ಬೆಂಗಳೂರು: ತ್ರಿವಳಿ ತಲಾಖ್, 370ವಿಧಿ ರದ್ದು, ಪೌರತ್ವ ತಿದ್ದುಪಡಿ, ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ವೇದಿಕೆ, ಸುಧಾರಣಾ ಕ್ರಮಗಳೂ ಸೇರಿದಂತೆ ಅನೇಕ ವಿಕ್ರಮಗಳನ್ನು ಸಾಧಿಸಲಾಗಿದೆ. ಕೋವಿಡ್19 ಬಿಕ್ಕಟ್ಟನ್ನು ಸಮರ್ಥವಾಗಿ ನಿರ್ವಹಿಸುತ್ತಿರುವ ಮೋದಿಯವರು ಭಾರತದ ವರ್ಚಸ್ಸನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತಿದ್ದಾರೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ್ದಾರೆ.
ಎನ್‍.ಡಿ.ಎ. ಸರ್ಕಾರ ಎರಡನೇ ಅವಧಿಯ ಮೊದಲನೇ ವರ್ಷ ಪೂರೈಸಿರುವ ಸಂದರ್ಭದಲ್ಲಿ ಟ್ವೀಟ್ ಮಾಡಿರುವ ಯಡಿಯೂರಪ್ಪ, 2ನೆಯ ಅವಧಿಯ ಮೋದಿ ಸರ್ಕಾರ 1 ವರ್ಷ ಯಶಸ್ವಿಯಾಗಿ ಪೂರೈಸಿದ ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಅವರ ಸಂಪುಟ ಸಹೋದ್ಯೋಗಿಗಳಿಗೆ ಅಭಿನಂದನೆಗಳು. ಅಭೂತಪೂರ್ವ ಜನಾದೇಶದೊಂದಿಗೆ, ‘ದೇಶ ಮೊದಲು’ ಎನ್ನುವ ಬದ್ಧತೆಯಿಂದ ಆಡಳಿತ ನಡೆಸುತ್ತಿರುವ ಮೋದಿ ಸರ್ಕಾರ, ತನ್ನ ಸಾಮರ್ಥ್ಯ, ಸಾಧನೆಗಳಿಂದ ಎಲ್ಲರ ವಿಶ್ವಾಸಗಳಿಸುತ್ತಾ ಮುನ್ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *

You May Also Like

ದೇಶದಲ್ಲಿ 131 ಕೋಟಿ ಜನಸಂಖ್ಯೆಯಲ್ಲಿ 1 ಕೋಟಿ ಕೊರೋನಾ ಟೆಸ್ಟ್!

ನವದೆಹಲಿ: ಒಂದೇ ದಿನ ದೇಶದಲ್ಲಿ 24,248 ಜನರಲ್ಲಿ ಸೋಂಕು ಪತ್ತೆಯಾಗಿದೆ. ಅಲ್ಲದೇ, ಮಹಾಮಾರಿಗೆ 425 ಜನರು…

ಬೀಗ ನಿರಾಣಿ ಪರ ಬ್ಯಾಟ್ ಬೀಸಿದ ಜಿ.ಎಂ.ಸಿದ್ದೇಶ್…!

ಬೆಂಗಳೂರು: ಇತ್ತಿಚೆಗಷ್ಟೆ ಬಿಜೆಪಿಯಲ್ಲಿ ರಾಜಕೀಯದಾಟದ ಸದ್ದು ಜೋರಾಗಿಯೇ ಕೇಳಿತ್ತು. ಶಾಸಕ ಉಮೇಶ್ ಕತ್ತಿ ಮನೆಯಲ್ಲಿನ ಶೀಕರಣಿ ಊಟ ಏನುಬಕರಾಮತ್ತು ಮಾಡುತ್ತದೆಯೋ ಎನ್ನುವ ಕುತೂಹಲ ಎಲ್ಲರಲ್ಲಿಯೂ ಮೂಡಿತ್ತು‌. ಸಭೆ ನಡೆಸಿದರು ಎನ್ನಲಾದ ಅತೃಪ್ತರಲ್ಲಿ ಉತ್ತರ ಕರ್ನಾಟಕದ ಪ್ರಭಾವಿ ಮಾಜಿ ಸಚಿವ ಮುರಗೇಶ್ ನಿರಾಣಿ ಕೂಡ ಇದ್ದರು ಎನ್ನಲಾಗಿದೆ.