ಉತ್ತರಪ್ರಭ
ಆಲಮಟ್ಟಿ: ದಿನದ 24 ಗಂಟೆಯಲ್ಲಿ ಎಷ್ಟು ಕಾಲ ಓದ್ತಿರಾ, ಟಿವಿ ನೋಡ್ತಿರಾ, ಹರಟೆ ಹೋಡ್ತಿರಾ, ನಿದ್ದೆ ಮಾಡ್ತಿರಾ, ಬೆಳಿಗ್ಗೆ ಯಾವಾಗ ಏದ್ದೆಳ್ತಿರಾ, ಶಾಲೆಯಲ್ಲಿ ಎಷ್ಟು ಗಂಟೆ ಇತಿ೯ರಾ, ಸಿರಿಯಲ್ ಎಷ್ಟು ಜನ ನೋಡ್ತಿರಾ, ಯಾವ ಯಾವ ಧಾರವಾಹಿಗಳನ್ನು ವೀಕ್ಷಿಸುತ್ತಿರಾ ???

ಇಂಥ ಸಹಜ ಪ್ರಶ್ನೆಗಳು ಮಕ್ಕಳ ಎದುರಿಗೆ ಒಂದರ ಮೇಲೆ ಒಂದರಂತೆ ತೇಲಿ ಬಂದವು ! ಅರೇ ಇವೆಲ್ಲ ಅನಗತ್ಯ ಪ್ರಶ್ನೆಗಳು ನಮಗೆಕೆ ಎಂದು ಕೆಲ ಮಕ್ಕಳು ಸುಮ್ಮನೆ ಕುಳಿತುಕೊಂಡಿದ್ದರೆ ಶಾಸಕರ ಕೈಯಲ್ಲಿ ಸಿಲುಕಿದ ಕೆಲ ವಿದ್ಯಾರ್ಥಿನಿಯರು ತಡವರಿಸುತ್ತಾ ಉತ್ತರ ನೀಡುವಂಥ ಪ್ರಸಂಗ ಎದುರಾಗಿತ್ತು!
ಹೌದು! ಈ ಪರಿ ವಿಲಕ್ಷಣ ನೋಟ ಉಚಿತ ನೋಟ ಬುಕ್ ವಿತರಣಾ ಸಮಾರಂಭದಲ್ಲಿ ಕಂಡು ಬಂತು !
ಇಲ್ಲಿನ ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆಯಲ್ಲಿ ಆಯೋಜನೆಗೊಂಡಿದ್ದ ಉಚಿತ ನೋಟಬುಕ್ ವಿತರಣಾ ಕಾರ್ಯಕ್ರಮದಲ್ಲಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಮಕ್ಕಳ ಜೊತೆಗೆ ನೇರವಾಗಿ ಸಂವಾದಕ್ಕಿಳಿದು ಶಿಕ್ಷಣ ಬಗೆಗಿನ ತಮ್ಮ ಕಳಕಳಿ ಸಾದರ ಪಡಿಸಿದರು!
ಡಾ.ಫ.ಗು.ಹಳಕಟ್ಟಿ ಜನ್ಮ ದಿನದ ನಿಮಿತ್ಯ ಏಪಾ೯ಟಾಗಿದ್ದ ಭಾಷಣ ಸ್ಪಧೆ೯ವಿಜೇತ ಮಕ್ಕಳಿಗೆ ಪ್ರಶಸ್ತಿ ಪ್ರಮಾಣಪತ್ರ ವಿತರಿಸಿ ಆ ಮಕ್ಕಳ ಕೈಯಲ್ಲಿ ಮೈಕ್ ಕೊಟ್ಟು ವೇದಿಕೆಯಲ್ಲಿ ಮಕ್ಕಳ ಕೌಶಲ್ಯ ಸಾಮಥ್ರ್ಯ ಅರಿಯಲು ಮುಂದಾದರು. ಈ ವಿದ್ಯಾರ್ಥಿನಿಯರು ಸೇರಿದಂತೆ ಅಲ್ಲಿದ್ದ ಎಲ್ಲ ಮಕ್ಕಳಿಗೆ ಪ್ರಶ್ನೆಗಳ ಸುರಿಮಳೆ ಗೈದು ಉತ್ತರ ಪಡೆಯಲು ಶಾಸಕರು ಯತ್ನಿಸಿದರು.ವಿದ್ಯಾರ್ಥಿಗಳೊಂದಿಗೆ ಮನಸ್ಸು ಬಿಚ್ಚಿ ಮಾತನಾಡಿದರು! ಭಾಷಣ ಸ್ಪಧೆ೯ಯಲ್ಲಿ ಪ್ರಶಸ್ತಿ ಪಡೆದಿರುವ ಇಲ್ಲಿನ ಪ್ರತಿಭೆಗಳು ಮೆಡಿಕಲ್ ಗೆ ಆಯ್ಕೆಗೊಂಡರೆ ಕಾಲೇಜು ಪ್ರವೇಶ ಫೀ ಎಲ್ಲವನ್ನೂ ತಾವು ಭರಿಸುವುದಾಗಿ ಭರವಸೆ ನೀಡಿದರು.
ಪ್ರಶಸ್ತಿ ಪಡೆದ ವಿದ್ಯಾರ್ಥಿನಿಯರಿಗೆ ಜೀವನದಲ್ಲಿ ಏನು ಸಾಧನೆ ಮಾಡಬೇಕು ಎಂದಿದ್ದಿರಾ ಎಂದು ಶಾಸಕರು ಕೇಳಿದಾಗ ಬಹುತೇಕ ವಿದ್ಯಾರ್ಥಿನಿಯರು ವೈದ್ಯರಾಗಿ ಬಡರೋಗಿಗಳ ಸೇವೆ ಮಾಡುವ ಇಂಗಿತ ವ್ಯಕ್ತಪಡಿಸಿದರು. ಓರ್ವ ವಿದ್ಯಾರ್ಥಿನಿ ಶಿಕ್ಷಕಿಯಾಗುವ ಅಪೇಕ್ಷೆ ವ್ಯಕ್ತಪಡಿಸಿದಾಗ ಸಾದಾ ಶಿಕ್ಷಕಿಯಾಗಬೇಡ ಹೆಸರುವಾಸಿ ಶಿಕ್ಷಕಿಯಾಗಿ ಘನತೆ ಗೌರವ ಹೆಚ್ಚಿಸಿಕೊಳ್ಳಬೇಕೆಂದರು. ಓದು ಬರಹದ ಕಠಿಣ ಪರಿಶ್ರಮ ಶ್ರದ್ಧೆ ಆಸಕ್ತಿ ಹೊಂದಿದ್ದರೆ ಮಾತ್ರ ನಿಮ್ಮ ಕನಸುಗಳು ನಿಲುಕ ಬಲ್ಲವು ಎಂದು ಶಾಸಕರು ಸಲಹೆ ನೀಡಿದರು.
ಮನೆಯಲ್ಲಿ ಕನಿಷ್ಟ ಪಕ್ಷ 4 ಗಂಟೆಯಾದರು ಓದಬೇಕು. ಓದಾಸಕ್ತಿ ಬೆಳಿಸಿಕೊಂಡು ಸಾಧನೆಯ ಮೆಟ್ಟಿಲು ಹತ್ತುವ ಪ್ರಯತ್ನ ಮಾಡಬೇಕು. ಓದಿನ ಅಭಿರುಚಿ ಹುರುಪು ಉತ್ಸಾಹದಿಂದ ಕೂಡಿರಲಿ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಪರಿಶುದ್ಧ ಮನಸ್ಸು, ಅಂತರ್ಮಖಿಯ ಭಾವನೆ ಯಶಸ್ಸು ಕೊಡಬಲ್ಲವು. ಜೀವನದಲ್ಲಿ ನಿದಿ೯ಷ್ಟ ಗುರಿ, ಸ್ಪಷ್ಟ ಆಲೋಚನೆ, ಉನ್ನತ ವಿಚಾರ ಇಟ್ಟುಕೊಂಡು ಸಾಗಿ. ಪ್ರಾಮಾಣಿಕತೆ, ನೈತಿಕತೆ ಅಳವಡಿಸಿಕೊಳ್ಳಿ. ದೃಢ ಸಂಕಲ್ಪ, ಕಠಿಣ ಪರಿಸ್ಥಿತಿ ಎದುರಿಸುವ ಆತ್ಮ ಮನೋಬಲ ಹೆಚ್ಚಿಸಿಕೊಳ್ಳಿ. ಶಿಕ್ಷಣದಿಂದಲೇ ಸುಂದರ ಭವಿಷ್ಯ. ಆ ದಿಸೆಯಲ್ಲಿ ಎಲ್ಲರೂ ಶಿಕ್ಷಣಕ್ಕೆ ಮಹತ್ವ ನೀಡಿ. ಕಲಿಕೆಯ ಛಲ ಅವಿರತವಾಗಿರಲಿ. ಶೈಕ್ಷಣಿಕ ಪ್ರಗತಿ ಹೊಂದಿ ಉನ್ನತ ಹುದ್ದೆ ಅಲಂಕರಿಸಿ. ಕೈಲಾದ ಮಟ್ಟಿಗೆ ಬಡವರಿಗೆ ನೆರವಾಗಿ ಸಮಾಜಸೇವೆ ಮಾಡಿ ಜೀವನ ಸಾರ್ಥಕತೆ ಪಡಿಸಿಕೊಳ್ಳಿ ಎಂದು ಮಕ್ಕಳಿಗೆ ಭಾವನಾತ್ಮಕ ಸಲಹೆ ಶಾಸಕರು ನೀಡಿದರು.
ಮಹಾನಾಯಕ ಧಾರವಾಹಿ ನೋಡಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಚರಿತ್ರೆವುಳ್ಳ ಮಹಾನಾಯಕ ಸೀರಿಯಲ್ ತಪ್ಪದೇ ಎಲ್ಲರೂ ನೋಡಿ. ಬೇರೆ ಟಿವಿ ಸೀರಿಯಲ್ ನೋಡಬೇಡಿ. ಅವು ಎಲ್ಲವೂ ಬಹುತೇಕ ಮನೆ ಮುರುಕು ಸೀರಿಯಲ್ ಗಳಾಗಿವೆ ಎಂದು ಶಾಸಕ ನಡಹಳ್ಳಿ ವಾಸ್ತವಿಕ ಚಿತ್ರಣ ಮಕ್ಕಳೆದುರಿಗೆ ಬಿಚ್ಚಿಟ್ಟರು. ಶಾಸಕರ ಸಲಹೆಗಳಿಗೆ ವಿದ್ಯಾರ್ಥಿ ಸಮೂಹ ತಲೆ ದೂಗಿದರು.