ಭುವನೇಶ್ವರ್: ಕೊರೊನಾ ಮಹಾಮಾರಿಯ ಆಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದು ಸದ್ಯ ಜನರ ಪ್ರತಿಯೊಂದು ಕಾರ್ಯಕ್ಕೂ ಅಡ್ಡಿಯಾಗಿದೆ.

ಇಲ್ಲೊಂದು ಜೋಡಿಗೂ ಇದು ಅಡ್ಡವಾದ ಪ್ರಸಂಗ ನಡೆದಿದೆ. ಪ್ರೀತಿಸಿ ಓಡಿಹೋದ ಜೋಡಿಯೊಂದು ಕ್ವಾರಂಟೈನ್ ಕೇಂದ್ರದಲ್ಲಿ ಮದುವೆಯಾದ ಘಟನೆ ಒಡಿಶಾದಲ್ಲಿ ನಡೆದಿದೆ.

ಈ ನವ ಜೋಡಿ ಜನೇವರಿಯಲ್ಲಿಯೇ ತಮ್ಮ ಮನೆಯಿಂದ ಓಡಿ ಬಂದಿದ್ದರು. ಪುರಿ ಜಿಲ್ಲೆಯ ಸಗದ ಗ್ರಾಮದ ಸೌರಭ್ ದಾಸ್(19) ಭಾನುವಾರ ತನ್ನ ಪ್ರಿಯತಮೆ ಪಿಂಕ್ಯಾರಾಣಿ ದಾಸ್ ಳನ್ನು 14 ದಿನಗಳ ಕ್ವಾರಂಟೈನ್ ಮುಗಿಸಿ ಕೇಂದ್ರದಲ್ಲಿಯೇ ಮದುವೆಯಾಗಿದ್ದಾನೆ. ಯುವಕನ ಮೇಲೆ ಯುವತಿ ಕುಟುಂಬಸ್ಥರು ಯಾವುದೇ ಪ್ರಕರಣ ದಾಖಲಿಸಿರಲಿಲ್ಲ.

ಸೌರಭ್ ಅಹಮದಾಬಾದ್ ನಲ್ಲಿ ಪ್ಲಾಸ್ಟಿಕ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಕೊರೊನಾ ಹೆಮ್ಮಾರಿಯಿಂದ ಲಾಕ್ ಡೌನ್ ಆದ ಪರಿಣಾಮ ಕೆಲಸ ಇರಲಿಲ್ಲ. ಹೀಗಾಗಿ ಇಬ್ಬರು ಮತ್ತೆ ತಮ್ಮ ತಾಯ್ನಾಡಿಗೆ ಬರಲು ಕಷ್ಟಪಡುತ್ತಿದ್ದರು. ಹೇಗೋ ಕಷ್ಟಪಟ್ಟು ಕೊನೆಗೂ ಜೋಡಿ ತಮ್ಮ ಗ್ರಾಮಕ್ಕೆ ವಾಪಸ್ಸಾಗಿತ್ತು. ಈ ವೇಳೆ ಅವರನ್ನು ಕೂಡಲೇ ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು.

Leave a Reply

Your email address will not be published.

You May Also Like

ದಿನವೂ 24 ಕಿಮೀ ಸೈಕಲ್ ಹೊಡ್ದು ಕಲಿತಳು:10ನೇತರಗತಿಯಲ್ಲಿ ಶೇ. 98.75 ಗಳಿಸಿದಳು!

ಭೋಪಾಲ್: ಹತ್ತನೆ ಕ್ಲಾಸ್ ಪರೀಕ್ಷೆಯಲ್ಲಿ ಬರೊಬ್ಬರಿ 98.75 ಪರ್ಸೆಂಟು ಮಾಡಿದ ಈ ಛೋಟಿ, ರಾಜ್ಯಕ್ಕೆ 8ನೇ…

ಬೆಳಗಾವಿಯಲ್ಲಿ 2 ಸಾವಿರ ಕಿ.ಮೀ ಪ್ರವಾಸ ಮಾಡಿದ್ದ ಶ್ವಾನಕ್ಕೂ ಕ್ವಾರಂಟೈನ್..!

ಬೆಳಗಾವಿ: ಬರೋಬ್ಬರಿ 2 ಸಾವಿರ ಕಿ.ಮೀ ಪ್ರವಾಸ ಮಾಡಿದ್ದ ಶ್ವಾನವೊಂದು ಕ್ವಾರಂಟೈನ್ ಆಗಿರುವ ಘಟನೆ ನಡೆದಿದೆ.…

ಸೋಶಿಯಲ್ ಮಿಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದ ಗುಲಾಬಿ ಬಣ್ಣದ ಚೂಡಿದಾರ ಧರಿಸಿದ ಯುವತಿ

ರೊಟ್ಟಿ ಮಾಡುತ್ತ ಕುಳುತಿರುವ ಯುವತಿಯೋರ್ವಳು ಈಗ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಯಾಗಿ ಮಿಂಚುತ್ತಿದ್ದಾಳೆ.

ರಾಜ್ಯದಲ್ಲಿಂದು ಸೋಂಕಿನ ಸುಂಟರಗಾಳಿ: 3176 ಪಾಸಿಟಿವ್, ಯಾವ ಜಿಲ್ಲೆಯಲ್ಲಿ ಎಷ್ಟು?

ರಾಜ್ಯದಲ್ಲಿಂದು 3176 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 47253 ಕ್ಕೆ ಏರಿಕೆಯಾದಂತಾಗಿದೆ.