ದೆಹಲಿ:ಮಹಾರಾಷ್ಟ್ರ ಪ್ರಾಕೃತಿಕ ವಿಪತ್ತಿನ ವಿರುದ್ಧ ಹೋರಾಡುತ್ತಿದೆ. ಮಹಾರಾಷ್ಟ್ರದ ದೇಶದ ದೊಡ್ಡ ಆಸ್ತಿ. ಇದು ವ್ಯವಹಾರದ ಕೇಂದ್ರ. ಆದ್ದರಿಂದ ಮಹಾರಾಷ್ಟ್ರ ರಾಜ್ಯವನ್ನು ಕೇಂದ್ರ ಸರ್ಕಾರ ಸಂಪೂರ್ಣ ಬೆಂಬಲಿಸಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳ ಕುರಿತು 1.21 ಸೆಕೆಂಡುಗಳ ವಿಡಿಯೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಅವರು, ಮಹಾರಾಷ್ಟ್ರ ಅತ್ಯಂತ ದೊಡ್ಡ ಸವಾಲನ್ನು ಎದುರಿಸುತ್ತಿದೆ. ಇಂತಹ ಸಮಯದಲ್ಲಿ ಕೇಂದ್ರ ಸರ್ಕಾರ ಇಡೀ ಮಹಾರಾಷ್ಟ್ರ ಜನತೆಗೆ ಮತ್ತು ರಾಜ್ಯ ಸರ್ಕಾರಕ್ಕೆ ಬೆಂಬಲ ನೀಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜ್ಯದಲ್ಲಿ ಸರ್ಕಾರ ಅಸ್ತಿತ್ವದಲ್ಲಿದೆ. ಇಂತಹ ಸಮಯದಲ್ಲಿ ಬಿಜೆಪಿ ಸಮರ್ಥ ವಿಪಕ್ಷವಾಗಿ ಕೆಲಸ ನಿರ್ವಹಿಸಬೇಕು. ರಚನಾತ್ಮಕವಾಗಿ ಸರ್ಕಾರದ ವಿರುದ್ಧ ದನಿ ಎತ್ತುವುದು ಯಾವುದೇ ರೀತಿಯಲ್ಲಿ ತಪ್ಪಲ್ಲ. ಅದರಿಂದ ಲಾಭವೇ ಆಗುತ್ತದೆ. ಅದರಿಂದ ನಮ್ಮ ಸರ್ಕಾರ ಸಲಹೆಗಳನ್ನು ಕೇಳಬಹುದು. ಕಲಿಯಬಹುದು. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಿ, ರಾಷ್ಟ್ರಪತಿ ಆಳ್ವಿಕೆಯನ್ನು ಹೇರುವುದರಲ್ಲೂ ಮತ್ತು ರಚನಾತ್ಮಕ ಕೆಲಸ ಮಾಡುವುದರಲ್ಲೂ ವ್ಯತ್ಯಾಸವಿದೆ ಎಂದು ಅವರು ಹೇಳಿದ್ದಾರೆ

Leave a Reply

Your email address will not be published. Required fields are marked *

You May Also Like

ಈ ವರ್ಷ ಮುಂಗಾರು ಮಳೆ ರಾಜ್ಯವನ್ನು ಯಾವಾಗ ಪ್ರವೇಶಿಸಲಿದೆ ಗೊತ್ತಾ?

ನೈರುತ್ಯ ಮುಂಗಾರು ಮಳೆ ಜೂ. 1ಕ್ಕೆ ಕೇರಳ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮುತ್ತಪ್ಪ ರೈ ಗನ್ ಮ್ಯಾನ್ ಗಳನ್ನು ಬಂಧಿಸಿದ್ದೇಕೆ?

ಬೆಂಗಳೂರು: ಮಾಜಿ ಡಾನ್, ಉದ್ಯಮಿ ಮುತ್ತಪ್ಪ ರೈ ಅಂತ್ಯ ಸಂಸ್ಕಾರವು ಅವರ ನಿವಾಸ ಬಿಡದಿಯ ತೋಟದಲ್ಲಿ…

ಸದ್ದು ಮಾಡುತ್ತಿದೆ ಶೀತಲ್ ಶೆಟ್ಟಿ ನಿರ್ದೇಶನದ ಚಿತ್ರ!

ಬೆಂಗಳೂರು : ವಿಂಡೋ ಸೀಟ್ ಗಾಗಿ ಶೀತಲ್ ಶೆಟ್ಟಿ ನಿರ್ದೇಶಕರ ಕ್ಯಾಪ್ ಹಾಕಿದ್ದು, ಸದ್ಯ ಅಧಿಕೃತ ಪ್ರಕಟಣೆ ಹೊರ ಬಂದಿದೆ.

ಮೇ.25 ರಿಂದ ವಿಮಾನಯಾನ ಸೇವೆ ಆರಂಭ

ನವದೆಹಲಿ: ಲಾಕ್ಡೌನ್ ನಿಂದ ಸ್ಥಗಿತಗೊಂಡಿದ್ದ ನಾಗರಿಕ ವಿಮಾನಯಾನ ಸೇವೆ ಮೇ.25 ರಿಂದ ಮತ್ತೆ ಆರಂಭವಾಗಲಿದೆ. ದೇಶೀಯ…