ಗಜೇಂದ್ರಗಡ: ರೈತ, ಕಾರ್ಮಿಕ, ವಿದ್ಯುತ್, ಎಪಿಎಂಸಿ ಕಾಯ್ದೆ, ಬೆಲೆ ನಿಯಂತ್ರಣ ಕಾಯ್ದೆ, ಭೂ ಸುಧಾರಣೆ ಕಾಯ್ದೆ ಸೇರಿದಂತೆ ಜನ ವಿರೋದಿ ನೀತಿ ಖಂಡಿಸಿ ರಾಷ್ಟ್ರವ್ಯಾಪಿ, ಕಾರ್ಮಿಕ, ರೈತ ಹಾಗೂ ವಿವಿಧ ಸಂಘಟನೆಗಳು ಕರೆ ನೀಡಿರುವ ಮುಷ್ಕರದ ಅಂಗವಾಗಿ ಗದಗ ಜಿಲ್ಲೆ ಗಜೇಂದ್ರಗಡದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಶ್ರೀ ಕಾಲಕಾಲೇಶ್ವರ ವೃತ್ತದಲ್ಲಿ ರಸ್ತೆ ತಡೆದು ಮಾನವ ಸರಪಳಿ ರಚಿಸಿ ಕೇಂದ್ರ ಸರ್ಕಾರದ ವಿರುದ್ಧ ವಿವಿಧ ಸಂಘಟನೆ ಕಾರ್ಯಕರ್ತರು ಗುರುವಾರ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಶದ ಬಹುಸಂಖ್ಯಾತ ಜನರ ಬದುಕಿಗೆ ತೀವ್ರ ಧಕ್ಕೆ ತರುವ ನೀತಿಗಳನ್ನು ಜಾರಿಗೆ ತರುತ್ತಿದೆ. ಇದು ದೇಶದ ಸಾರ್ವಭೌಮತ್ವಕ್ಕೆ ಕೊಡಲಿ ಪೆಟ್ಟು ನೀಡುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿರುವ ಬಿಜೆಪಿ ಸರ್ಕಾರ, ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಸರ್ವಾಧಿಕಾರ ಆಡಳಿತ ನಡೆಸುತ್ತಿರುವುದು ನಾಚಿಕಗೆಡಿನ ಸಂಗತಿಯಾಗಿದೆ ಎಂದು ಪ್ರತಿಭಟನಾಕಾರರು ಈ ವೇಳೆ ಆಕ್ರೋಶ ವ್ಯಕ್ತಪಡಿಸಿದರು.

ಮುಷ್ಕರ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಕಾರ್ಮಿಕ ಸಂಘಟನೆಗಳು ಗಜೇಂದ್ರಗಡ ಶ್ರೀ ಕಾಲಕಾಲೇಶ್ವರ ವೃತ್ತದಲ್ಲಿ ರಸ್ತೆ ತಡೆದು ಮಾನವ ಸರಪಳಿ ರಚಿಸಿ, ಪ್ರತಿಭಟನೆಗೆ ಮುಂದಾದರು. ಈ ವೇಳೆ ರಸ್ತೆ ತಡೆಗೆ ಪೊಲೀಸರು ವಿರೊಧ ವ್ಯಕ್ತಪಡಿಸಿದರು. ಸಂಚಾರಕ್ಕೆ ತೊಂದರೆಯಾಗುತ್ತದೇ ಕೇವಲ ತಹಶೀಲ್ದಾರರಿಗೆ ಮನವಿ ನೀಡಿ ಎಂದು ಪೊಲೀಸರು ಹೋರಾಟಗಾರರಿಗೆ ತಿಳಿಸಿದರು. ಇದರಿಂದ ಕೆಲಕಾಲ ಪ್ರತಿಭಟನಾಕಾರರು ಹಾಗೂ ಪೊಲೀಸರ ಮದ್ಯೆ ಮಾತಿನ ಚಕಮಕಿ ನಡೆಯಿತು.

ದೇಶ ಆರ್ಥಿಕ ದಿವಾಳಿಯಾಗಲು ಮೋದಿ ಸರ್ಕಾರ ಕಾರಣವಾಗಿದ್ದು, ಸರ್ಕಾರಿ ಸ್ವಾಮ್ಯದ ಎಲ್ಲ ಕಂಪನಿಗಳನ್ನು ಬಂಡವಾಳಶಾಹಿಗಳಿಗೆ ಮಾರಾಟ ಮಾಡುತ್ತಿದ್ದು, ಇಡೀ ದೇಶದ ಆರ್ಥಿಕ ವ್ಯವಸ್ಥೆಗೆ ಕೊಡಲಿ ಪೆಟ್ಟು ನೀಡುತ್ತಿದ್ದಾರೆ. ಕಾರ್ಮಿಕ ವಿರೋಧಿ ಕಾನೂನುಗಳನ್ನು ಜಾರಿಗೆ ತರುವ ಮೂಲಕ ರೈತ ವಿರೋಧಿ ಧೋರಣೆಯನ್ನು ಅನುಸರಿಸುತ್ತಿದ್ದು, ಕೂಡಲೇ ಈ ಎಲ್ಲ ಜನ ವಿರೋಧಿ ನೀತಿಗಳನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಬೆಂಬಲ

ಪ್ರತಿಭಟನೆಗೆ ಕಾಂಗ್ರೆಸ್ ಪಕ್ಷ ಬೆಂಬಲ ವ್ಯಕ್ತಪಡಿಸಿ, ದೇಶದಲ್ಲಿ ಬಿಜೆಪಿ ಪಕ್ಷ ಧರ್ಮಾಧಾರಿತ ಆಡಳಿತ ನಡೆಸುತ್ತಿದೆ. ದೇಶದ ಜನರ ಭಾವನೆಗಳನ್ನು ದುರುಪಯೋಗ ಪಡಿಸಿಕೊಂಡು ಸ್ವಾರ್ಥ ರಾಜಕಾರಣ ಮಾಡುತ್ತಿರುವುದು ಮನುಕುಲಕ್ಕೆ ಮಾರಕವಾಗಿದೆ. ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ತನ್ನ ಕರಾಳ ಮುಖವನ್ನು ಜನತೆಯ ಮುಂದೆ ಬಿಚ್ಚಿಟಿದೆ. ಭೂಸುಧಾರಣೆ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆಗಳನ್ನು ತಿದ್ದುಪಡಿ ಮಾಡುವ ಮೂಲಕ ರೈತ, ಕಾರ್ಮಿಕರನ್ನು ಬೀದಿಗೆ ತಂದಿದೆ. ಸರ್ವಾಧಿಕಾರಿ ಧೋರಣೆಯ ಮೂಲಕ ರಾತ್ರೋರಾತ್ರಿ ಕಾಯ್ದೆಗಳನ್ನು ಆಡಳಿತರೂಢ ಬಿಜೆಪಿ ಜನರ ಮೇಲೆ ಬಲವಂತವಾಗಿ ಹೇರಲು ಮಂದಾಗಿರುವುದು ಖಂಡನೀಯ ಎಂದರು ಕಿಡಿಕಾರಿದರು.

ನಂತರ ತಹಶಿಲ್ದಾರರ ಕಾರ್ಯಾಲಯದಿಂದ ಆರಂಭವಾದ ಪ್ರತಿಭಟನಾ ರ‍್ಯಾಲಿ ಜೋಡು ರಸ್ತೆ ಅಂಬೇಡ್ಕರ್ ವೃತ್ತ, ದುರ್ಗಾ ವೃತ್ತ ಮಾರ್ಗವಾಗಿ ಶ್ರೀ ಕಾಲಕಾಲೇಶ್ವರ ವೃತ್ತ ತಲುಪಿತು. ಬಳಿಕ ಮಾನವ ಸರಪಳಿ ರಚಿಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ವೀರಣ್ಣ ಸೊನ್ನದ, ಎಂ.ಎಸ್.ಹಡಪದ, ಶಿವರಾಜ ಘೋರ್ಪಡೆ, ಬಾಲು ರಾಠೋಡ, ಬಿ.ಎಸ್.ಶೀಲವಂತರ, ಮುರ್ತುಜಾ ಡಾಲಾಯತ್, ಬಸವರಾಜ ಬಂಕದ, ಶಶಿಧರ ಹೂಗಾರ, ಹಸನ ತಟಗಾರ, ಚಂದ್ರು ರಾಠೋಡ, ಮೆಹಬೂಬ ಹವಾಲ್ದಾರ್, ದಾವಲಭಿ ಅಬ್ಬಿಗೇರಿ, ನಾಗನಗೌಡ ಗೌಡ್ರ, ಶಾಂತಣ್ಣ ಸಜ್ಜನರ, ಲಿಂಗಯ್ಯ ಮಾಸ್ತಕಟ್ಟಿ, ಗಂಗಯ್ಯ ಬೆನಹಾಳ, ಶಾಂತಮ್ಮ, ಗಿರೀಜಾ ರಾಠೋಡ, ನೀಲಮ್ಮ ಹಿರೇಮಠ, ಆರ್.ಎಸ್. ಗದಗಿನಮಠ, ಎಸ್.ಸಿ. ಇಂಡಿ, ಎಸ್.ಎಸ್.ಗುರಿಕಾರ, ಎಸ್.ಎಸ್ ನಾರಾಯಣಕಾರಣ ಎಸ್.ಎಫ್.ರಾಠೋಡ, ಡಿ.ಎಸ್.ಹಿರೇಮಠ, ಕೆ.ಎ.ಕುಸುಗಲ್ಲ, ಪವಿತ್ರ ಡೊಳ್ಳಿನ ವಿರೇಶ ಬೆನಹಾಳ, ಎಸ್.ಡಿ. ಸುಬೇದಾರ, ಕನಕಮ್ಮ ಮಾದರ, ಸುವರ್ಣಾ ಚಿಗರಿ, ಸುನಿತಾ ಪೂಜಾರ ಪಾಲ್ಗೊಂಡಿದ್ದರು.

1 comment
Leave a Reply

Your email address will not be published. Required fields are marked *

You May Also Like

ಪತ್ನಿಯ ಗುಪ್ತಾಂಗಕ್ಕೆ ಬೆಂಕಿ ಹಚ್ಚಿದ ಪಾಪಿ!

ಬೆಂಗಳೂರು : ತನ್ನನ್ನೇ ಸರ್ವಸ್ವ ಎಂದು ನಂಬಿಕೊಂಡು ಬಂದಿದ್ದ ಪತ್ನಿಗೆ, ಪಾಪಿಯೊಬ್ಬ ಅಮಾನವೀಯವಾಗಿ ನಡೆದುಕೊಂಡಿದ್ದಾನೆ.

ಉಪಹಾರಕ್ಕೆ ಸೀಮಿತವಾದ ಬಜೆಟ್ ಮಂಡನೆ ಪೂರ್ವಭಾವಿ ಸಭೆ

ಉತ್ತರಪ್ರಭ ಸುದ್ದಿ ನರೆಗಲ್ಲ: ಪಟ್ಟಣ ಪಂಚಾಯತಿಯಲ್ಲಿ ಶುಕ್ರವಾರ ನಡೆಯಬೆಕಿದ್ದ ಬಜೆಟ್ ಮಂಡನೆ ಪೂರ್ವಭಾವಿ ಸಬೆಗೆ ಮುಖ್ಯಾಧಿಕಾರಿ…

ಮಹಿಳಾ ನರ್ಸ್ ಚಿಕಿತ್ಸೆ ನೀಡುವಂತೆ ಆಸ್ಪತ್ರ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಯುವಕರು

ಅಪಘಾತದಲ್ಲಿ ತಮಗೆ ಗಾಯವಾಗಿದೆ ಎಂದು ಆಸ್ಪತ್ರೆಗೆ ಆಗಮಿಸಿದ ಇಬ್ಬರು ನಮಗೆ ಮಹಿಳಾ ನರ್ಸ್ ಚಿಕಿತ್ಸೆ ನಿಡಬೇಕು ಎಂದು ಆಸ್ಪತ್ರೆಯ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದಾರೆ.

ದಲಿತರ ಮೀಸಲಾತಿ ಕಸಿಯಲು ಯತ್ನಿಸುತ್ತಿದ್ದಾರೆ ; ಲಲಿತಾ

ಕುರುಬರ ಎಸ್ಟಿಷ ಮೀಸಲಾತಿಗಾಗಿ ಹೋರಾಡುತ್ತಾ ದಲಿತರ ಮೀಸಲಾತಿ ಹಕ್ಕುಗಳನ್ನು ಕಸಿಯಲು ಯತ್ನಿಸುತ್ತಿದ್ದಾರೆ ಎಂದು ಲೇಖಕಿ ಬಿ.ಟಿ.ಲಲಿತಾ ನಾಯಕ್ ಆರೋಪಿಸಿದರು.