ಮರ್ಯಾದೆಗೇಡು ಹತ್ಯೆ ಕುರಿತ ಸಿನಿಮಾ ಮರ್ಡರ್ ನ ಪೋಸ್ಟರ್ ಬಿಡುಗಡೆ ಮಾಡಿದ ರಾಮ್ ಗೋಪಾಲ್ ವರ್ಮಾ. ಸಿನಿಮಾದಲ್ಲಿ ಮೂರು ಜಿಜ್ಞಾಸೆಗಳ ಎಳೆ ಇರುವುದಾಗಿ ರಾಮ್ ಗೋಪಾಲ್ ವರ್ಮಾ ಹೇಳಿಕೊಂಡಿದ್ದಾರೆ.
ದಲಿತ ಹುಡುಗನ್ನು ವಿವಾಹವಾದ ಕಾರಣಕ್ಕೆ ಅಮೃತಾಳ ಪತಿಯನ್ನು ಮಾರುತಿ ರಾವ್ ಹತ್ಯೆಗೈದದ್ದು ನೈಜ ಘಟನೆ. ಇದನ್ನು ಆಧರಿಸಿ ಸಿನಿಮಾ ನಿರ್ಮಿಸಲು ರಾಮ್ ಗೋಪಾಲ್ ವರ್ಮಾ ಮುಂದಾಗಿದ್ದಾರೆ.
ಚಿತ್ರದಲ್ಲಿ ಮಗುವಿನ ಮೇಲೆ ತಂದೆಯ ನಿಂಯಂತ್ರಣಕ್ಕೆ ಇರಬೇಕಾದ ಮಿತಿ, ಮಗಳ ಸಂಭಾವ್ಯ ಒಳಿತು, ಯಾರೋ ಒಬ್ಬರ ಒಳಿತಿಗಾಗ ಇನ್ನೊಬ್ಬರನ್ನು ಕೊಲ್ಲುವುದು ನ್ಯಾಯವೇ? ಎಂಬ ವಿಷಯಗಳನ್ನು ಚಿತ್ರದಲ್ಲಿ ಒಳಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಇದು ಅಮೃತ ಮತ್ತು ಮಾರುತಿ ರಾವ್ ಅವರ ಹೃದಯ ಹಿಂಡುವ ಕತೆ. ತನ್ನ ಮಗಳನ್ನು ಅತಿಯಾಗಿ ಪ್ರೀತಿಸುವ ಅಪಾಯದ ಮಹಾಗಾಥೆ ಎಂದು ರಾಮ್ ಗೋಪಾಲ್ ವರ್ಮಾ ಕತೆಯ ಎಳೆಯ ಕುರಿತು ಹೇಳಿಕೊಂಡಿದ್ದಾರೆ.
ಚಿತ್ರದಲ್ಲಿ ಅಮೃತಾ ಪಾತ್ರವನ್ನು ಅವಂಚ ಸಾಹಿತಿ, ತಂದೆ ಮಾರುತಿ ರಾವ್ ಪಾತ್ರವನ್ನು ಶ್ರೀಕಾಂತ್ ಅಯ್ಯಂಗಾರ್ ನಿರ್ವಹಿಸುತ್ತಿದ್ದಾರೆ. ಈ ವಿಷಯವನ್ನು ಕೂಡ ಟ್ವೀಟರ್ ಮೂಲಕ ರಾಮ್ ಗೋಪಾಲ್ ವರ್ಮಾ ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You May Also Like

‘ಪುಷ್ಪ’ ಜಾತಿ ಬಿರುಗಾಳಿಯಲ್ಲಿ

ಹೈದರಾಬಾದ್: ರಾಜಕೀಯ ಮತ್ತು ಸಿನಿಮಾಗಳನ್ನು  ಅತಿ ಹೆಚ್ಚು ಪೋಸಿಸುವ  ರಾಜ್ಯಗಳಲ್ಲಿ ಆಂಧ್ರ ಪ್ರದೇಶಒಂದಾಗಿದೆ.  ಹಿಂದಿನಿಂದಲೂ ಈ…

ದೇಶದಲ್ಲಿ ಒಂದೇ ದಿನ 7,466 ಹೊಸ ಕೊರೊನಾ ಪ್ರಕರಣ: 175 ಸಾವು

ದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಹೊಸದಾಗಿ 7,466 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಇದೇ ಅವಧಿಯಲ್ಲಿ…

ಗದಗ ಜಿಲ್ಲೆಯಲ್ಲಿಂದು ಕಂಟೈನ್ ಮೆಂಟ್ ಬೇಲಿ ಕಳಚಿಕೊಂಡ ಪ್ರದೇಶಗಳು

ಗದಗ: ಜಿಲ್ಲೆಯ ಕೋಟುಮಚಗಿ ಗ್ರಾಮದ ವಾರ್ಡ ಸಂಖ್ಯೆ 1 ಮತ್ತು 2 , ಗದಗ ತಾಲ್ಲೂಕಿನ…

ಕೊರೋನಾ ನಂತರ ಚೀನಾದಲ್ಲೀಗ ಬ್ಯುಬೊನಿಕ್ ಪ್ಲೇಗ್!

ನವದೆಹಲಿ: ಕೊರೊನಾದಿಂದ ಹೆಚ್ಚು ಬಾಧಿತ ನಂಬರ್ 1 ದೇಶ ಎನಿಸಿದ್ದ ಚೀನಾ ನಂತರದಲ್ಲಿ ಸಾಕಷ್ಟು ಚೇತರಿಸಿಕೊಂಡು…