ಹಾವೇರಿ: ಜಿಲ್ಲೆಯಲ್ಲಿ ಹೊಸದಾಗಿ ನಾಲ್ಕು ಜನರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ.
ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹದಿನಾಲ್ಕಕೇರಿದೆ.
ಜಿಲ್ಲೆಯಲ್ಲಿ ಈಗಾಗಲೇ ಕೊರೊನಾ ಸೋಂಕು ದೃಢಪಟ್ಟ 14 ಪ್ರಕರಣಗಳಲ್ಲಿ 13 ಪ್ರಕರಣಗಳಿಗೆ ಮಹಾರಾಷ್ಟ್ರದ ಮೂಲವಿದೆ.
ಇತ್ತಿಚೆಗಷ್ಟೆ ಮಹಾರಾಷ್ಟ್ಟದಿಂದ ರಾಣೆಬೆನ್ನೂರಿಗೆ ಬಂದಿದ್ದ,
ಇವರನ್ನು ರಾಣೆಬೆನ್ನೂರಿನ‌ ಈಶ್ವರ ನಗರದ ವಿದ್ಯಾರ್ಥಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಮೇ 17ರಂದು ಮಹಾರಾಷ್ಟ್ರದಿಂದ ಹಾವೇರಿ ಜಿಲ್ಲೆಗೆ ಬಂದಿದ್ದ
ಮೂವರು ಮಕ್ಕಳು, ಓರ್ವ ಯುವಕನಿಗೆ ಸೋಂಕು ದೃಢಪಟ್ಟಿದೆ.
P-2856(19 ವರ್ಷ ),
P-2857(13.ವರ್ಷ),
P-2858(15 ವ.ಗಂಡು),
P-2859(11ವರ್ಷ ಹೆಣ್ಣು) ಸೋಂಕು ಪತ್ತೆಯಾದ ಪ್ರಕರಣಗಳಾಗಿವೆ.
ಇವರ ಟ್ರಾವೆಲ್ ಹಿಸ್ಟರಿ ನೋಡಿದಾಗ ಇವರು ಎರಡು ಖಾಸಗಿ ಬಸ್ ನಲ್ಲಿ ಬಂದಿದ್ದರು ಎನ್ನಲಾಗಿದೆ. ಹೀಗಾಗಿ ಎರಡು ಬಸ್ ನಲ್ಲಿ ಬಂದಿಳಿದ 89 ಜನರಲ್ಲಿ 8 ಜನರಿಗೆ ಸೋಂಕು ಧೃಡ ಪಟ್ಟಿದ್ದು, ಬಸ್ಸಿನಲ್ಲಿ ಬಂದಿದ್ದ 89 ಜನರನ್ನು ಕ್ವಾರೆಂಟೈನ್ ಮಾಡಲಾಗಿದೆ. ಸೋಂಕಿತರನ್ನು ನಗರದ ಕೋವಿಡ್ ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಸ್ಪಷ್ಟನೆ ನೀಡಿದ್ದಾರೆ.

Leave a Reply

Your email address will not be published. Required fields are marked *

You May Also Like

ಆಲಮಟ್ಟಿ ಬಳಿ ಬೈಕ್, ಬಸ್ ಡಿಕ್ಕಿ; ಇರ್ವರ ಸಾವು

ಆಲಮಟ್ಟಿ; ಬೈಕ್ ಹಾಗು ಖಾಸಗಿ ಬಸ್ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಪ್ರಾಣ…

ನಾಳೆ ಗದಗ ಜಿಲ್ಲೆಯಲ್ಲಿ ಏನಿರುತ್ತೆ? ಏನಿರಲ್ಲ?

ಗದಗ: ಕೋವಿಡ್-19 ಸೋಂಕು ನಿಯಂತ್ರಣ ಕ್ರಮವಾಗಿ ಜುಲೈ 31 ರವರೆಗೆ ನಿಷೇದಾಜ್ಞೆಯ ಅವಧಿಯನ್ನು ವಿಸ್ತರಿಸಿ ರಾಜ್ಯ…

ಬೈಕ್ ಗೆ ಲಾರಿ ಡಿಕ್ಕಿ: ಎಸ್.ಎಸ್.ಎಲ್.ಸಿ 3 ವಿದ್ಯಾರ್ಥಿಗಳ ಸ್ಥಿತಿ ಗಂಭೀರ

ಮುಂಡರಗಿ: ಎಸ್ಎಸ್ಎಲ್ ಸಿ ಪರೀಕ್ಷೆ ಮುಗಿಸಿ‌ ಹೊರಟಿದ್ದ ವಿದ್ಯಾರ್ಥಿಗಳಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೂವರು…

ದೋತರಾ ಹರಿದು ಮಾಸ್ಕ್ ಮಾಡಿನಿ: ಎಸ್.ಎಸ್.ಪಾಟೀಲ್

ನಾನು ನನ್ನ ಧೋತರ ಹರಿದು ಮಾಸ್ಕ್ ಮಾಡಿಕೊಂಡಿದ್ದೇನೆ. ಇವುಗಳನ್ನೆ ನಮ್ಮ ಹೊಲದಲ್ಲಿ ಕೆಲಸ ಮಡುವ ಕಾರ್ಮಿಕರಿಗೂ ನೀಡಿದ್ದೇನೆ ಎಂದು ಮಾಜಿ ಸಚಿವ ಎಸ್.ಎಸ್.ಪಾಟೀಲ್