ಬೀದರ್: ಕೊರೊನಾಗೆ ರಾಜ್ಯದಲ್ಲಿ ಮತ್ತೊಂದು ಬಲಿಯಾಗಿದೆ. ಈ ನಿಟ್ಟಿನಲ್ಲಿ ಸಾವಿನ ಸಂಖ್ಯೆ 45ಕ್ಕೆ ಏರಿಕೆ ಕಂಡಿದೆ.
ಇಲ್ಲಿಯ ವಿದ್ಯಾನಗರ ಕಾಲೋನಿಯ ನಿವಾಸಿ 49 ವರ್ಷದ ವ್ಯಕ್ತಿಗೆ ಮೇ 22ರಂದು ಕೊರೊನಾ ಸೋಂಕು ಪತ್ತೆಯಾಗಿತ್ತು. ಅವರು ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಐಸೋಲೇಷನ್ ವಾರ್ಡಿನಲ್ಲಿ ಇಂದು ಮೃತಪಟ್ಟಿದ್ದಾರೆ.

ಮೃತ ವ್ಯಕ್ತಿಯು ಕಿಡ್ನಿ ವೈಫಲ್ಯ ಹಾಗೂ ಗ್ಯಾಂಗ್ರೀನ್ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾಗೆ ಮೂರನೇ ಬಲಿಯಾಗಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಂಗಳವಾರದ ಬುಲೆಟಿನ್ ಪ್ರಕಾರ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 95ಕ್ಕೆ ಏರಿಕೆಯಾಗಿದೆ.

Leave a Reply

Your email address will not be published. Required fields are marked *

You May Also Like

ಮೂಲಭೂತ ಸೌಲಭ್ಯ ವಂಚಿತ ಪ್ರವಾಸಿ ಮಂದಿರ

ಅತಿಥಿ ಸತ್ಕಾರಕ್ಕಾಗಿ ಪಟ್ಟಣದಲ್ಲಿ ನಿರ್ಮಿಸಿದ್ದ ಪ್ರವಾಸಿ ಮಂದಿರದ ಸಂರಕ್ಷಣೆಗೆ ನಿರ್ಲಕ್ಷ್ಯದಿಂದ ಮೂಲ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ. ವಿಶ್ರಾಂತಿಗಾಗಿ ಬಂದೀರಿ ಜೊಕೆ ಪ್ರವಾಸಿಗರೆ ಎನ್ನುವಂತಿದೆ ಗದಗ ಜಿಲ್ಲೆ ಲಕ್ಷ್ಮೆಶ್ವರ ಪಟ್ಟಣದಲ್ಲಿ ಪ್ರವಾಸಿ ಮಂದಿರ.

ಸೋಂಕಿನ ಮೂಲಗಳೇ ತಿಳಿಯುತ್ತಿಲ್ಲ! ರಾಜ್ಯದಲ್ಲಿ ಹೆಚ್ಚಿದೆ ಜನರಲ್ಲಿ ಕೊರೊನಾ ಆತಂಕ!

ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೇಗ ಹೆಚ್ಚಾಗುತ್ತಿದೆ. ಸೋಂಕಿತರ ಸಂಖ್ಯೆಯೊಂದಿಗೆ ಸಾವಿನ ಸಂಖ್ಯೆಯೂ…

ಏಲಕ್ಕಿ ನಾಡಿನಲ್ಲೂ ಖಾತೆ ತೆರೆದ ಕೊರೋನಾ

ಈವರೆಗೂ ಯಾವುದೇ ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗದ ಹಿನ್ನೆಲೆ ಹಾವೇರಿ ಜಿಲ್ಲೆ ಗ್ರೀನ್ ಝೋನ್‌ನಲ್ಲಿತ್ತು. ಆದರೆ ಇದೀಗ ಹಾವೇರಿಯಲ್ಲೂ ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಈ ಮೂಲಕ ಏಲಕ್ಕಿ ನಾಡಿನಲ್ಲಿ ಮಹಾಮಾರಿ ಕೊರೋನಾ ಖಾತೆ ತೆರೆದಿದೆ.

ಅಂಕಗಳಿಕೆಯ ವಿಷಯ ಜ್ಞಾನದಿಂದ ಮಾತ್ರ ಶಿಕ್ಷಣ ಪರಿಪೂರ್ಣವಾಗುವುದಿಲ್ಲ

ಸ್ಕೌಟ್ಸ್ ಮತ್ತು ಗೈಡ್ಸಗಳು ಸನ್ನಡತೆ, ಸದ್ಭಾವನೆ, ಶಿಸ್ತು ಮತ್ತು ಸೇವಾ ಮನೋಭಾವದಂಥ ಶಿಕ್ಷಣ ಪಡೆದು ಭಾರತೀಯ ಸಂಪನ್ಮೂಲ ವ್ಯಕ್ತಿಗಳಾಗಿ ಹೊರಹೊಮ್ಮುತ್ತಿರುವುದು ಹೆಮ್ಮೆಯ ವಿಚಾರ ಎಂದು ಸ್ಕೌಟ್ಸ್ ಮತ್ತು ಗೈಡ್ಸ ತಾಲೂಕಾಧ್ಯಕ್ಷ ಶೀಥಲ ಬಾಗಮಾರ ಹೇಳಿದರು.