ವಿಜಯಪುರ: ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆ ಸುರಿದಿದೆ. ವಿಜಯಪುರ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿದಿದ್ದು, ದ್ರಾಕ್ಷಿ, ಬಾಳೆ ಸೇರಿದಂತೆ ವಿವಿಧ ಬೆಳೆಗಳು ಹಾನಿಗೀಡಾಗಿವೆ.

ವಿಜಯಪುರ, ಬಸವನ ಬಾಗೇವಾಡಿ, ಮುದ್ದೇಬಿಹಾಳ, ಸಿಂದಗಿ ತಾಲೂಕು ಸೇರಿದಂತೆ ಜಿಲ್ಲೆಯಾದ್ಯಂತ ಹೆಚ್ಚಿನ ಮಳೆಯಾಗಿದೆ. ಆದರೆ ಹಲವು ಬೆಳೆಗಳು ಹಾನಿಗೀಡಾಗಿವೆ.

ಕಳೆದೆರಡು ದಿನಗಳಿಂದ ತಾಪಮಾನ ಹೆಚ್ಚಾಗಿತ್ತು. ಬಿಸಿಲಿನ ಬೇಗೆಯಲ್ಲಿ ಬೇಯುತ್ತಿದ್ದ ಜಿಲ್ಲೆಗೆ ಮಳೆರಾಯ ತಂಪೆರೆದಿದ್ದು, ತಂಪಿನ ವಾತಾವರಣ ನಿರ್ಮಾಣವಾಗಿದೆ. ಆದರೆ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥವಾಗಿದೆ. ದ್ರಾಕ್ಷಿ, ಬಾಳೆ, ಸೇರಿದಂತೆ ಇತರೆ ಬೆಳೆಗಳು ಹಾನಿಗೀಡಾಗಿದ್ದು, ರೈತರನ್ನು ಆತಂಕಕ್ಕೀಡು ಮಾಡಿದೆ. ಲಾಕ್ಡೌ ನ್ ನಿಂದ ಮೊದಲೇ ನಷ್ಟದಲ್ಲಿರುವ ರೈತರು ಮಳೆಯಿಂದಾಗಿ ಮತ್ತೆ ಅತಂತ್ರರಾಗಿದ್ದಾರೆ.

Leave a Reply

Your email address will not be published. Required fields are marked *

You May Also Like

ಡಿಎಸ್ಎಸ್ ಭೀಮವಾದ ಜಿಲ್ಲಾಧ್ಯಕ್ಷರಾಗಿ ದೇವರಾಜ ಉಳೇನೂರು ಆಯ್ಕೆ

ಉತ್ತರಪ್ರಭ ಕಾರಟಗಿ: ರಾಜ್ಯ ಅಧ್ಯಕ್ಷರಾದ ಆರ್.ಮೋಹನ್ ರಾಜ್, ರಾಜು.ಎಮ್.ತಳವಾರ ಅವರ ಆದೇಶದ ಮೇರೆಗೆ ಕರ್ನಾಟಕ ದಲಿತ…

ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ದಂಧೆ

ಲಕ್ಷ್ಮೇಶ್ವರ :ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ದಂಧೆ ನಡೆಯುತ್ತಿದ್ದು ಅಕ್ಕಿಯ ಲೋಡಿನ ಗಾಡಿಯನ್ನು…