ಹುಬ್ಬಳ್ಳಿ: ರಾಜ್ಯದಲ್ಲಿ ಸಿಎಂ ಬದಲಾವಣೆ ಪ್ರಯತ್ನ ನಡೆದಿಲ್ಲ. ಈ ವರೆಗೆ ರಾಜ್ಯ, ನಾಯಕರ ಮಟ್ಟದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಮುಂದಿನ ಎರಡು ವರ್ಷ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿರುವ ಖಚಿತ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಅವರು ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಕೋರೋನಾ ಎರಡನೇ ಅಲೆಯಿಂದ ಜನರು ಸಂಕಷ್ಟದಲ್ಲಿದ್ದಾರೆ. ಈ ವೇಳೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ರಾಜಕೀಯ ಮಾಡುವುದು ಸರಿಯಲ್ಲ. ನಮ್ಮ ಸರ್ಕಾರ ಕೋರೋನಾ ನಿಯಂತ್ರಣಕ್ಕೆ ನಿರಂತರವಾಗಿ ಕೆಲಸ ಮಾಡುತ್ತಿದ್ದು, ಇದಕ್ಕೆ ಸಲಹೆ ಸೂಚನೆಗಳನ್ನು ನೀಡಬೇಕು, ಅದನ್ನು ಬಿಟ್ಟು ದಿನಪೂರ್ತಿ ಟೀಕೆ ಮಾಡುವುದು ಸರಿಯಲ್ಲ. ಹೀಗಾಗಿಯೇ ಕಾಂಗ್ರೆಸ್ ಅವನತಿಗೆ ಕಾರಣ ಎಂದು ವ್ಯಂಗ್ಯವಾಡಿದರು.
ಇನ್ನು ಕಾಂಗ್ರೆಸ್ 100 ಕೋಟಿ ಸರ್ಕಾರಕ್ಕೆ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ನವರ ತಮ್ಮ ಸ್ವಂತ ಹಣವನ್ನು ಕೊಟ್ಟಿಲ್ಲ. ಸುಮ್ಮನೆ ಪ್ರಚಾರಕ್ಕೆ ಇಲ್ಲಸಲ್ಲದನ್ನು ಮಾಡುವುದು ಸರಿಯಲ್ಲ. ಈ ಸಂದಿಗ್ಧ ಸಮಯದಲ್ಲಿ ಒಂದು ಒಳ್ಳೆಯ ಪ್ರತಿಪ್ರಕ್ಷವಾಗಿ ಕೆಲಸ ಮಾಡುವುದು ಉತ್ತಮ ಎಂದರು.

Leave a Reply

Your email address will not be published.

You May Also Like

ಚುನಾವಣೆ ಮುಂದೂಡಲು ಸರ್ಕಾರದ ಹುನ್ನಾರ: ತಾಪಂ ರದ್ದು ವಿಚಾರಕ್ಕೆ ಶಾಸಕ ಎಚ್.ಕೆ. ಪಾಟೀಲ ಕಿಡಿ

ರಾಜ್ಯ ಸರ್ಕಾರ ತಾಲೂಕು ಪಂಚಾಯತಿಯನ್ನು ರದ್ದು ಪಡಸಲು ಮುಂದಾಗಿದ್ದು, ಸAವಿಧಾನದಲ್ಲಿ ತಿದ್ದುಪಡಿಯಾಗಿದ್ದನ್ನು ರಾಜ್ಯ ಸರಕಾರ ರದ್ದು ಪಡಿಸೋಕೆ ಬರುವದಿಲ್ಲ. ಆದರೆ ಯಾವ ಆಧಾರದ ಮೇಲೆ ಸರ್ಕಾರ ಈ ನಿರ್ಧಾರಕ್ಕೆ ಮುಂದಾಗಿದೆ ಎಂದು ಮಾಜಿ ಸಚಿವ, ಶಾಸಕ ಎಚ್.ಕೆ.ಪಾಟೀಲ್ ಪ್ರಶ್ನಿಸಿದರು.

ಅವೈಜ್ಞಾನಿಕ ಚರಂಡಿ ನಿರ್ಮಾಣ 50ಕ್ಕೂ ಮನೆಗಳಿಗೆ ನುಗ್ಗಿದ ಮಳೆ ನೀರು ಗ್ರಾಮಸ್ಥರ ಆರೋಪ

ಉತ್ತರಪ್ರಭ ಸುದ್ದಿ ನರೇಗಲ್: ಸಮೀಪದ ಕಳಕಾಪುರ ಗ್ರಾಮದಲ್ಲಿ ಶನಿವಾರ ರಾತ್ರಿ ಸುರಿದ ಮಳೆಯ ನೀರು 50ಕ್ಕೂ…

ಉಡುಪಿಯಲ್ಲಿ ಕ್ವಾರಂಟೈನ್ ಆದವರಿಗೆ ಮಂಗಳೂರಿನಲ್ಲಿ ಸೋಂಕು!

ಮಂಗಳೂರು: ಉಡುಪಿಯಲ್ಲಿ ಕ್ವಾರಂಟೈನ್ ಮುಗಿಸಿ ನಂತರ ಮಂಗಳೂರಿಗೆ ಬಂದಿದ್ದ 7 ಜನರಲ್ಲಿ ಕೊರೊನಾ ಸೋಂಕು ಇರುವುದು…

ಅತಿಥಿ ಉಪನ್ಯಾಸಕರು: ಅವೈಜ್ಞಾನಿಕ ಹೊಸ ಆದೇಶ ರದ್ದು ಪಡಿಸಲು ಆಗ್ರಹ

ಉತ್ತರಪ್ರಭ ಸುದ್ದಿ ನರೇಗಲ್:‌ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ…