ದಾವಣಗೆರೆ: ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 100 ಗಡಿ ದಾಟಿದೆ. ಇವತ್ತು ಒಂದೇ ದಿನ 19 ಪಾಸಿಟೀವ್ ಪ್ರಕರಣ ಪತ್ತೆಯಾಗಿದ್ದು, ಇದರಿಂದ ದಾವಣಗೆರೆಯಲ್ಲಿ ಸೋಂಕಿತರ ಸಂಖ್ಯೆ 109ಕ್ಕೆ ಏರಿಕೆಯಾಗಿದೆ. ಓರ್ವ ಮೃತ ವೃದ್ದ, ಬೆಳ್ಳುಳ್ಳಿ ವ್ಯಾಪಾರಿ ಹಾಗೂ ನರ್ಸ್ ಹಾಗೂ ತಬ್ಲಿಘಿಗಳೇ ದಾವಣಗೆರೆಯಲ್ಲಿ ಕೊರೋನಾ ಸೋಂಕು ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ. ಪಿ-976 ಬೆಳ್ಳುಳ್ಳಿ ವ್ಯಾಪಾರಿಯಿಂದ ನಾಲ್ವರಿಗೆ ಸೋಂಕು ತಗುಲಿತ್ತು. ಪಿ-556 ಮೃತ ವೃದ್ದನ ದ್ವಿತೀಯ ಸಂಪರ್ಕ ಸೋಂಕಿತನಿಂದ 9 ಜನರಿಗೆ ಸೋಂಕು ತಗುಲಿತ್ತು. ಇನ್ನು ಐಎಲ್ಐ ಸೊಂಕಿತರಿಂದ ಒಬ್ಬರಿಗೆ ಸೋಂಕು ತಗುಲಿತ್ತು.
ಅಹಮದಾಬಾದ್ ನಿಂದ ಬಂದ ಇಬ್ಬರು ಪುರುಷರಿಗೆ , ಕೇರಳದಿಂದ ಬಂದ ಮಹಿಳೆಗೆ ಹಾಗೂ ನರ್ಸ್ ಪ್ರಕರಣದಿಂದ ಒಬ್ಬರಿಗೆ ಸೋಂಕು ತಗುಲಿದ್ದು, ಒಟ್ಟು 109 ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಇದರಿಂದ ದಾವಣಗೆರೆಯಲ್ಲಿ ಆತಂಕ ಸೃಷ್ಟಿಸಿದೆ.