ಗದಗ: ಜಿಲ್ಲೆಯ ಮುಂಡರಗಿ ತಾಲೂಕಾ ಆಸ್ಪತ್ರೆ ಸಿಬ್ಬಂದಿಗೆ ಕರೊನಾ ಪಾಸಿಟಿವ್ ಶಂಕೆ ವ್ಯಕ್ತವಾಗಿದೆ. ಶಂಕೆ ಹಿನ್ನಲೆಯಲ್ಲಿ ಮುಂಡರಗಿ ತಾಲೂಕಾ ಆಸ್ಪತ್ರೆ ಹಾಗೂ ಡಂಬಳ ಆರೋಗ್ಯ ಕೇಂದ್ರದಲ್ಲಿ ಸೈನಿಟೈಜರ್ ಮಾಡಲಾಗಿದೆ.

ಮುಂಡರಗಿ ವೈದ್ಯಕೀಯ ಸಿಬ್ಬಂದಿ, ಚೆಕ್ ಪೋಸ್ಟ್ ಹಾಗೂ ಮುಂಡರಗಿ ಬಸ್ ಡಿಪೋ ಮತ್ತು ಡಂಬಳ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಪಾಸಿಟಿವ್ ಶಂಕೆ ಹಿನ್ನಲೆಯಲ್ಲಿ ವೈದ್ಯಕೀಯ ಸಿಬ್ಬಂದಿ ಸಂರ್ಪಕದಲ್ಲಿದ್ದವರ ಪತ್ತೆ ಕಾರ್ಯನಡೆದಿದ್ದು, ಕೆಲವರನ್ನು ಈಗಾಗಲೇ ಪರೀಕ್ಷೆಗೊಳಪಡಿಸಲಾಗಿದೆ. ವೈದ್ಯಕೀಯ ಸಿಬ್ಬಂದಿ ಸಂರ್ಪಕದಲ್ಲಿದ್ದವರಿಗೆ ಕರೊನಾ ಢವ ಢವ ಆರಂಭವಾಗಿದ್ದು, ಕೊರೊನಾ ವಾರಿಯರ್ಸ್ ಗೂ ಕೊರೊನಾ ಕಾಟ ಶುರುವಾಗಿದ್ದು ಸಹಜವಾಗಿಯೇ ಜನಸಾಮಾನ್ಯರಲ್ಲಿಯೂ ಆತಂಕ ನಿರ್ಮಾಣ ಮಾಡಿದೆ.

Leave a Reply

Your email address will not be published. Required fields are marked *

You May Also Like

ಗರಿಷ್ಠ ಮಟ್ಟದ ಇಂಧನ ತೆರಿಗೆ ಪಡೆಯುವ ರಾಷ್ಟ್ರ ಯಾವುದು ಗೊತ್ತಾ?

ಭಾರತ ಸದ್ಯ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ಗರಿಷ್ಠ ಮಟ್ಟದ ತೆರಿಗೆ ವಿಧಿಸಿದ ರಾಷ್ಟ್ರವಾಗಿದೆ. ಭಾರತ ಮೊದಲನೇ ಸ್ಥಾನದಲ್ಲಿದ್ದರೇ ಇಟಲಿ ಎರಡನೇ ಸ್ಥಾನದಲ್ಲಿದೆ.

ಪ್ರವಾಹದಿಂದ ಹಾನಿಗೊಳಗಾದ ರಸ್ತೆಗಳ ದುರಸ್ಥಿ ಬಗ್ಗೆ ಸಚಿವ ಪಾಟೀಲ ಮಾಹಿತಿ

ಜಿಲ್ಲೆಯಲ್ಲಿ ಪ್ರವಾಹದಿಂದ ಹಾನಿಗೊಳಗಾದ ರಸ್ತೆಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಜಿಲ್ಲಾ ಹೆದ್ದಾರಿಯಿಂದ ರಾಜ್ಯ ಹೆದ್ದಾರಿಯವರೆಗೆ ಮೇಲ್ದರ್ಜೆಗೆ ಏರಿಸಲು ಮನವಿ ಮಾಡಿದ್ದು, ಜಿಲ್ಲಾ ಹೆದ್ದಾರಿಯಿಂದ ರಾಜ್ಯ ಹೆದ್ದಾರಿ ಮಾಡಲು ಪರಿವರ್ತನೆ ಮಾಡಲು ಸರ್ಕಾರಕ್ಕೆ ಮನವಿ ಮಡಿದ್ದೇವೆ ಎಂದು ಸಣ್ಣ ಕೈಗಾರಿಕಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಿ.ಸಿ.ಪಾಟೀಲ ಹೇಳಿದರು.

ಲಕ್ಷ್ಮೇಶ್ವರ ತಾಲೂಕಿನಾದ್ಯಂತ ಜವಳು ಮಣ್ಣಿಗೆ ಮರಳು ರೂಪ ಕೊಟ್ಟು ಅಕ್ರಮ!

ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವುದು ಅಧಿಕಾರಿಗಳಿಗೆ ಗೊತ್ತಿದೆಯಂತೆ, ಆದರೆ ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳುತ್ತಾರಂತೆ. ಇದು ಕೇವಲ ಒಂದು ವಿಚಾರದ್ದಲ್ಲ.