ಬೀದರ್: ಕೊರೊನಾಗೆ ರಾಜ್ಯದಲ್ಲಿ ಮತ್ತೊಂದು ಬಲಿಯಾಗಿದೆ. ಈ ನಿಟ್ಟಿನಲ್ಲಿ ಸಾವಿನ ಸಂಖ್ಯೆ 45ಕ್ಕೆ ಏರಿಕೆ ಕಂಡಿದೆ.
ಇಲ್ಲಿಯ ವಿದ್ಯಾನಗರ ಕಾಲೋನಿಯ ನಿವಾಸಿ 49 ವರ್ಷದ ವ್ಯಕ್ತಿಗೆ ಮೇ 22ರಂದು ಕೊರೊನಾ ಸೋಂಕು ಪತ್ತೆಯಾಗಿತ್ತು. ಅವರು ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಐಸೋಲೇಷನ್ ವಾರ್ಡಿನಲ್ಲಿ ಇಂದು ಮೃತಪಟ್ಟಿದ್ದಾರೆ.

ಮೃತ ವ್ಯಕ್ತಿಯು ಕಿಡ್ನಿ ವೈಫಲ್ಯ ಹಾಗೂ ಗ್ಯಾಂಗ್ರೀನ್ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾಗೆ ಮೂರನೇ ಬಲಿಯಾಗಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಂಗಳವಾರದ ಬುಲೆಟಿನ್ ಪ್ರಕಾರ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 95ಕ್ಕೆ ಏರಿಕೆಯಾಗಿದೆ.

Leave a Reply

Your email address will not be published. Required fields are marked *

You May Also Like

ಕಾಂಗ್ರೆಸ್ ಸೇರಲು ವರ್ತೂರು ಪ್ರಕಾಶ್ ತೀರ್ಮಾನ

ಬೆಂಬಲಿಗರು ಹಾಗೂ ಕಾರ್ಯಕರ್ತರ ಒತ್ತಾಯದಂತೆ ಕಾಂಗ್ರೆಸ್ ಸೇರಲು ತೀರ್ಮಾನಿಸಿದ್ದು, ಈಗಾಗಲೇ ಆ ಪಕ್ಷದ ಮುಖಂಡರೊಂದಿಗೆ ಚರ್ಚಿಸಿದ್ದೇನೆ. ಸದ್ಯದಲ್ಲೇ ಅಂತಿಮ ನಿರ್ಧಾರವಾಗಲಿದೆ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ಹೇಳಿದರು.

ಐರನ್ ಅಂಗಡಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

ಉತ್ತರಪ್ರಭ ಪಾವಗಡ: ತುಮಕೂರು ಜಿಲ್ಲೆಯ ಗಡಿ ಪ್ರದೇಶವಾದ ಪಾವಗಡ ತಾಲ್ಲೂಕಿನ ತಮ್ಮ ಸ್ವ ಗ್ರಾಮವಾದ ಮಂಗಳವಾಡ…

ಬಿಜೆಪಿ ಅಸ್ಪೃಶ್ಯತೆಯನ್ನು ಮರುಸ್ಥಾಪಿಸುತ್ತಿದೆ

ಬಿಜೆಪಿ ತನ್ನ ಮನುವಾದಿ ಸಿದ್ಧಾಂತವನ್ನು ಸಮಾಜದೊಳಗೆ ವ್ಯವಸ್ಥಿತವಾಗಿ ಮತ್ತೆ ಸ್ಥಾಪಿಸುತ್ತಿದೆ.

ಪಿಯು ಪರೀಕ್ಷೆಗೆ ನಿಯಮವೇನು?

ಬೆಂಗಳೂರ: ಇದೆ ಜೂ.18 ರಂದು ನಡೆಯಲಿರುವ ಪಿಯು ಇಂಗ್ಲೀಷ್ ಪರೀಕ್ಷೆ‌ ನಡೆಯಲಿದೆ. ಪರೀಕ್ಷೆಗೆ ಹಾಸ್ಟೆಲ್ ವಿದ್ಯಾರ್ಥಿಗಳು ಮತ್ತು ವಲಸೆ ಕಾರ್ಮಿಕರ ಮಕ್ಕಳಿಗೆ ತಮ್ಮ ಊರು ಅಥವಾ ಸಮೀಪದ ಊರುಗಳಲ್ಲೆ ಪರೀಕ್ಷೆ ಬರೆಯಲು ಪಿಯು ಬೋರ್ಡ್ ಅವಕಾಶ ನೀಡಿದೆ. ತಮ್ಮ ಹೆಸರು ಇರುವ ಆನ್ ಲೈನ್ ಪ್ರತಿಯನ್ನು ಪ್ರಿಂಟ್ ತೆಗೆದುಕೊಂಡು ಆಯ್ಕೆ ಮಾಡಿಕೊಂಡ ಕೇಂದ್ರದಲ್ಲಿ ಪರೀಕ್ಷೆ ಬರೆಯಬಹುದಾಗಿದೆ. ಈ ಬಗ್ಗೆ ಇಂದು ರಾಜ್ಯದ ವಿದ್ಯಾರ್ಥಿಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟವಾಗಲಿದ್ದು ಜೂ.7 ರ ಒಳಗಾಗಿ ಹೊರರಾಜ್ಯದ ವಿದ್ಯಾರ್ಥಿಗಳ ಅಂತಿಮ ಆಯ್ಕೆ ಪಟ್ಟಿ ಹೊರಬೀಳಲಿದೆ.