ನವದೆಹಲಿ : ದೇಶದಲ್ಲಿ ಕೊರೊನಾ ಹಾವಳಿ ಹೆಚ್ಚಾಗಿದ್ದರಿಂದಾಗಿ ಆಸ್ಪತ್ರೆಯಲ್ಲಿ ಕೂಡ ತ್ಯಾಜ್ಯ ಹೆಚ್ಚಾಗುತ್ತಿದೆ. ಜೂನ್ ನಿಂದ ಸೆಪ್ಟೆಂಬರ್ ವರೆಗೆ ದೇಶದಲ್ಲಿ 18 ಸಾವಿರಕ್ಕೂ ಅಧಿಕ ಟನ್ ವೈದ್ಯಕೀಯ ತ್ಯಾಜ್ಯ ಸಂಗ್ರಹವಾಗಿದೆ ಎಂದು ತಿಳಿದು ಬಂದಿದೆ.

ನಾಲ್ಕು ತಿಂಗಳ ಅವಧಿಯಲ್ಲಿ ದೇಶದಲ್ಲಿ ಬರೋಬ್ಬರಿ 18,006 ಟನ್ ತ್ಯಾಜ್ಯ ಸಂಗ್ರವಾಗಿದ್ದು, ಈ ಪೈಕಿ ಸೆಪ್ಟೆಂಬರ್ ನಲ್ಲಿ 5,500 ಟನ್ ಕೋವಿಡ್-19 ವೈದ್ಯಕೀಯ ತ್ಯಾಜ್ಯ ಶೇಖರಣೆಯಾಗಿದೆ. ಈ ತ್ಯಾಜ್ಯದಲ್ಲಿ ಪಿಪಿಇ ಕಿಟ್, ಮಾಸ್ಕ್, ಗ್ಲೌಸ್, ಬ್ಲಡ್ ಬ್ಯಾಗ್, ಸೂಜಿ, ಸಿರಿಂಜ್ ಇನ್ನಿತರ ವಸ್ತುಗಳು ಸೇರಿವೆ.

ಈ ಪೈಕಿ ಪ್ರಥಮ ಸ್ಥಾನದಲ್ಲಿ ಕೊರೊನಾದಲ್ಲಿಯೂ ಮುಂದೆ ಇರುವ ಮಹಾರಾಷ್ಟ್ರ ಇದೆ. ಅಲ್ಲಿ ಈ ವೇಳೆಯಲ್ಲಿ ಬರೋಬ್ಬರಿ 3,587 ಟನ್ ತ್ಯಾಜ್ಯ ಸಂಗ್ರಹವಾಗಿದೆ. ಇನ್ನುಳಿದಂತೆ ತಮಿಳನಾಡು 1,737 ಟನ್, ಗುಜರಾತ 1,638 ಟನ್, ಕೇರಳ 1,516 ಟನ್, ಉತ್ತರ ಪ್ರದೇಶ 1,416 ಟನ್, ದೆಹಲಿ 1,400 ಟನ್, ಕರ್ನಾಟಕ 1,380 ಟನ್ ಮತ್ತು ಪಶ್ಚಿಮ ಬಂಗಾಳದಲ್ಲಿ 1,000 ಟನ್ ತ್ಯಾಜ್ಯ ಉತ್ಪತ್ತಿಯಾಗಿದೆ. ಈ ತ್ಯಾಜ್ಯವನ್ನು 198 ಘಟಕಗಳಿಂದ ವಿಲೇವಾರಿ ಮಾಡಲಾಗುತ್ತಿದೆ.

ಸೆಪ್ಟೆಂಬರ್ ತಿಂಗಳಲ್ಲಿ ವೈದ್ಯಕೀಯ ತ್ಯಾಜ್ಯ ಸಂಗ್ರಹಣೆಯೂ ಹೆಚ್ಚಾಗಿದೆ. ಸೆಪ್ಟೆಂಬರ್ ನಲ್ಲಿ ಗುಜರಾತಿನಲ್ಲಿ 622 ಟನ್ ಕಸ ಉತ್ಪತ್ತಿಯಾಗಿದೆ. ತಮಿಳನಾಡು 543 ಟನ್, ಮಹಾರಾಷ್ಟ್ರ 524 ಟನ್, ಉತ್ತರ ಪ್ರದೇಶ 507 ಟನ್, ಕೇರಳ 494 ಟನ್ ಮತ್ತು ದೆಹಲಿಯಲ್ಲಿ 383 ಟನ್ ತ್ಯಾಜ್ಯ ಸಂಗ್ರಹಣೆಯಾಗಿದೆ.

Leave a Reply

Your email address will not be published. Required fields are marked *

You May Also Like

ಗೆಳೆಯನೊಂದಿಗೆ ಅಪ್ರಾಪ್ತೆಯ ಸೆಕ್ಸ್ – ನೋಡಿದ್ದಕ್ಕೆ ಅಜ್ಜಿಯ ಕೊಲೆ!

ಲಕ್ನೋ: ಅಪ್ರಾಪ್ತ ಬಾಲಕಿ ತನ್ನ ಪ್ರಿಯಕರನ ಜೊತೆ ಸೆಕ್ಸ್ ಮಾಡುತ್ತಿರುವುದನ್ನು ಸಾಕು ಅಜ್ಜಿ ನೋಡಿದ್ದಾರೆ ಎಂಬ…

ಬಿರೇನ್ ಸಿಂಗ್ ಮಣಿಪುರ ಸಿಎಂ ಆಗಿ ಅವಿರೋಧವಾಗಿ ಆಯ್ಕೆ

ಉತ್ತರಪ್ರಭ ಸುದ್ದಿಮಣಿಪುರ: ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಣಿಪುರದ ಹಂಗಾಮಿ ಸಿಎಂ ಎನ್ ಬಿರೇನ್ ಸಿಂಗ್…

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಎಷ್ಟು..?

ಬೆಂಗಳೂರು: ಜಗತ್ತಿನ ಆತಂಕಕ್ಕೆ ಕಾರಣವಾಗಿರುವ ಕೊರೊನಾ ದಿನದಿಂದ ದಿನಕ್ಕೆ ತನ್ನ ಅಟ್ಟಹಾಸ ಮುಂದುವರೆಸಿದೆ. ಸದ್ಯ ಕೊರೊನಾಗೆ…

ವರ್ಷದ ಹಿಂದೆ ಮದುವೆಯಾಗಿದ್ದ ಯೋಧ ಹುತಾತ್ಮ – ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ!

ನವದೆಹಲಿ : ಒಂದು ವರ್ಷದ ಹಿಂದೆಯಷ್ಟೇ ವಿವಾಹವಾಗಿದ್ದ ಯೋಧ ಉಗ್ರರನ್ನು ಸೆದೆಬಡಯುವ ಕಾರ್ಯಾಚರಣೆಯಲ್ಲಿ ಹುತಾತ್ಮರಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.