ್ ಮೂಲಕ ರಾಮ್ ಗೋಪಾಲ್ ವರ್ಮಾ ಹಂಚಿಕೊಂಡಿದ್ದಾರೆ.

Leave a Reply

Your email address will not be published.

You May Also Like

ದೆಹಲಿಯಲ್ಲಿ ಜುಲೈ ಅಂತ್ಯಕ್ಕೆ ಸೋಂಕಿತರ ಸಂಖ್ಯೆ ಎಷ್ಟಿರಲಿದೆ ಗೊತ್ತಾ?

ಕೊರೊನಾಗೆ ದೆಹಲಿ ತತ್ತರಿಸಿ ಹೋಗಿದೆ. ಇದು ಹೀಗೆ ಮುಂದುವರೆದರೆ ಜುಲೈ ಅಂತ್ಯದ ವೇಳೆಗೆ ದೆಹಲಿಯಲ್ಲಿ 5.5 ಲಕ್ಷ ಜನರಲ್ಲಿ ಸೋಂಕು ಕಾಣಿಸಿಕೊಳ್ಳಲಿದೆ ಎಂದು ಡಿಸಿಎಂ ಮನೀಶ್ ಸಿಸೋಡಿಯಾ ಆತಂಕ ವ್ಯಕ್ತಪಡಿಸಿದ್ದಾರೆ.

ತೋಟಗಾರಿಕೆ ಬೆಳೆಗಳಿಗೆ ವಿಮಾ ಕಂತು ಪಾವತಿಗೆ ಜೂನ್ 30 ಕೊನೆಯ ದಿನ

ಪ್ರಸಕ್ತ ಸಾಲಿನ ಮುಂಗಾರು ಅವಧಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ವಿವಿಧ ತೋಟಗಾರಿಕೆ ಬೆಳೆಗಳಾದ ದಾಳಿಂಬೆ ಮತ್ತು ಪಪ್ಪಾಯ (ಪರಂಗಿ) ಬೆಳೆಗೆ ವಿಮೆ ಸೌಲಭ್ಯ ಅಂತಿಮಗೊಳಿಸಲಾಗಿದ್ದು, ಬಜಾಜ್ ಅಲೆನ್ಸ್ ಇನ್ಸೂರೆನ್ಸ ಕಂಪನಿ ವಿಮೆ ನೀಡಲಿದೆ.