ಬೆಂಗಳೂರು: ಕನ್ನಡಪರ ಹೋರಾಟಗಾರ, ಕನ್ನಡ ಚಳುವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಬಿಜೆಪಿ ಸೇರ್ತಾರಾ..? ಹೀಗೊಂದು ಪ್ರಶ್ನೆ ಇದೀಗ ಉದ್ಭವವಾಗಿದೆ. ಇತ್ತಿಚೆಗೆ ಅವರು ಸಂಸದ ಶ್ರೀನಿವಾಸ್ ಪ್ರಸಾದ್ ಅವರನ್ನು ಭೇಟಿ ಮಾಡಿದ ವಿಚಾರ ಇಂಥ ಹಲವು ಸಂದೇಹಗಳಿಗೆ ಎಡೆಮಾಡಿಕೊಟ್ಟಿತ್ತು.

ಆದರೆ ಈ ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ವಾಟಾಳ್ ನಾಗರಾಜ್ ನಾನು ಮತ್ತು ಶ್ರೀನಿವಾಸ್ ಪ್ರಸಾದ್ 40 ವರ್ಷದ ಸ್ನೇಹಿತರು. ಹೀಗಾಗಿ ಅವರ ಅರೋಗ್ಯ ವಿಚಾರಿಸಲು ಹೋಗಿದ್ದೆ ಅಷ್ಟೇ ಎಂದಿದ್ದಾರೆ. ಆದರೆ ಇವರು ಇದೇ ವೇಳೆ ಬಿಜೆಪಿ ಪಕ್ಷ ನನಗೆ ಎಂ.ಎಲ್.ಸಿ ಮಾಡಿದರೆ ಬಿಜೆಪಿಗೆ ಶಕ್ತಿ ಮತ್ತು ಗೌರವ ಬರುತ್ತದೆ. ಇದರಿಂದ ರಾಜ್ಯದ ಜನ ಅವರನ್ನು ಮೆಚ್ಚುತ್ತಾರೆ. ನಾನು ಯಾರನ್ನು ಎಂಎಲ್ಸಿ ಮಾಡಿ ಎಂದು ಕೇಳಿಲ್ಲ. ನಾನು 5 ಭಾರಿ  ಶಾಸಕನಾಗಿದ್ದೇನೆ. ಹೀಗಾಗಿ ನನ್ನನ್ನು ಎಂಎಲ್ಸಿ ಮಾಡಿದರೆ ಬಿಜೆಪಿಗೆ ಗೌರವ ಬರುತ್ತದೆ. ಆದರೆ ಈ ವಿಚಾರ ಅವರಿಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ.

ಹಾಗಾದರೆ ವಾಟಾಳ್ ನಾಗರಾಜ್ ಅವರ ಮಾತಿ ಒಳ ಅರ್ಥ ಏನು ಎನ್ನುವುದು ಪ್ರಶ್ನೆಗೆ ಗ್ರಾಸವಾಗಿದೆ. ವಾಟಾಳ್ ಬಿಜೆಪಿಯಿಂದ ಎಂಎಲ್ಸಿ ಆಗುವ ಇರಾದೆ ಹೊಂದಿದ್ದಾರೆಯೇ? ಎನ್ನುವ ಚರ್ಚೆಗೆ ಇವರ ಮಾತುಗಳೇ ಪುಷ್ಟಿ ನೀಡುವಂತಿವೆ.  

ಮುಂದುವರೆದು ಮಾತನಾಡಿದ ಅವರು ಎಂಎಲ್ಸಿ ಚುನಾವಣೆಗೆ ನಾನು ಸ್ಪರ್ಧೆ ಮಾಡುತ್ತೇನೆ. ಗುಲ್ಬರ್ಗ ಈಶಾನ್ಯ ಪದವೀಧರ ಕ್ಷೇತ್ರ ಹಾಗೂ ಬೆಂಗಳೂರು ಪದವೀಧರ ಕ್ಷೇತ್ರದಿಂದ ಒತ್ತಾಯ ಇದೆ. ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎಂದು ನಿರ್ಧಾರಿಸಿಲ್ಲ. ಆದರೆ ಚುನಾವಣೆ ಸ್ಪರ್ಧೆ ಮಾತ್ರ ಶತಸಿದ್ಧ ಎಂದಿದ್ದಾರೆ. ಕೊನೆಗೆ ಮೂರು ಜನ್ಮ ಕಳೆದರೂ ನಾನು ಬಿಜೆಪಿ ಸೇರಲ್ಲ ಎಂದು ಹೇಳುವ ಮೂಲಕ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತಾಡಿದ್ದಾರೆ.

Leave a Reply

Your email address will not be published. Required fields are marked *

You May Also Like

ಇಲಿಗಳೂ ಸಾರಾಯಿ ಕುಡಿಯುತ್ತವೆ.

ಆ ಟ್ಯೂಬ್ ನಲ್ಲಿ ಇದ್ದ ಸಾರಾಯಿಯನ್ನು ಮುದ್ದೆ ಮಾಲು ಕೊಠಡಿಯಲ್ಲಿ ಇದ್ದ ಇಲಿಗಳು ಕುಡಿದಿವೆ ಅಂತ ಹೇಳಿದ. ಆ ಕೊಠಡಿಯಲ್ಲಿ ಇಲಿ ಇದ್ದದ್ದು ನಿಜ ಆದರೆ ಇಲಿ ಸಾರಾಯಿ ಕುಡಿದಿದ್ದು ಯಾರು ಗಮನಿಸಿಲ್ಲ. ಆದರೂ ಇಲಿ ಸಾರಾಯಿ ಕುಡಿದಿದ್ದು, ನಿಜ..!

ಮೋದಿ ಸರ್ಕಾರಕ್ಕೆ 2ನೇ ವರ್ಷದ ಸಂಭ್ರಮ: ಶುಭ ಕೋರಿದ ಯಡಿಯೂರಪ್ಪ

ಬೆಂಗಳೂರು: ತ್ರಿವಳಿ ತಲಾಖ್, 370ವಿಧಿ ರದ್ದು, ಪೌರತ್ವ ತಿದ್ದುಪಡಿ, ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ವೇದಿಕೆ, ಸುಧಾರಣಾ…

ಕೊರೊನಾ ಗರ್ಭಿಣಿಯ ಗರ್ಭಪಾತ ಯಶಸ್ವಿ!

ಬಾಗಲಕೋಟೆ ಮೂಲದ ಗರ್ಭಿಣಿ ಮಹಿಳೆಗೆ ಕೊರೋನಾ ದೃಢಪಟ್ಟಿದ್ದು,ಗರ್ಭಿಣಿಯ ಜೀವ ರಕ್ಷಣೆಗಾಗಿ ಗರ್ಭಪಾತ ಮಾಡುವುದು ಅನಿವಾರ್ಯವಾಗಿತ್ತು.

ವಿಜಯಪುರ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ!

ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆ ಸುರಿದಿದೆ. ವಿಜಯಪುರ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿದಿದ್ದು, ದ್ರಾಕ್ಷಿ, ಬಾಳೆ ಸೇರಿದಂತೆ ವಿವಿಧ ಬೆಳೆಗಳು ಹಾನಿಗೀಡಾಗಿವೆ.