ಹಾವೇರಿ: ಜಿಲ್ಲೆಯಲ್ಲಿ ಹೊಸದಾಗಿ ನಾಲ್ಕು ಜನರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ.
ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹದಿನಾಲ್ಕಕೇರಿದೆ.
ಜಿಲ್ಲೆಯಲ್ಲಿ ಈಗಾಗಲೇ ಕೊರೊನಾ ಸೋಂಕು ದೃಢಪಟ್ಟ 14 ಪ್ರಕರಣಗಳಲ್ಲಿ 13 ಪ್ರಕರಣಗಳಿಗೆ ಮಹಾರಾಷ್ಟ್ರದ ಮೂಲವಿದೆ.
ಇತ್ತಿಚೆಗಷ್ಟೆ ಮಹಾರಾಷ್ಟ್ಟದಿಂದ ರಾಣೆಬೆನ್ನೂರಿಗೆ ಬಂದಿದ್ದ,
ಇವರನ್ನು ರಾಣೆಬೆನ್ನೂರಿನ‌ ಈಶ್ವರ ನಗರದ ವಿದ್ಯಾರ್ಥಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಮೇ 17ರಂದು ಮಹಾರಾಷ್ಟ್ರದಿಂದ ಹಾವೇರಿ ಜಿಲ್ಲೆಗೆ ಬಂದಿದ್ದ
ಮೂವರು ಮಕ್ಕಳು, ಓರ್ವ ಯುವಕನಿಗೆ ಸೋಂಕು ದೃಢಪಟ್ಟಿದೆ.
P-2856(19 ವರ್ಷ ),
P-2857(13.ವರ್ಷ),
P-2858(15 ವ.ಗಂಡು),
P-2859(11ವರ್ಷ ಹೆಣ್ಣು) ಸೋಂಕು ಪತ್ತೆಯಾದ ಪ್ರಕರಣಗಳಾಗಿವೆ.
ಇವರ ಟ್ರಾವೆಲ್ ಹಿಸ್ಟರಿ ನೋಡಿದಾಗ ಇವರು ಎರಡು ಖಾಸಗಿ ಬಸ್ ನಲ್ಲಿ ಬಂದಿದ್ದರು ಎನ್ನಲಾಗಿದೆ. ಹೀಗಾಗಿ ಎರಡು ಬಸ್ ನಲ್ಲಿ ಬಂದಿಳಿದ 89 ಜನರಲ್ಲಿ 8 ಜನರಿಗೆ ಸೋಂಕು ಧೃಡ ಪಟ್ಟಿದ್ದು, ಬಸ್ಸಿನಲ್ಲಿ ಬಂದಿದ್ದ 89 ಜನರನ್ನು ಕ್ವಾರೆಂಟೈನ್ ಮಾಡಲಾಗಿದೆ. ಸೋಂಕಿತರನ್ನು ನಗರದ ಕೋವಿಡ್ ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಸ್ಪಷ್ಟನೆ ನೀಡಿದ್ದಾರೆ.

Leave a Reply

Your email address will not be published. Required fields are marked *

You May Also Like

ಸಮಾಜ ಕಲ್ಯಾಣಾಧಿಕಾರಿ ಖಾಜಾಹುಸೇನ್ ಮುಧೋಳ್ ನಿಧನ

ಗದಗ: ಸಮಾಜ ಕಲ್ಯಾಣಾಧಿಕಾರಿ ಖಾಜಾಹುಸೇನ್ ಮುಧೋಳ್ ಬುಧವಾರ ಬೆಂಗಳೂರಿನಲ್ಲಿ ನಿಧನ ಹೊಂದಿದ್ದಾರೆ. ಮೂಲತ: ಗದಗ ನಗರದವರಾದ…

ಆಶಾ ಕಾರ್ಯಕರ್ತೆಯರ ಸಹಕಾರ ಸಂಘ ಸ್ಥಾಪನೆಗೆ ಸೂಚನೆ

ರಾಜ್ಯದಲ್ಲಿ 40 ಸಾವಿರಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ನೀಡಲು 3 ಸಾವಿರ ರೂ.ಗಳ ಪ್ರೋತ್ಸಾಹ ಧನ ನೀಡಲಾಗಿದೆ.

ಅಗಡಿ ಕಾಲೇಜಿನಲ್ಲಿ ಸಿಇಟಿ ಸಹಾಯ ಕೇಂದ್ರ ಆರಂಭ

ನಗರದ ಪ್ರತಿಷ್ಠಿತ ಶ್ರೀಮತಿ.ಕಮಲಾ ಹಾಗೂ ಶ್ರೀ.ವೆಂಕಪ್ಪ ಎಂ ಅಗಡಿ ಇಂಜನೀಯರಿಂಗ್ ಕಾಲೇಜು,ಲಕ್ಷ್ಮೇಶ್ವರದಲ್ಲಿ ಸಿಇಟಿ ಆಪ್ಷನ್ ಎಂಟ್ರಿ ಸಹಾಯ ಕೇಂದ್ರ ಆರಂಭಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದಂತಹ ಡಾ.ಉದಯಕುಮಾರ ಹಂಪಣ್ಣವರ ತಿಳಿಸಿದ್ದಾರೆ.