ಬೆಂಗಳೂರು: ವಿಧಾನ ಪರಿಷತ್‍ ಚುನಾವಣೆಗೆ ಸ್ಪರ್ಧಿಸಿರುವ ಮಾಜಿ ಸಚಿವ ಎಂಟಿಬಿ ನಾಗರಾಜ್ ಅವರು ರೂ. 1,224 ಕೋಟಿ ಮೌಲ್ಯದ ಆಸ್ತಿ ಘೋಷಿಸಿದ್ದಾರೆ.
ವಿಧಾನಪರಿಷತ್ ಚುನಾವಣೆಗೆ ಬಿಜೆಪಿಯ ನಾಲ್ವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಸುನೀಲ್ ವಲ್ಯಾಪುರೆ, ಎಂಟಿಬಿ ನಾಗರಾಜ್, ಆರ್.ಶಂಕರ್ ಹಾಗೂ ಪ್ರತಾಪ್ ಸಿಂಹ ನಾಯಕ್ ನಾಮಪತ್ರ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಂಟಿಬಿ ನಾಗರಾಜ್ ಆಸ್ತಿ ಫೋಷಿಸಿಕೊಂಡಿದ್ದಾರೆ. ಎಂಟಿಬಿ ವಿರುದ್ಧ ಒಂದು ಪೊಲೀಸ್ ದೂರು ಇದೆ. ನಂದಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈ ಪ್ರಕರಣ ವಿಚಾರಣೆ ಹಂತದಲ್ಲಿದೆ.
ಎಂಟಿಬಿ ಹೆಸರಲ್ಲಿ ಒಟ್ಟು ರೂ. 884 ಕೋಟಿ ಆಸ್ತಿ, ಪತ್ನಿ ಹೆಸರಲ್ಲಿ ರೂ. 331 ಕೋಟಿ ಆಸ್ತಿ ಇದೆ ಎಂದು ಘೋಷಿಸಿದ್ದಾರೆ. ಎಂಟಿಬಿ ಹೆಸರಲ್ಲಿ ರೂ. 461 ಕೋಟಿ ಚರಾಸ್ತಿ, ರೂ. 416 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ. ಪತ್ನಿ ಶಾಂತಕುಮಾರಿ ಹೆಸರಿನಲ್ಲಿ ರೂ. 160 ಕೋಟಿ ಚರಾಸ್ಥಿ, ರೂ. 179 ಸ್ಥಿರಾಸ್ಥಿ ಇದೆ. ಅಲ್ಲದೇ, ಎಂಟಿಬಿ ರೂ. 2.23 ಕೋಟಿ ಮೌಲ್ಯದ ವಜ್ರ, ಪ್ಲಾಟಿನಂ, ಚಿನ್ನಾಭರಣ ಹೊಂದಿದ್ದಾರೆ.
ಎಂಟಿಬಿ ನಾಗರಾಜ್ ಬಳಿ ನಗದು ರೂ. 32.60 ಲಕ್ಷ ಇದೆ. ಎಂಟಿಬಿ ಪತ್ನಿ ಶಾಂತಕುಮಾರಿ ಬಳಿ ನಗದು ರೂ. 45.60 ಲಕ್ಷ ರೂ. ಇದೆ. ಅಲ್ಲದೇ ಎಂಟಿಬಿ ಬ್ಯಾಂಕ್ ಸೇವಿಂಗ್ಸ್ ಖಾತೆಯಲ್ಲಿ 20.26 ಕೋಟಿ ರೂ. ಇದೆ. ಬ್ಯಾಂಕ್ ಫಿಕ್ಸೆಡ್ ಡೆಪಾಸಿಟ್ ಮೊತ್ತ ರೂ. 144.41 ಕೋಟಿ ಇದೆ. ಪತ್ನಿ ಹೆಸರಿನಲ್ಲಿ ಬ್ಯಾಂಕ್ ಸೇವಿಂಗ್ಸ್ ರೂ. 11.21 ಕೋಟಿ, ಬ್ಯಾಂಕ್ ಫಿಕ್ಸೆಡ್ ಡೆಪಾಸಿಟ್ ರೂ. 34.08 ಕೋಟಿ ಇದೆ.
ಎಂಟಿಬಿ 52.75 ಕೋಟಿ ರೂ. ಸಾಲಗಾರ ಆಗಿದ್ದಾರೆ. ಪತ್ನಿ ಮಾಡಿರುವ ಸಾಲ 1.97 ಕೋಟಿ ರೂ. ಎಂದು ಆಸ್ತಿ ವಿವರದಲ್ಲಿ ಘೋಷಿಸಿಕೊಂಡಿದ್ದಾರೆ. ಎಂಟಿಬಿ ಬಳಿ ಲ್ಯಾಂಡ್ ರೋವರ್, ಮರ್ಸಿಡೀಸ್, ಟೊಯೋಟಾ ಮತ್ತು ಹುಂಡೈ ಕಂಪೆನಿಗಳ ಐಷಾರಾಮಿ ಕಾರುಗಳಿವೆ. ಕಾರುಗಳ ಒಟ್ಟು ಮೌಲ್ಯ 2.48 ಕೋಟಿ ರೂ. ಪತ್ನಿ ಬಳಿ ಇರುವ ಏಕೈಕ ಐಷಾರಾಮಿ ಕಾರು ಪಾರ್ಶ್ (ಪೋರ್ಶೆ), ಬೆಲೆ 1.72 ಕೋಟಿ ರೂ. ಆಗಿದೆ. ಇದಲ್ಲದೇ ಎಂಟಿಬಿ ಬಳಿ 54 ಎಕರೆ ಕೃಷಿ ಭೂಮಿ ಇದೆ. ಇದರ ಮಾರುಕಟ್ಟೆ ಮೌಲ್ಯ 29.86 ಕೋಟಿ ರೂ. ಆಗಿದೆ. ಪತ್ನಿ ಹೆಸರಲ್ಲಿ 4 ಎಕರೆ ಕೃಷಿ ಭೂಮಿ, ಇದರ ಮೌಲ್ಯ 26 ಕೋಟಿ ರೂ. ಆಗಿದೆ.

Leave a Reply

Your email address will not be published. Required fields are marked *

You May Also Like

ಗಾಂಧೀಜಿ ಪ್ರತಿಮೆ ದ್ವಂಸಗೊಳಿಸಿದ ಕಿಡಿಗೇಡಿಗಳು

ದೇಶದಲ್ಲಿ ಜ.30 ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಹುತಾತ್ಮರಾದ ದಿನ ಆಚರಿಸಲಾಗುತ್ತಿದ್ದು, ಅಮೇರಿಕದಲ್ಲಿ ಶನಿವಾರ ಮಹಾತ್ಮ ಗಾಂಧೀಜಿ ಅವರ ಕಂಚಿನ ಪ್ರತಿಮೆಯನ್ನು ದ್ವಂಸಗೊಳಸಿದ್ದಾರೆ.

ಮಳೆಗೆ ರಸ್ತೆ ಕುಸಿತ : ದುರಸ್ತೆಗೆ ಆಗ್ರಹ

ಮುಳಗುಂದ: ಸಮೀಪದ ನೀಲಗುಂದ ಹಾಗೂ ಅಂತೂರ ಬೆಂತೂರ ಗ್ರಾಮಗಳ ಮಧ್ಯೆ ಮಳೆಯಿಂದಾಗಿ ರಸ್ತೆ ಕುಸಿತವಾಗಿದ್ದು ಸುಗಮ ಸಂಚಾರಕ್ಕೆ ಅಡಿಯಾಗಿದೆ.

ವಲಸಿಗರ ರೈಲ್ವೇ ಪ್ರಯಾಣ ವೆಚ್ಚವನ್ನು ಕಾಂಗ್ರೆಸ್ ಭರಿಸಲಿದೆ: ಸೋನಿಯಾಗಾಂಧಿ

ಲಾಕ್ ಡೌನ್ ಹಿನ್ನೆಲೆಯಲ್ಲಿ ವಿವಿಧ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದ ವಲಸಿಗರ ರೈಲ್ವೆ ಪ್ರಯಾಣದ ವೆಚ್ಚವನ್ನು ಕಾಂಗ್ರೆಸ್ ಭರಿಸಲಿದೆ ಎಂದು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.

ಜೈಲುವಾಸದಿಂದ ಇಂದು ಶಶಿಕಲಾ ಬಿಡುಗಡೆ

ಕಳೆದ ೪ ವರ್ಷದಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧಿಯಾಗಿದ್ದ ತಮಿಳುನಾಡು ಮಾಜಿ ಸಿಎಂ ದಿ. ಜಯಲಲಿತಾ ಆಪ್ತೆ ಶಶಿಕಲಾ ಬಿಡುಗಡೆಯಾಗುವರು. ಕೊರೊನಾ ಸೋಂಕು ತಗುಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯಲ್ಲಿಯೇ ಪ್ರಕ್ರಿಯೆ ಪೂರ್ಣಗೊಳಿಸಲಿರುವ ಜೈಲ್ ಸಿಬ್ಬಂದಿ ಅವರನ್ನು ಬಿಡುಗಡೆ ಮಾಡಲಿದ್ದಾರೆ ತಿಳಿಸಿದೆ.