ರಾಯಚೂರು:ಎಪಿಎಂಸಿ ಚೆಕ್‌ಪೊಸ್ಟ್ನಲ್ಲಿ ವಾಹನ ತಪಾಸಣೆ ಹೆಸರಿನಲ್ಲಿ ಭಾರಿ ಪ್ರಮಾಣದಲ್ಲಿ ಹಣ ವಸೂಲಿ ದಂಧೆ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಜಿಲ್ಲೆ ಮಸ್ಕಿ ಪಟ್ಟಣದ ಸಿಂಧನೂರು ರಸ್ತೆಯಲ್ಲಿನ ಎಪಿಎಂಸಿ ಚೆಕ್ ಪೋಸ್ಟ್ ಇಂಥದ್ದೊಂದು ಆರೋಪಕ್ಕೆ ಕಾರಣವಾಗಿದೆ. ಹೆದ್ದಾರಿ ಮೂಲಕ ಓಡಾಡುವ ಲಾರಿ ಇನ್ನಿತರ ವಾಹನಗಳನ್ನು ತಪಾಸಣೆ ಮಾಡಬೇಕು, ರಶೀದಿ ಇಲ್ಲದೇ ಅನಧಿಕೃತವಾಗಿ ಓಡಾಡಿದರೆ ನಿಯಮಾನುಸಾರವಾಗಿ ದಂಡ ಹಾಕಬೇಕು. ಆದರೆ ಮಸ್ಕಿಯ ಎಪಿಎಂಸಿ ಚೆಕ್ ‌ಪೋಸ್ಟ್ ನಲ್ಲಿ ಇದ್ಯಾವುದನ್ನು ಮಾಡುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.

ಈ ಚೆಕ್ ಮೂಲಕ ಬರುವ ಪ್ರತಿ ಲಾರಿ ಚಾಲಕರಿಂದ ಹಣ ವಸೂಲಿ ದಂಧೆ ನಡೆಯುತ್ತಿದೆ. ಚೆಕ್‌ಪೊಸ್ಟ್ ಗೆ ಸರ್ಕಾರ ನೇಮಕ ಮಾಡಿರುವ ಸಿಬ್ಬಂದಿಗಳಿಗೆ ಕತ್ಯರ್ವಕ್ಕೆ ಕಳುಹಿಸಬೇಕು. ಆದರೆ ಇಲ್ಲಿನ ಎಪಿಎಂಸಿ 4 ಜನ ಖಾಸಗಿ ಯುವಕರನ್ನು ನೇಮಕ ಮಾಡಿದೆ ಎಂಬ ಅಸಮಾಧಾನ ವ್ಯಕ್ತವಾಗಿದೆ.

ದೂರದ ಪೇಟೆಯಿಂದ ಬರುವ ಲಾರಿಗಳಿಗೆ ತಪಾಸಣೆ ಮಾಡುತ್ತಾರೆ, ಲಾರಿ ಚಾಲಕರ ಬಳಿ ರಶೀದಿ ಇಲ್ಲದಿದ್ದರೆ ದಂಡ ಹಾಕುತ್ತೇವೆ ಎಂದು ಹೆದರಿಸಿ ಹಣ ವಸೂಲಿ ಮಾಡಲು ಮುಂದಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿವೆ.

ರಶೀದಿ ಇದ್ದರು ಸಹ ಅವರ ಬಳಿ ಹಣ ಕೇಳುತ್ತಾರೆ. ಇದರಿಂದ ದೂರದ ಮಾರುಕಟ್ಟೆಗೆ ರೈತರು ಬೆಳೆದ ಬೆಳೆಯನ್ನು ವಾಹನ ಮೂಲಕ ತಗೆದುಕೊಂಡು ಹೋಗಲು ತೊಂದರೆ ಉಂಟಾಗಿದೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಿ ಎಪಿಎಂಸಿ ಚೆಕ್‌ಪೊಸ್ಟ್ಗೆ ಭೇಟಿ ನೀಡಿ ಹಣ ವಸೂಲಿ ದಂಧೆಯಲ್ಲಿ ತೊಡಗಿರುವ ಇಲ್ಲಿನ ಸಿಬ್ಬಂಧಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕೃಷಿ ಉತ್ಪನ ಮಾರುಕಟ್ಟೆ ಬಳಿಯ ಚೆಕ್‌ಪೊಸ್ಟ್ ನಲ್ಲಿ ಹಗಲು ರಾತ್ರಿಯನ್ನದೇ ಲಾರಿ ಇನ್ನಿತರ ವಾಹನ ಚಾಲಕರ ಬಳಿ ಹಣ ವಸೂಲಿ ಮಾಡುತ್ತಿದ್ದಾರೆ. ಚೆಕ್‌ಪೊಸ್ಟ್ ನಲ್ಲಿ ಸರ್ಕಾರಿ ಸಿಬ್ಬಂಧಿ ಹೆಸರಿನಲ್ಲಿ 4 ಜನ ಖಾಸಗಿ ಯುವಕರು ಹಣ ವಸೂಲಿ ಮಾಡುತ್ತಿದ್ದಾರೆ, ಮೇಲಾಧಿಕಾರಿಗಳು ಪರಿಶೀಲಿಸಿ ಇವರ ಮೇಲೆ ಕಾನೂನು ಕ್ರಮ ಜರುಗಿಸಿ ತನಿಖೆ ಮಾಡಬೇಕು ಎಂದು ಎಪಿಎಂಸಿ ನಿರ್ದೇಶಕ ಮಲ್ಲರೆಡ್ಡಪ್ಪ, ಮೆದಿಕಿನಾಳ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಮೌಲ್ಯ ಮಾಪನವಿಲ್ಲದೆ ವಿಟಿಯು ಪರೀಕ್ಷೆ ತೇರ್ಗಡೆಗೆ ಅಭಿಯಾನ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (VTU) ಅಡಿಯಲ್ಲಿ ಸುಮಾರು 2000ಕ್ಕೂ ಹೆಚ್ಚು ಕಾಲೇಜುಗಳು ಮಾನ್ಯತೆ ಪಡೆದಿವೆ. ಈ ಎಲ್ಲಾ ಕಾಲೇಜುಗಳ ವಿದ್ಯಾರ್ಥಿಗಳು ಮೌಲ್ಯಮಾಪನವಿಲ್ಲದೆ ವಿಟಿಯು ಎಲ್ಲಾ ವಿದ್ಯಾಥಿಗಳನ್ನು ತೆರ್ಗಡೆ ಮಾಡಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಪ್ರಾರಂಭಿಸಿದ್ದಾರೆ.

ಇಪ್ಪತ್ನಾಲ್ಕು ಗಂಟೆಯಲ್ಲಿ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಎಷ್ಟು?

ದೇಶದಲ್ಲಿ 24 ಗಂಟೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಇದರಲ್ಲಿ ಅರ್ಧದಷ್ಟು ಪ್ರಕರಣಗಳಿಗೆ ಮಹರಾಷ್ಟ್ರವೇ ಮೂಲವಾಗಿದೆ.

ಗದಗನಲ್ಲಿ ಮತ್ತೆ ಇಬ್ಬರಿಗೆ ಕೊರೋನಾ ಪಾಸಿಟಿವ್

ಗದಗ: ಜಿಲ್ಲೆಯಲ್ಲಿ ಮತ್ತೆ ಎರಡು ಕೊರೋನಾ ಪಾಸಿಟಿವ್ ದೃಢಪಟ್ಟಿವೆ‌. ಈ ಮೂಲಕ ಸೋಂಕಿತರ ಸಂಖ್ಯೆ 20…

O bookmaker da 1Win é confiável? Verifique na revisão: inscrição, odds, revisão de mercados, bônus e ofertas especiais para os novos jogadores

Uma revisão detalhada dos prós e contras da casa de apostas 1WIN…