ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ದಿನದಿಂದ ದಿನಕ್ಕೆ ಮುಂದುವರೆಯುತ್ತಿದೆ. ಪೊಲೀಸರೂ ಇದಕ್ಕೆ ಹೊರತಲ್ಲ. ಆನೇಕಲ್ ಮೂಲದ ಎಎಸ್ಐಗೆ ಕೊರೊನಾ ಸೋಂಕು ಹಬ್ಬಿದೆ ಎಂಬ ಶಂಕೆ ವ್ಯಕ್ತವಾಗಿದೆ.

ಅಲ್ಲದೇ, ಹಾಸನ ಜಿಲ್ಲೆಯ ಹೊಳೇನರಸೀಪುರದಲ್ಲಿ ಪಿಎಸ್ಐ ಮತ್ತು ಮೂವರು ಕಾನ್ಸಸ್ಟೇಬಲ್ ಗಳಿಗೆ ವೈರಸ್ ಹಬ್ಬಿದೆ.

ಈ ಪೊಲೀಸರು ವಾಸವಿದ್ದ ಏರಿಯಾವನ್ನ ಸೀಲ್ಡೌನ್ ಮಾಡಲಾಗಿದೆ. ಈ ನಾಲ್ವರು ಪೊಲೀಸರನ್ನು ಮಹಾರಾಷ್ಟ್ರದ ಗಡಿಭಾಗ ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಅಂತಾರಾಜ್ಯ ಗಡಿಯಲ್ಲಿ ನಿಯೋಜನೆ ಮಾಡಲಾಗಿತ್ತು. ಮೇ. 23ರಂದು ನಿಪ್ಪಾಣಿಯಿಂದ ಬಂದ ಇವರನ್ನು ತಕ್ಷಣವೇ ಹೋಂ ಕ್ವಾರಂಟೈನ್ ಮಾಡಲಾಗಿತ್ತು. ಈ ನಾಲ್ವರು ಪೊಲೀಸರಲ್ಲಿ ಒಬ್ಬರು ಪಿಡಬ್ಲ್ಯೂಡಿ ಕ್ವಾಟ್ರಸ್ ನಲ್ಲಿ, ಇನ್ನಿಬ್ಬರು ಪೊಲೀಸ್ ಕ್ವಾಟ್ರಸ್ ನಲ್ಲೂ, ಮತ್ತೊಬ್ಬರು ಹೌಸಿಂಗ್ ಬೋರ್ಡ್ ನಲ್ಲಿ ವಾಸವಿದ್ದರು. ಈ ಮೂರು ಏರಿಯಾಗಳನ್ನು ಈಗ ಸೀಲ್ಡೌ ನ್ ಮಾಡಲಾಗಿದೆ.

ಬೆಂಗಳೂರಿನಲ್ಲಿ ಸೇವೆಯಲ್ಲಿದ್ದ ಹಾಸನ ಮೂಲದ ಕಾನ್ಸಸ್ಟೇಬಲ್ ಗೆ ಕೊರೊನಾ ಕಾಣಿಸಿಕೊಂಡಿತ್ತು. ಈಗ ಆ ಪೊಲೀಸ್ ಜೊತೆಗೆ ಸಂಪರ್ಕದಲ್ಲಿದ್ದ ಮತ್ತಿಬ್ಬರಿಗೆ ಕೊರೊನಾ ಸೋಂಕು ಹಬ್ಬಿದೆ ಎನ್ನಲಾಗುತ್ತಿದೆ.

ದಕ್ಷಿಣಕನ್ನಡ, ಮಂಡ್ಯ, ದಾವಣಗೆರೆ, ಕಲಬುರಗಿಯಲ್ಲೂ ಕಾನ್ಸ್ ಸ್ಟೇಬಲ್ ಗಳಿಗೆ ಕೊರೊನಾ ವಕ್ಕರಿಸಿದೆ. ಬಾಗಲಕೋಟೆಯಲ್ಲಿ ನಾಲ್ವರು ಪೊಲೀಸರಿಗೆ ಕೊರೊನಾ ಸೋಂಕು ಹಬ್ಬಿತ್ತು.

1 comment
Leave a Reply

Your email address will not be published. Required fields are marked *

You May Also Like

24 ಗಂಟೆಗಳಲ್ಲಿ ರಾಜ್ಯದಲ್ಲಿ 37 ಕೋವಿಡ್ ಪಾಸಿಟಿವ್

ಮೇ 03 ಸಂಜೆ 5 ರಿಂದ ಮೇ 04 ಸಂಜೆ 5ರ ವರೆಗೆ 37 ಹೊಸ ಕೋವಿಡ್-19 ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿದೆ.

ಭೀಕರ ದುರಂತದಲ್ಲಿ ಮೃತಪಟ್ಟವರೆಲ್ಲ ನಿಡಗುಂದಿ ಭಾಗದವರು- ಕಾಶಿಗೆ ಹೋಗಿಬಂದವರೇ ಈಗ ರಾಮೇಶ್ವರಕ್ಕೆ ಹೊರಟಿದ್ದರು

ಆಲಮಟ್ಟಿ : ಅವರೆಲ್ಲರೂ ಕಾಶಿಗೆ ಹೋಗಿ ಬಂದಿದ್ದರು. ಕಾಶಿ ದರ್ಶನ ಬಳಿಕ ರಾಮೇಶ್ವರ ದರುಶನಕ್ಕೆ ಶೃದ್ಧಾಭಕ್ತಿ…

ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಸಚಿವ ಕೆ.ಎಸ್. ಈಶ್ವರಪ್ಪ ಮುಖಭಂಗ

ಬೆಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಸಚಿವ ಕೆ.ಎಸ್. ಈಶ್ವರಪ್ಪ ಮುಖಭಂಗ ಅನುಭವಿಸಿದ್ದಾರೆ.…

ರಾಜ್ಯದಲ್ಲಿ ಸಿಎಮ್ ಬದಲಾವಣೆಗೆ ಪ್ರಯತ್ನ ನಡೆದಿಲ್ಲಾ: ಸಚಿವ ಶಟ್ಟರ್

ಹುಬ್ಬಳ್ಳಿ: ರಾಜ್ಯದಲ್ಲಿ ಸಿಎಂ ಬದಲಾವಣೆ ಪ್ರಯತ್ನ ನಡೆದಿಲ್ಲ. ಈ ವರೆಗೆ ರಾಜ್ಯ, ನಾಯಕರ ಮಟ್ಟದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಮುಂದಿನ ಎರಡು ವರ್ಷ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿರುವ ಖಚಿತ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.