ಬೆಂಗಳೂರು: ಸಾರ್ವಜನಿಕ ಲೆಕ್ಕ ಪತ್ರ ಸಮೀತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ಈಗಾಗಲೇ ವಿಧಾನಸಭಾಧ್ಯಕ್ಷರಿಗೆ ಸಭೆ ನಡೆಸುವ ಕುರಿತು ಪತ್ರ ಬರೆದಿದ್ದರೂ ಅವರ ಆಪ್ತ ಕಾರ್ಯದರ್ಶಿ ಇಷ್ಟು ದಿನವಾದ್ರು ಪತ್ರ ತಲುಪಿರಲಿಲ್ಲ ನಿನ್ನೆಯಷ್ಟೆ ಪತ್ರ ತಲುಪಿದೆ ಎಂದು ಜಾಣತನ ಪ್ರದರ್ಶಿಸಿದ್ದರು. ಆದರೆ ಈ ಕುರಿತು ಟ್ವೀಟ್ ಮಾಡಿರುವ ಅವರು ವಿಧಾನಸಭಾಧ್ಯಕ್ಷರ ಆಪ್ತ ಕಾರ್ಯದರ್ಶಿ ಅಮರನಾಥ್ ಅವರಿಗೆ ಅಷ್ಟೆ ಜಾಣತನದಿಂದ ಹಾಗೂ ಪರೋಕ್ಷವಾಗಿ ಸಭಾಧ್ಯಕ್ಷರಿಗೂ ಉತ್ತರ ನೀಡಿದಂತಾಗಿದೆ.

ಶಾಸಕ ಎಚ್ಕೆ ಪಾಟೀಲ್ ನೀಡಿದ ಉತ್ತರವೇನು?

ಇಂದು ಮುಂಜಾನೆ ಪತ್ರಿಕೆಯೊಂದರಲ್ಲಿ ಪ್ರಕಟವಾದ ತಮ್ಮ ಕಚೇರಿಯ ಸ್ಪಷ್ಟನೆ ನೋಡಿದೆ. ದಿನಾಂಕ: 10-06-2020 ರಂದು ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಅಧ್ಯಕ್ಷನಾದ ನಾನು ಮತ್ತು ಸಭಾಧ್ಯಕ್ಷರಾದ ತಮ್ಮೊಂದಿಗೆ ಸಭೆ ನಡೆಸಲು ಬರೆದ ಎರಡನೇ ಪತ್ರ ನೀಡಿದಾಗ, ಒಂದನೇ ಪತ್ರದ ಮೂಲಪ್ರತಿ, ಇಂದು ದಿನಾಂಕ 10-06-2020 ರಂದು ಮದ್ಯಾಹ್ನ 12-05ಕ್ಕೆ ತಲುಪಿದೆ ಎಂದು ಜಾಣತನದಿಂದ ತಮ್ಮ ಆಪ್ತ ಕಾರ್ಯದರ್ಶಿಯವರು ಪತ್ರಿಕಾ ಪ್ರಕಟಣೆ ನೀಡಿ ನಾನು 02-06-2020 ರಂದು ಬರೆದ ಪತ್ರವೇ ಮುಟ್ಟಿಲ್ಲ ಎಂಬ ಶಂಕೆ ಜನರಲ್ಲಿ ಹುಟ್ಟಿಸಲು ಪ್ರಯತ್ನಿಸಿದ್ದಾರೆ. ಏಕೆ ಈ ಪ್ರಯತ್ನ ಎನ್ನುವುದು ಅರ್ಥವಾಗಲಿಲ್ಲ. ತಮ್ಮ ಅಧಿಕೃತ ಇ-ಮೇಲ್ ಐಡಿಗೆ ಸಂಜೆ 6:43 ನಿಮಿಷಕ್ಕೆ ಪತ್ರ ಕಳುಹಿಸಲಾಗಿದೆ. ಅದರ ಸ್ಕ್ರೀನ್ ಶಾಟ್ ಕೂಡ ತಮ್ಮ ಪತ್ರದೊಂದಿಗೆ ಲಗತ್ತಿಸಿದೆ. ಅದೇ ದಿನ ತಮ್ಮ ಆಪ್ರ ಕಾರ್ಯದರ್ಶಿಯಾದ ಅಮರನಾಥ್ ಅವರ ಸಂಖ್ಯೆಗೂ ಸಹ ವಾಟ್ಸ್ ಅಪ್ ಮೂಲಕ ಕಳುಹಿಸಲಾಗಿದೆ. ತಲುಪಿರುವ ಬಗ್ಗೆ ದೂರವಾಣಿಯಲ್ಲಿ ಸಂಪರ್ಕಿಸಿ ಅವರಿಂದ ದೃಢಪಡಿಸಿಕೊಳ್ಳಲಾಗಿದೆ. ಜೊತೆಗೆ ಈ ಪತ್ರವನ್ನು ವಿಧಾನಸಭಾ ಸಚಿವಾಲಯದ ಕಾರ್ಯದರ್ಶಿಗಳಿಗೂ ಇಮೇಲ್ ಮೂಲಕ ಕಳುಹಿಸಲಾಗಿತ್ತು. ನನ್ನ 10-06-2020ರ ಪತ್ರ ತಲುಪಿದೆ ಎಂದು ಭಾವಿಸಿದೆ. ಆದಾಗ್ಯೂ ಸಭಾಧ್ಯಕ್ಷರ ಗಮನಕ್ಕೆ ಟ್ವೀಟರ್ ಮೂಲಕವೂ ಕೂಡ ಪತ್ರ ಹಾಗೂ ಗಂಭೀರವಾಗಿರುವ ದೂರು ಹಾಗೂ ಕೆಲವು ದಾಖಲಾತಿಗಳನ್ನು ಮಾತ್ರ ಕಳುಹಿಸಿರುವೆ ಎಂದು ಟ್ವೀಟ್ ಮಾಡಿದ್ದಾರೆ.

ಶಾಸಕ ಎಚ್ಕೆ ಪಾಟೀಲ್ ವಿಧಾನಸಭಾಧ್ಯಕ್ಷರಿಗೆ ಬರೆದ ಎರಡನೇಯ ಪತ್ರ

ಸಂಶಯಕ್ಕೀಡು ಮಾಡಿದ ವಿಧಾನಸಭಾ ಸಚಿವಾಲಯದ ನಡೆ

ಈಗಾಗಲೇ ಪಿಪಿಇ ಕಿಟ್ ಖರೀದಿಯಲ್ಲಿ ಭಾರಿ ಗೋಲ್ ಮಾಲ್ ಆಗಿರುವ ಬಗ್ಗೆ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ತನಿಖೆಗೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಎಚ್ಕೆ ಪಾಟೀಲ್ ಕೂಡ ಒತ್ತಾಯಿಸಿದ್ದರು. ಆದರೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತ್ರ ತನಿಖೆಗೆ ಆದೇಶಿಸಿರಲಿಲ್ಲ. ಇದರಿಂದ ವಿಧಾನಸಭಾಧ್ಯಕ್ಷರ ನಡೆ ವ್ಯಾಪಕ ಟೀಕೆ ಹಾಗೂ ಸಂಶಯಕ್ಕೂ ಕಾರಣವಾಗಿತ್ತು. ಆದರೆ ಇದೀಗ ಮತ್ತೆ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಎಚ್ಕೆ ಪಾಟೀಲ್ ಇದೇ ವಿಚಾರವಾಗಿ ಪತ್ರ ಬರೆದಾಗಲೂ ಅವರ ಆಪ್ತ ಕಾರ್ಯದರ್ಶಿ ತೋರಿದ ಜಾಣತನ ಜನರಿಗೆ ಗೌಪ್ಯವಾಗೇನು ಉಳಿದಿಲ್ಲ. ಈ ಜಾಣತನ ವಿಧಾನಸಭಾಧ್ಯಕ್ಷರ ಮೇಲೆ ಮತ್ತಷ್ಟು ಸಂಶಯಕ್ಕೂ ಕಾರಣವಾಗುವುದರಲ್ಲಿ ಸಂದೇಹವಿಲ್ಲ.

Leave a Reply

Your email address will not be published. Required fields are marked *

You May Also Like

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 576ಕ್ಕೆ ಏರಿಕೆ!

ರಾಜ್ಯದಲ್ಲಿ ಇಂದು ನೂತನವಾಗಿ 11 ಕೊರೊನಾ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ನಿಟ್ಟಿನಲ್ಲಿ ಸೋಂಕಿತರ ಸಂಖ್ಯೆ 576ಕ್ಕೆ ಏರಿಕೆ ಕಂಡಿದೆ. ಈ ಪೈಕಿ 22 ಜನ ಸಾವನ್ನಪ್ಪಿದ್ದಾರೆ.

ಪಂಚಮಸಾಲಿ 2ಎಗೆ ಸೇರಿಸಿದರೆ ಇತರೆ ಜಾತಿಗಳ ವಿರೋಧವೇಕೆ?

ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಪ್ರವರ್ಗ 2ಎ ಅಡಿ ಮೀಸಲಾತಿ ಸೌಲಭ್ಯ ನೀಡುವುದಕ್ಕೆ ಇದೇ ಪ್ರವರ್ಗದಡಿ ಬರುವ ಇತರೆ ಜಾತಿಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.

ನಾಳೆ ಮದುವೆ ಇತ್ತು: ಆದ್ರೆ ಇಂದು ವಧುವಿನ ತಂದೆ, ತಂಗಿಗೆ ಸೋಂಕು ಪತ್ತೆ..!

ಯಾದಗಿರಿ: ಕೊರೊನಾ ವೈರಸ್, ಈಗ ಜಿಲ್ಲೆಯ ಮದುವೆ ಮನೆಯೊಂದರ ಬಾಗಿಲಿಗೆ ತೆರಳಿದೆ. ನಾಳೆ ಮದುವೆಯಾಗಬೇಕಿದ್ದ ವಧುವಿನ…