ಬೆಂಗಳೂರು: 2020-21ನೇ ಸಾಲಿನಲ್ಲಿ ಖಾಸಗಿ ಅನುದಾನ ರಹಿತ ಶಾಲೆಗಳು ಶಾಲಾ ಶುಲ್ಕಗಳನ್ನು ಪರಿಷ್ಕರಿಸದಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ದೇಶಾದ್ಯಂತ ಕೊರೊನಾ ಹಿನ್ನೆಲೆಯಲ್ಲಿ ಜನ ಜೀವನ ನಡೆಸುವುದು ದುಸ್ತರವಾಗಿದ್ದು, ಈ ಹಿನ್ನೆಲೆಯಲ್ಲಿ ಪೋಷಕರ ಹಿತ ಕಾಯಲು ರಾಜ್ಯ ಸರ್ಕಾರ ಮುಂದಾದಂತಾಗಿದೆ.
ಕರ್ನಾಟಕ ಶಿಕ್ಷಣ ಕಾಯ್ದೆ, 1983ರಡಿಯಲ್ಲಿ ರಚಿಸಿರುವ ನಿಯಮಗಳು, 1999ರ ನಿಯಮ 4ರಲ್ಲಿ ಉಪ ನಿಯಮ (4)ರಲ್ಲಿ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ವಿದ್ಯಾರ್ಥಿಗಳ ಬೋಧನಾ ಶುಲ್ಕಗಳನ್ನು ಸರ್ಕಾರ ನಿಗದಿ ಪಡಿಸಲು ಅವಕಾಶ ಕಲ್ಪಿಸಿದೆ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.
ಅಲ್ಲದೇ, ಪ್ರಸ್ತುತ ಕೊರೊನಾ ವೈರಸ್ ಸಾಂಕ್ರಾಮಿಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ದಿ. 24.03.2020ರಿಂದ ಲಾಕ್ಡೌನ್ ಘೋಷಣೆ ಮಾಡಿದ್ದು, ಇದರಿಂದಾಗಿ ಕೈಗಾರಿಕೆಗಳು ಹಾಗೂ ಆರ್ಥಿಕ ಚಟುವಟಿಕೆಗಳು ಸ್ಥಬ್ಧವಾಗಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರು ಸಾಕಷ್ಟು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಾರೆ. ಈ ಹಿನ್ನೆಲೆಯಲ್ಲಿ, ಖಾಸಗಿ ಅನುದಾನ ರಹಿತ ಶಾಲೆಗಳ ಪೋಷಕರು ಈ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕವನ್ನು ಹೆಚ್ಚಿಸದಂತೆ ಶಾಲಾ ಸಂಸ್ಥೆಗಳಿಗೆ ನಿರ್ದೇಶನ ನೀಡುವಂತೆ ಸಾಕಷ್ಟು ಮನವಿಗಳನ್ನು ಸರ್ಕಾರಕ್ಕೆ ಸಲ್ಲಿಸಿರುತ್ತಾರೆ ಎಂದು ಪೋಷಕರ ಮನವಿಯನ್ನು ಉಲ್ಲೇಖಿಸಲಾಗಿದೆ.
ಆದ್ದರಿಂದ, ಕರ್ನಾಟಕ ಶಿಕ್ಷಣ ನಿಯಮ 1999ರಲ್ಲಿ ಕಲ್ಪಿಸಿರುವ ಅವಕಾಶವನ್ನು ಸರ್ಕಾರ ಸಾರ್ವಜನಿಕರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವುದನ್ನು ಪರಿಗಣಿಸಿ ಕರ್ನಾಟಕ ಶಿಕ್ಷಣ ಕಾಯ್ದೆ-1983, ಸೆಕ್ಷನ್-133, ಉಪ ನಿಯಮ-(2)ರ ಅಡಿಯಲ್ಲಿನ ಅಧಿಕಾರವನ್ನು ಚಲಾಯಿಸಿ ಎಲ್ಲಾ ಖಾಸಗಿ ಅನುದಾನ ರಹಿತ ಶಾಲೆಗಳು 2020-21ನೇ ಶೈಕ್ಷಣಿಕ ಸಾಲಿನಲ್ಲಿ ಯಾವುದೇ ಬೋಧನಾ ಶುಲ್ಕವನ್ನು ಹೆಚ್ಚಿಸಬಾರದೆಂದು ಸೂಚಿಸಿದೆ.

ಸರ್ಕಾರದ ಆದೇಶದ ಪ್ರತಿ

ಒಂದು ವೇಳೆ ಶಾಲಾ ಆಡಳಿತ ಮಂಡಳಿಯವರು 2019-20ನೇ ಶೈಕ್ಷಣಿಕ ಸಾಲಿಗಿಂತ ಹೆಚ್ಚಿನ ಬೋಧನಾ ಶುಲ್ಕವನ್ನು ಮಕ್ಕಳು/ಪೋಷಕರಿಂದ ಸಂಗ್ರಹಿಸುವಲ್ಲಿ ಕರ್ನಾಟಕ ಶಿಕ್ಷಣ ಕಾಯ್ದೆ-124[ಎ]ರಡಿ ಕ್ರಮ ಜರುಗಿಸಲಾಗುವುದೆಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

Leave a Reply

Your email address will not be published. Required fields are marked *

You May Also Like

ರಾಜ್ಯಸಭೆಯತ್ತ ಎಚ್.ವಿಶ್ವನಾಥ್ ಚಿತ್ತ..?

ಇತ್ತಿಚಿನ ಬೆಳವಣಿಗೆಯನ್ನು ನೋಡಿದರೆ ವಿಶ್ವನಾಥ್ ಚಿತ್ತ ರಾಜ್ಯಸಭೆಯತ್ತ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಎಲ್ಲ ಕಾರಣಗಳಿಂದ ಶಿಘ್ರದಲ್ಲಿ ಬರಲಿರುವ ರಾಜ್ಯಸಭೆ ಚುನಾವಣೆಗೆ ಇನ್ನಷ್ಟು ಮಹತ್ವ ಬಂದಿದೆ

ಲಾಕ್ ಡೌನ್ ಮಾನದಂಡ ಸಡಿಲಿಕೆಯಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದೆಯಾ?

ಲಾಕ್‌ಡೌನ್ ಮಾನದಂಡಗಳನ್ನು ಸಡಿಲಿಸಿದ ನಂತರ ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆಯಲ್ಲಿ ಏರಿಕೆಯಾಗಿದೆಯೇ ಎಂಬುವುದನ್ನು ಖಚಿತಪಡಿಸಿಕೊಳ್ಳಲು, ಆರೋಗ್ಯ ಇಲಾಖೆ ಎಲ್ಲ ನಾಗರಿಕರ ಪರೀಕ್ಷೆಯನ್ನು ನಡೆಸಲು ನಿರ್ಧರಿಸಿದೆ.

ಆಲಮಟ್ಟಿ: 15 ರಂದು ಹಳಕಟ್ಟಿ ಶಾಲೆಯ 64 ನೇ ವಾಷಿ೯ಕ ಸ್ನೇಹ ಸಮ್ಮೇಳನ

ಗುಲಾಬಚಂದ ಆರ್. ಜಾಧವಆಲಮಟ್ಟಿ : ಸ್ಥಳೀಯ ಎಸ್.ವ್ಹಿ.ವ್ಹಿ.ಸಂಸ್ಥೆಯ ರಾವಬಹದ್ದೂರ ಡಾ. ಫ.ಗು.(ಆರ್.ಬಿ.ಪಿ.ಜಿ) ಹಳಕಟ್ಟಿ ಪ್ರೌಢಶಾಲೆಯ 2021-22…

ಟ್ವೀಟರ್ ನಟ ರಜನಿಕಾಂತ ಟ್ವೀಟ್ ಅಳಿಸಿ ಹಾಕಿದ್ದು ಯಾಕೆ?

ಖ್ಯಾತ ನಟ ರಜನಿಕಾಂತ್ ಮಾಡಿದ ಟ್ವೀಟ್ ನ್ನು ಸ್ವತಃ ಟ್ವೀಕರ್ ಅಳಿಸಿ ಹಾಕಿದೆ. ಅವರ ಟ್ವೀಟ್ ಜಾಗದಲ್ಲೀಗ ಟ್ವೀಟರ್ ನಿಯಮ ಉಲ್ಲಂಘಿಸಿರುವುದರಿಂದ ಈ ಟ್ವೀಟ್ ಲಭ್ಯವಿಲ್ಲ ಎಂದು ಸೂಚಿಸಿದೆ. ಟ್ವೀಟ್ ಅಳಿಸಿ ಹಾಕಲಿ ಕಾರಣ ಏನು ಗೊತ್ತೆ?