ದಿಗ್ಬಂಧನದ ಕಾರಣ ಮದ್ಯದ ಅಂಗಡಿ ಬಂದ್ ಇದ್ದಾಗ, ಇಲಿಗಳು ಮದ್ಯದ ಪಾಕೀಟುಗಳಲ್ಲಿ ಇದ್ದ ಮಧ್ಯ ಕುಡಿದಿವೆ ಅಂತ ದೂರದರ್ಶನದಲ್ಲಿ ಬಿತ್ತರವಾದ ಸುದ್ದಿ ನೋಡಿದೆ. ವಿಷಯ ನನಗೆ ಸುಮಾರು ಮೂವತ್ತು ವರ್ಷಗಳ ಹಿಂದೆ ಗೊತ್ತಾದ ಒಂದು ಘಟನೆ ನೆನಪಾಯಿತು.
ಇಲಿಗಳೂ ಸಾರಾಯಿ ಕುಡಿಯುತ್ತವೆ ಎನ್ನುವ ಬಗ್ಗೆ, ನನಗೆ ಸುಮಾರು ಮೂವತ್ತು ವರ್ಷಗಳ ಹಿಂದೆ, ನಾನು ಅಥಣಿಯಲ್ಲಿ ಮ್ಯಾಜಿಸ್ಟ್ರೇಟ್ ಆಗಿದ್ದಾಗ ಒಂದು ಕಳ್ಳ ಭಟ್ಟಿ ಅಪರಾಧಿಕ ಪ್ರಕರಣ ವಿಚಾರಣೆ ಮಾಡುವ ಸಂದರ್ಭದಲ್ಲಿ, ಇಲಿಗಳೂ ಸಾರಾಯಿ ಕುಡಿಯುತ್ತವೆ ಎಂಬ ಸತ್ಯ ಗೊತ್ತಾಯಿತು.

ಆ ಪ್ರಕರಣ ವಿಚಾರಣೆ ಸಮಯದಲ್ಲಿ ಒಂದು ಸ್ವಾರಸ್ಯಕರ ಘಟನೆ ನಡೆಯಿತು. ಆ ಪ್ರಕರಣದಲ್ಲಿ ಸಾರಾಯಿ ಜಪ್ತಿ ಪಂಚನಾಮೆ ಸಾಕ್ಷಿ ವಿಚಾರಣೆ ಮಾಡುವಾಗ, ಮೋಟಾರ್ ಗಾಲಿ ಟ್ಯೂಬ್ ನಲ್ಲಿ ಸಾರಾಯಿ ಸಾಗಿಸುವಾಗ ಜಪ್ತಿ ಮಾಡಿದ್ದ ಸಾರಾಯಿ ಟ್ಯೂಬ್ ಗುರುತಿಸುವ ಸಲುವಾಗಿ ಬೇಕಾಯಿತು. ಅದನ್ನು ಹಾಜರ ಪಡಿಸಲು ನಮ್ಮ ಪರಿಚಾರಕನಿಗೆ ಹೇಳಿದಾಗ ಅವನು ಎರಡು ಟ್ಯೂಬ್ ಗಳನ್ನ ಹಾಜರ ಪಡಿಸಿದ.
ಆ ಟ್ಯೂಬ್ ನೋಡಿದ ಸಾಕ್ಷಿ ಇದರಲ್ಲಿ ಇದ್ದ ಸಾರಾಯಿ ಜಪ್ತಿ ಮಾಡಲಾಯಿತು ಅಂತ ಹೇಳಿ ಗುರುತಿಸಿದ. ಪಾಟೀ ಸವಾಲಿನಲ್ಲಿ ಆ ಟ್ಯೂಬ್ ನಲ್ಲಿ ಸಾರಾಯಿ ಇರಲಿಲ್ಲ ಅನ್ನುವದು ಒಪ್ಪಿಕೊಂಡ. ಜಪ್ತಿ ಮಾಡಿದಾಗ ಸಾರಾಯಿ ಇತ್ತು ಅಂತ ಹೇಳಿದ. ಅದರಲ್ಲಿ ಇದ್ದ ಸಾರಾಯಿ ಏನಾಯಿತು ಎನ್ನುವ ಪ್ರಶ್ನೆಗೆ ಉತ್ತರ ನಮ್ಮ ಮುದ್ದೆ ಮಾಲು ಕೊಠಡಿ ಸಹಾಯಕರು ಉತ್ತರ ಕೊಡಬೇಕಾಯಿತು. ಅವರು ರಾತ್ರಿ ಕಾವಲುಗಾರನನ್ನು ವಿಚಾರಿಸಿ ಸ್ವಾರಸ್ಯಕರ ಉತ್ತರ ನೀಡಿದರು.
ಆ ಟ್ಯೂಬ್ ನಲ್ಲಿ ಇದ್ದ ಸಾರಾಯಿಯನ್ನು ಮುದ್ದೆ ಮಾಲು ಕೊಠಡಿಯಲ್ಲಿ ಇದ್ದ ಇಲಿಗಳು ಕುಡಿದಿವೆ ಅಂತ ಹೇಳಿದ. ಆ ಕೊಠಡಿಯಲ್ಲಿ ಇಲಿ ಇದ್ದದ್ದು ನಿಜ ಆದರೆ ಇಲಿ ಸಾರಾಯಿ ಕುಡಿದಿದ್ದು ಯಾರು ಗಮನಿಸಿಲ್ಲ ಅದು ನಿಜ
ಯಾಕೆಂದರೆ ರಾತ್ರಿ” ಇಲಿ” ಈ ಕೆಲಸ ಮಾಡುತ್ತಿತ್ತು. ಒಟ್ಟಾರೆ ಸಾರಾಯಿ ಇರಲಿಲ್ಲ ಇಲಿ ಕುಡಿದಿದ್ದು ಯಾರೂ ನೋಡಿರಲಿಲ್ಲ. ಇಲಿ ಸಾರಾಯಿ ಕುಡಿಯುತ್ತವೆ ಅಂತ ಆಗಲೇ ಗೊತ್ತಾಯಿತು.

ಎಸ್. ಎಚ್. ಮಿಟ್ಟಲಕೊಡ ನಿವೃತ್ತ ಜಿಲ್ಲಾ ನ್ಯಾಯಾಧೀಶರು

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆ ಗ್ರಾಮಗಳು ಗಡಗಡ: ಯಾವ ತಾಲೂಕಿನಲ್ಲಿ ಎಷ್ಟು ಕೊರೊನಾ ಪ್ರಕರಣ?

ಗದಗ: ಜಿಲ್ಲೆಯಲ್ಲಿ ಇಂದು 19 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಗ್ರಾಮೀಣ ಭಾಗದಲ್ಲೂ ಹೆಚ್ಚಿನ ಸೋಂಕಿತರು…

ಪಿ.ಎಸ್.ಐ ನೇಮಕಾತಿ ವಯೋಮಿತಿ ಹೆಚ್ಚಳ: ಗೃಹ ಸಚಿವ ಬೊಮ್ಮಾಯಿ

ಪಿ.ಎಸ್.ಐ ಹುದ್ದೆಯ ನೇಮಕಾತಿಗೆ ಸಂಬಂಧಿಸಿದಂತೆ ವಯೋಮಿತಿಯನ್ನು ಹೆಚ್ಚಿಸಲಾಗಿದೆ. ಈ ಕುರಿತು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಬೆಳ್ಳಂಬೆಳ್ಳಗ್ಗೆ ಫೀಲ್ಡ್‌ಗಿಳಿದ ಶಾಸಕ ಎಂ.ಪಿ.ರೇಣುಕಾಚಾರ್ಯ

ಭಾರಿ ಮಳೆಯಿಂದ ಕೆಲವು ಗ್ರಾಮಗಳಲ್ಲಿ ಅಪಾರ ಹಾನಿ ಸಂಭವಿಸಿದೆ. ಈ ಕಾರಣದಿಂದ ಇಂದು ಶಾಕಸ ಎಂ.ಪಿ.ರೇಣುಕಾಚಾರ್ಯ ಬೆಳ್ಳಂಬೆಳಿಗ್ಗೆಯೇ ಫಿಲ್ಡ್ ಗೆ ಇಳಿದರು.

ಹೊರ ರಾಜ್ಯಗಳಿಗೆ ಹೋಗಲು -ಬುರವಿಕೆಗೆ ಅನುಮತಿ

ಹೊರ ರಾಜ್ಯಗಳಲ್ಲಿ ಸಿಲುಕಿರುವ ಅಥವಾ ಸ್ವಂತ ರಾಜ್ಯಕ್ಕೆ ಸ್ಥಳಕ್ಕೆ ಹೋಗಲು ಬಯಸುವ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು,ಪ್ರವಾಸಿಗರು ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.