ಹೊಸದೆಹಲಿ: ಇಲ್ಲಿನ ಏಮ್ಸ್‌ ಆಸ್ಪತ್ರೆಯ ವೈದ್ಯರು ಹೊಸ ಅಧ್ಯಯನ ಮಾಡಲು ಮುಂದಾಗಿದ್ದಾರೆ.
ಕರೋನಾ ವೈರಸ್‌ ಮೃತ ಶರೀರದಲ್ಲಿ ಎಷ್ಟು ದಿನಗಳ ಕಾಲ ಬದುಕಲಿದೆ ಮತ್ತು ಮೃತ ಶರೀರದಿಂದ ಸೋಂಕು ಹರಡಲು ಸಾಧ್ಯವಿದೆಯೇ? ಎಂಬುದನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ.
ಈ ಸಂಶೋಧನೆಗಾಗಿ ಕೋವಿಡ್‌ 19ನಿಂದ ಮೃತ ಪಟ್ಟ ಶರೀರವೊಂದನ್ನು ಸಂಬಂಧ ಪಟ್ಟವರ ಬಳಿಯಿಂದ ಪಡೆದುಕೊಳ್ಳಲಾಗಿದೆ. ಹಾಗೂ ವೈರಾಣು ಹೇಗೆ ಅಂಗಾಂಗಳ ಮೇಲೆ ಪರಿಣಾಮ ಬೀರಲಿದೆ ಎಂಬುವುದನ್ನು ಕಂಡುಹಿಡಿಯಲು ಈ ಅಧ್ಯಯನ ಸಹಾಯವಾಗಲಿದೆ ಎಂದು ಏಮ್ಸ್‌ ಮುಖ್ಯ ವೈದ್ಯ ಡಾ. ಸುಧೀರ್‌ ಗುಪ್ತ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸತ್ತವರ ಸಂಬಂಧಿಕರ ಬಳಿಯಿಂದ ಸಮ್ಮತಿ ಪತ್ರವನ್ನು ಪಡೆಯಲಾಗಿದೆ. ಈ ಅಧ್ಯಯನದಲ್ಲಿ ರೋಗಶಾಸ್ತ್ರ ಮತ್ತು ಸೂಕ್ಷ್ಮ ಜೀವವಿಜ್ಞಾನದಂತಹ ಅನೇಕ ವಿಭಾಗಗಳು ಭಾಗಿಯಾಗಲಿವೆ.
ದೆಹಲಿಯ ಎಮ್ಸ್ ನ ಈ ಪ್ರಯತ್ನವೇ ಇಂಥಹ ಸಂಶೋದನೆಯ ಮೊದಲ ಪ್ರಯತ್ನ ಎನ್ನಲಾಗಿದೆ.
ಕರೋನಾ ವೈರಾಣು ಮೃತ ಶರೀರದಲ್ಲಿ ಹೇಗೆ ವರ್ತಿಸುತ್ತದೆ, ಹೇಗೆ ಪರಿಣಾಮ ಬೀರುತ್ತದೆ ಮತ್ತು ಶರೀರದಲ್ಲಿ ಎಷ್ಟು ದಿನಗಳ ಕಾಲ ಈ ವೈರಾಣು ಬದುಕಬಲ್ಲದು ಎಂಬುವುದನ್ನು ಕಲೆಹಾಕಲು ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

You May Also Like

ಗಣೇಶ ಸಂಭ್ರಮ- ಸಾಂಸ್ಕೃತಿಕ ಕಲರವ

ಉತ್ತರಪ್ರಭ ಸುದ್ದಿಆಲಮಟ್ಟಿ: ಇಲ್ಲಿನ ವಿವಿಧ ಬಡಾವಣೆಯಲ್ಲಿ ಗಣೇಶ ಉತ್ಸವ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಹಲ ಗಜಾನನ ಯುವಕ…

ಕೃಷ್ಣೆಯ ಒಡಲಿಗೆ ಸಿಎಂ ಬಾಗಿನ ಅರ್ಪಣೆ

ಉತ್ತರಪ್ರಭ ಸುದ್ದಿಆಲಮಟ್ಟಿ: ಮುಸುಕು ಮುಸುಕು.ಕೂಲ್ ಥಂಢಾ ಸಂಭ್ರಮದ ವಾತಾವರಣ. ಹೂ, ಸಸ್ಯ ಗುಚ್ಚುಗಳ ಸೊಬಗು. ತಳಿರು…

ಸೀಲ್ ಡೌನ್ ಹೆಸರಿನಲ್ಲಿ ನಡೆಯಿತೇ ಕೋಟಿ ಕೋಟಿ ಅವ್ಯವಹಾರ?

ಕೊರೊನಾ ಸೋಂಕಿತರ ಮನೆಯ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗುತ್ತಿದೆ. ಈ ಹಿಂದೆ ಇದರ ಪ್ರಮಾಣ ತುಸು ಹೆಚ್ಚಾಗಿತ್ತು. ಆದರೆ, ಈ ಸಂದರ್ಭದಲ್ಲಿ ದೊಡ್ಡ ಪ್ರಮಾಣದ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.

ಪಾಪನಾಶಿ: ಟೋಲ್ ಗೇಟ್ ತೆರುವುಗೊಳಿಸಲು ಆಗ್ರಹಿಸಿ ಪ್ರತಿಭಟನೆ

ಇಲ್ಲಿನ ಪಾಪನಾಶಿ ಹತ್ತಿರದಲ್ಲಿರುವ ಟೋಲ್ ಗೇಟ್ ಅವೈಜ್ಞಾನಿಕವಾಗಿ ಸ್ಥಾಪಿಸಲಾಗಿದೆ. ಸಂಪೂರ್ಣ ಎತ್ತರ ಹಾಗೂ ತಿರುವಿನಲ್ಲಿ ಟೋಲ್ ಗೇಟ್ ಇದೆ.