ಬೆಂಗಳೂರು: ರಾಜ್ಯದ ರಾಜಕಾರಣದಲ್ಲಿ ಇತ್ತಿಚೆಗಿನ ಭಾರಿ ಬದಲಾವಣೆಗೆ ಮೂಲಕ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಿಎಂ ಪಟ್ಟ ದೊರಕಿಸಿಕೊಡಲು ಕಾರಣರಾದವರಲ್ಲಿ ಮಾಜಿ ಸಚಿವ ಎಚ್.ವಿಶ್ವನಾಥ್ ಕೂಡ ಒಬ್ಬರು. ಆದರೆ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಬಿಜೆಪಿ ಸೇರಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದ ವಿಶ್ವನಾಥ್ ಅವರಿಗೆ ಅದೃಷ್ಟ ಕೈಹಿಡಿಯಲಿಲ್ಲ. ಇದರಿಂದಾಗಿ ಅವರಿಗೆ ರಾಜಕೀಯ ಅಭದ್ರತೆಯಂತೂ ಕಾಡುತ್ತಿದೆ. ವಿಶ್ವನಾಥ್ ಕಾಂಗ್ರೆಸ್-ಜೆಡಿಎಸ್ ಗೆ ಗುಡ್ ಬೈ ಹೇಳಿ ಬಿಜೆಪಿಗೆ ವಲಸೆ ಬಂದು ಶಾಸಕರಾಗಿ ಆಯ್ಕೆಯಾಗಿದ್ದರೆ ಇದೀಗ ಬಿಜೆಪಿ ಸರ್ಕಾರದಲ್ಲಿ ಒಂದಲ್ಲ ಒಂದು ಹುದ್ದೆಯನ್ನು ಪಡೆದುಕೊಂಡಿರುತ್ತಿದ್ದರು. ಆದರೆ ರಾಜಕೀಯದ ಅದೃಷ್ಟದಾಟದಲ್ಲಿ ವಿಶ್ವನಾಥ್ ಹಿನ್ನಡೆ ಅನುಭವಿಸಿರುವುದರಿಂದ ಇದೀಗ ಅವರು ತಮ್ಮ ಅಸ್ತಿತ್ವಕ್ಕಾಗಿ ಪ್ರಯತ್ನಿಸಲೇಬೇಕಾದ ಅನಿವಾರ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಕಾರಣದಿಂದ ಇತ್ತಿಚಿನ ಬೆಳವಣಿಗೆಯನ್ನು ನೋಡಿದರೆ ವಿಶ್ವನಾಥ್ ಚಿತ್ತ ರಾಜ್ಯಸಭೆಯತ್ತ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಎಲ್ಲ ಕಾರಣಗಳಿಂದ ಶಿಘ್ರದಲ್ಲಿ ಬರಲಿರುವ ರಾಜ್ಯಸಭೆ ಚುನಾವಣೆಗೆ ಇನ್ನಷ್ಟು ಮಹತ್ವ ಬಂದಿದೆ ಎನ್ನಲಾಗಿದೆ

ಪರಿಷತ್ ಪ್ರವೇಶ ಅಸಾಧ್ಯ..!
ಈಗಾಗಲೇ ಬರಲಿರುವ ವಿಧಾನ ಪರಿಷತ್ ಹಾಗೂ ರಾಜ್ಯಸಭಾ ಚುನಾವಣೆಯಲ್ಲಿ ಆರಂಭದಲ್ಲಿ ವಿಶ್ವನಾಥ್ ಪರಿಷತ್ ಚುನಾವಣೆಗೆ ತೀವ್ರ ಆಸಕ್ತಿ ಹೊಂದಿದ್ದರು ಎನ್ನಲಾಗಿದೆ. ಮುಖ್ಯವಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಕೂಡ ಸರ್ಕಾರ ರಚನೆಗೆ ಸಹಾಯ ಮಾಡಿದವರ ಬಗ್ಗೆ ಒಲವು ಹೊಂದಿದ್ದಾರೆ ಎನ್ನಲಾಗಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಪರಿಷತ್ ಪ್ರವೇಶ ವಿಶ್ವನಾಥ್ ಅವರಿಗೆ ತುಸು ಪ್ರವಾಸ ಎನ್ನಲಾಗ್ತಿದೆ. ಪರಿಷತ್ ಚುನಾವಣೆಗೆ ಹೆಚ್ಚು ಪೈಪೋಟಿ ಇರುವ ಕಾರಣ ವಿಶ್ವನಾಥ್ ಅವರಿಗೆ ಟಿಕೇಟ್ ನೀಡಿದರೆ ಭಿನ್ನಮತ ಸ್ಪೋಟದ ಸಾದ್ಯತೆಯೇ ಹೆಚ್ಚು ಎನ್ನುವ ಲೆಕ್ಕಾಚಾರ ಬಿಜೆಪಿ ಮುಖಂಡರಲ್ಲೂ ಇದೆ. ಹೀಗಾಗಿ ಬಹುತೇಕ ಪರಿಷತ್ ಚುನಾವಣೆಗೆ ಸ್ಪರ್ಧಿಸುವ ಇರಾದೆಯಿಂದ ವಿಶ್ವನಾಥ್ ಹಿಂದೆ ಸರಿದಿದ್ದಾರೆ ಎಂಬ ಮಾತು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ರಾಜ್ಯಸಭೆಗೆ ಪೈಪೋಟಿ
ಇದೇ 19 ರಂದು ರಾಜ್ಯಸಭಾ ಚುನಾವಣೆ ನಡೆಯಲಿದ್ದು, ಸದ್ಯದ ಬಿಜೆಪಿಯ ಬಲಾಬಲದ ಪ್ರಕಾರ ಎರಡು ಸ್ಥಾನ ಪಡೆಯುವುದರಲ್ಲಿ ಯಾವುದೇ ಸಂದೇಹವಿಲ್ಲ. ಇದೀಗ ಮತ್ತೆ ರಾಜ್ಯಸಭೆಗೆ ಹೋಗಲು ಪ್ರಭಾಕರ ಕೋರೆ, ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿ, ವಾಮನಾಚಾರ್ಯ, ನಿರ್ಮಲ್ ಸುರಾನಾ ಇದ್ದಾರೆ. ಇವರ ಮದ್ಯೆ ಇದೀಗ ಎಚ್.ವಿಶ್ವನಾಥ್ ಹೆಸರು ಹೊಸ ಸೇರ್ಪಡೆಯಾಗಿದೆ. ಒಂದು ಮೂಲದ ಪ್ರಕಾರ ಇತ್ತಿಚಿನ ರಾಜಕೀಯ ಬೆಳವಣಿಗೆಯಲ್ಲಿ ಉಮೇಶ್ ಕತ್ತಿ ಬಗೆಗೆ ಸಿಎಂ ಬಿಎಸ್ವೈ ಅವರಿಗೆ ವೈಮನಸ್ಸು ಮೂಡಿದೆ. ಇತ್ತಿಚಿನ ಡಿನ್ನರ್ ಪಾಲಿಟಿಕ್ಸ್ ಪರಿಣಾಮವೇ ನಿನ್ನೆಯ ಬೆಳಗಾವಿ ಜಿಲ್ಲೆಗೆ ರಮೇಶ್ ಜಾರಕಿಹೊಳಿ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದ ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿ ಅವರಿಗೆ ಟಿಕೇಟ್ ಡೌಟ್ ಎನ್ನುವ ಮಾತುಗಳು ಕೇಳುತ್ತಿವೆ. ಸದ್ಯದ ಬಿಜೆಪಿ ಬಲಾಬಲದ ಪ್ರಕಾರ ಇಬ್ಬರನ್ನು ರಾಜ್ಯಸಭೆಗೆ ಕಳಹಿಸಬಹುದು. ಆದರೆ ಈ ಇಬ್ಬರಲ್ಲಿ ವಿಶ್ವನಾಥ್ ಕೂಡ ಒಬ್ಬರಾಗುವುದು ತುಸು ಪ್ರಯಾಸವೇ. ಆದರೆ ಅವರ ಬಗೆಗಿನ ಅನುಕಂಪ ವರ್ಕೌಟ್ ಆದರೂ ಆಗಬಹುದು ಎನ್ನಲಾಗುತ್ತಿದೆ. ಹೇಗಾದರೂ ಮಾಡಿ ರಾಜ್ಯಸಭೆಗೆ ಪ್ರವೇಶ ಪಡಿಯಲೇಬೇಕು ಎನ್ನುವ ಶತಾಯಗತಾಯ ಪ್ರಯತ್ನದಲ್ಲಿ ವಿಶ್ವನಾಥ್ ಇದ್ದಾರೆ ಎಂದು ತಿಳಿದುಬಂದಿದೆ. ದೆಹಲಿಯ ತಮ್ಮ ಆಪ್ತರ ಮೂಲಕ ಹೈಕಮಾಂಡ್ ಗಮನ ಸೆಳೆಯುವ ಪ್ರಯತ್ನವನ್ನು ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಹೈಕಮಾಂಡ್ ಒಲವು ಯಾರತ್ತ ಮೂಡಲಿದೆ ಎನ್ನುವುದು ಮಾತ್ರ ಕುತೂಹಲ.

ಮಿನೂ, ಬೆಂಗಳೂರು

Leave a Reply

Your email address will not be published. Required fields are marked *

You May Also Like

ಗದಗನಲ್ಲಿ ‌ಮತ್ತೊಂದು ಕೊರೊನಾ ಪಾಸಿಟಿವ್..!

ಜಿಲ್ಲೆಯ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಬೆಂಗಳೂರಿನಲ್ಲಿ ಪತ್ತೆಯಾಗಿದೆ. P-4079 ರೋಗಿ ಗದಗನ ನಗರದ ನಿವಾಸಿಯಾಗಿದ್ದು ಇತ್ತಿಚೆಗೆ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದು ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಚೀನಾ – ಭಾರತೀಯ ಸೈನಿಕರ ನಡುವೆ ಸಂಘರ್ಷ – 76 ಸೈನಿಕರಿಗೆ ಗಾಯ!

ಹೊಸದೆಹಲಿ: ಲಡಾಖ್‌ನ ಗಲ್ವಾನ್‌ ಕಣಿವೆ ಭಾರತ ಹಾಗೂ ಚೀನಾ ಸೈನಿಕರ ನಡುವೆ ನಡೆದ ಕಾಳಗದಲ್ಲಿ 76…

ಗಾಂಧಿ ಕುಟುಂಬದ 3 ಟ್ರಸ್ಟ್ ವ್ಯವಹಾರ ತನಿಖೆಗೆ ಆದೇಶಿಸಿದ ಕೇಂದ್ರ ಸರಕಾರ

ನವದೆಹಲಿ: ಗಾಂಧಿ ಕುಟುಂಬಕ್ಕೆ ಸಂಬಂಧಿಸಿದ ಮೂರು ಟ್ರಸ್ಟ್ ವ್ಯವಹಾರಗಳ ಕುರಿತು ತನಿಖೆಗೆ ಕೇಂದ್ರ ಗೃಹ ಇಲಾಖೆ ಬುಧವಾರ ತನಿಖೆಗೆ ಆದೇಶಿಸಿದೆ.

ಹಾವು ರಕ್ಷಕ ಡ್ಯಾನಿಯಲ್ ಗೆ ಕಚ್ವಿದ ಹಾವು: ಆಸ್ಪತ್ರೆಗೆ ದಾಖಲು

ಬಾಗಲಕೋಟೆ: ನಗರದ ಉರಗ ಪ್ರೇಮಿ ಹಾಗೂ ಹಾವು ರಕ್ಷಕ ಡ್ಯಾನಿಯಲ್ ನ್ಯೂಟನ್ ನಿಗೆ ಹಾವು ಕಚ್ಚಿದ್ದು…