ಬೆಂಗಳೂರು : ಸಕ್ಕರೆ ನಾಡಿನಲ್ಲಿ ಸಿಹಿಯಾದ ಆಮಿಷಕ್ಕೆ ಮಹಿಳೆಯರು ಬಲಿಯಾಗಿ, ಬರೋಬ್ಬರಿ ರೂ. 20 ಕೋಟಿ ಮೌಲ್ಯದ ಚಿನ್ನ ಕಳೆದುಕೊಂಡಿರುವ ಘಟನೆ ನಡೆದಿದೆ.

ಮಂಡ್ಯದ ಫೆಡ್ ಬ್ಯಾಂಕ್‌ ನ ಎಕ್ಸಿಕ್ಯುಟಿವ್ ಆಗಿ ಕೆಲಸ ಮಾಡುತ್ತಿದ್ದ ಸೋಮಶೇಖರ್ ಎಂಬ ವ್ಯಕ್ತಿಯಿಂದಲೇ ಈ ರೀತಿಯ ಮೋಸವಾಗಿದೆ. ಬ್ಯಾಂಕ್‌ ನಲ್ಲಿ ಚಿನ್ನ ಇಟ್ಟರೆ ವಾರಕ್ಕೆ ಶೇ. 20ರಷ್ಟು ಹಾಗೂ ತಿಂಗಳಿಗೆ ಶೇ. 40 ರಷ್ಟು ಬಡ್ಡಿ ನೀಡಲಾಗುತ್ತದೆ ಎಂದು ನಂಬಿಸಿ ಈತ ಮಹಿಳೆಯರಿಗೆ ಮೋಸ ಮಾಡಿದ್ದಾನೆ.

ಅಲ್ಲದೇ, ಬರೋಬ್ಬರಿ ರೂ. 20 ಕೋಟಿ ಮೌಲ್ಯದ ಚಿನ್ನ ಸಂಗ್ರಹಿಸಿದ್ದ. ಆದರೆ, ಕೊಟ್ಟ ಚಿನ್ನಕ್ಕೆ ಯಾವುದೇ ದಾಖಲೆ ಪಡೆದಿರಲಿಲ್ಲ.ಮಂಗಳಮುಖಿಯೊಬ್ಬರು ನೀಡಿದ ದೂರಿನಿಂದಾಗಿ ಈ ಪ್ರಕರಣ ಬೆಳಕಿಗೆ ಬಂದಿದೆ. ಈ ವ್ಯಕ್ತಿ ಜಿಲ್ಲಾ ಬಿಜೆಪಿ ಅಧ್ಯಕ್ಷೆ ಸೇರಿದಂತೆ ಹಲವರಿಗೆ ವಂಚಿಸಿದ್ದಾನೆ. ಸದ್ಯ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆರೋಪಿತ, ಮಣಪ್ಪುರಂ, ಮುತ್ತೂಟ್, ಕೋಶಮಟ್ಟಂ ಫೈನಾನ್ಸ್‌ ಕಂಪನಿಗಳಲ್ಲಿಯೂ ಚಿನ್ನ ಅಡ ಇಟ್ಟಿದ್ದಾನೆ. ಪ್ರಾಥಮಿಕ ತನಿಖೆಯಲ್ಲಿ 30ಕ್ಕೂ ಹೆಚ್ಚು ಮಹಿಳೆಯರಿಂದ ಹತ್ತಾರು ಕೆಜಿ ಚಿನ್ನ ಪಡೆದು ವಂಚನೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. 

ಐಷಾರಾಮಿ ಜೀವನ ಸಾಗಿಸಲು ಈತ ಈ ಕೆಲಸ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಸದ್ಯ 36 ಜನರಿಗೆ ವಂಚಿಸಿರುವ ಕುರಿತು ತಿಳಿದು ಬಂದಿದೆ. ಸದ್ಯ ಪೊಲೀಸರಿಗೆ ನಾಲ್ಕೂವರೆ ಕೆಜಿ ಚಿನ್ನ, ಒಂದೂವರೆ ಕೋಟಿ ಹಣ ವಂಚಿಸಿರುವ ಬಗ್ಗೆ ತಿಳಿದು ಬಂದಿದೆ. 

Leave a Reply

Your email address will not be published. Required fields are marked *

You May Also Like

ರೈತರಿಂದ ಗ್ರಾಹಕರಿಗೆ ನೇರ ಮಾರಾಟಕ್ಕೆ ಕ್ರಮ ಜಿ.ಪಂ. ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ

ರೈತರು ಬೆಳೆದ ತರಕಾರಿ ಹಾಗೂ ಹಣ್ಣುಗಳನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ತೆರೆಯಲಾದ ಮಳಿಗೆಗಳ ವಿವರ ಇಲ್ಲಿದೆ ನೋಡಿ

ಗುಣಮುಖರಾಗಿ ಆಸ್ಪತ್ರೆಯಿಂದ ತೆರಳಿದ್ದ ವ್ಯಕ್ತಿಯಲ್ಲಿ ಕಂಡು ಬಂದ ಕೊರೊನಾ!

ಬೆಳಗಾವಿ: ಕೊರೊನಾದಿಂದ ಗುಣಮುಖರಾಗಿ ಮನೆಗೆ ತೆರಳಿದ್ದ ವೃದ್ಧರೊಬ್ಬರಲ್ಲಿ ಮತ್ತೆ ಕೊರೊನಾ ವೈರಸ್ ಕಂಡು ಬಂದಿದೆ. 60…

ಗದಗನಲ್ಲಿಂದು 18 ಕೊರೊನಾ ಪಾಸಿಟಿವ್: ಸೋಂಕಿತರ ಸಂಖ್ಯೆ 78 ಕ್ಕೆ ಏರಿಕೆ

ಗದಗ: ಜಿಲ್ಲೆಯಲ್ಲಿಂದು 18 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 78…

ಕ್ರಿಕೆಟ್ ಬೆಟ್ಟಿಂಗ್ ನಲ್ಲಿಯೇ ಭಾಗಿಯಾದ ಪೊಲೀಸ್!

ಚಿಂತಾಮಣಿ : ಅಪರಾಧ ಪ್ರಕರಣಗಳು ನಡೆಯದಂತೆ ನೋಡಿಕೊಳ್ಳಬೇಕಾದ ಪೊಲೀಸಪ್ಪನೇ ಇಲ್ಲಿ ಐಪಿಎಲ್ ಬೆಟ್ಟಿಂಗ್ ಆಡಿರುವ ಪ್ರಕರಣ ಬೆಳಕಿಗೆ ಬಂದಿದೆ.