ಗದಗ: ಇಲ್ಲಿನ ಪಾಪನಾಶಿ ಹತ್ತಿರದಲ್ಲಿರುವ ಟೋಲ್ ಗೇಟ್ ಅವೈಜ್ಞಾನಿಕವಾಗಿ ಸ್ಥಾಪಿಸಲಾಗಿದೆ. ಸಂಪೂರ್ಣ ಎತ್ತರ ಹಾಗೂ ತಿರುವಿನಲ್ಲಿ ಟೋಲ್ ಗೇಟ್ ಇದೆ. ತಿರುವಿನಲ್ಲಿ ಇರುವ ಟೋಲ್ ಗೇಟ್ ವಾಹನ ಸವಾರರಿಗೆ ಕಾಣುವುದಿಲ್ಲ. ಇದರಿಂದ ಏಕಾಏಕಿ ಟೋಲ್ ಗೇಟ್ ನೋಡಿದ ಸವಾರರು ಬ್ರೇಕ್ ಹಾಕಿದ ಪರಿಣಾಮ ಅಪಘಾತಗಳಾಗುತ್ತಿದ್ದು ಕೂಡಲೇ ಟೋಲ್ ಗೇಟ್ ತೆರುವುಗೊಳಿಸಬೇಕು ಎಂದು ಜಯಕರ್ನಾಟಕ ಸಂಘಟನೆ ಒತ್ತಾಯಿಸಿದೆ.

ಈ ಕುರಿತು ಜಿಲ್ಲಾಧಿಕಾರಿಗಳಿಗೆ ಇಂದು ಮನವಿ ಸಲ್ಲಿಸಿ ಗದಗ ದಿಂದ 10 ಕಿಲೋಮೀಟರ್ ಇರುವ ಟೋಲ್ ಗೇಟ್ ಸಮೀಪದಲ್ಲಿಯೇ ರಸ್ತೆ ಸರಿಯಾಗಿಲ್ಲ. ಇಂತಹ ಹದಗೆಟ್ಟ ರಸ್ತೆಯಲ್ಲಿ ಸಂಚರಿಸುವ ವಾಹನಗಳು 100-200-250 ರೂ ಹಣ ಕೊಡುವುದು ಯಾವ ನ್ಯಾಯ? ರಾಜ್ಯಾದ್ಯಂದ ರಾಜ್ಯ ಹೆದ್ದಾರಿಗಳಲ್ಲಿ ಎಲ್ಲಿಯೂ ಇರದ ಟೋಲ್ ಗೇಟ್ ಇಲ್ಲಿಯೇ ಏಕೆ? ಎಂದು ಮನವಿಯಲ್ಲಿ ಪ್ರಶ್ನಿಸಿದ್ದಾರೆ.

ಗದಗ ಹಾಗೂ ಮುಂಡರಗಿ ಜನರಿಗೆ ತೊಂದರೆಯಾಗುವ ಈ ಟೋಲ್ ಗೇಟ್ ಯಾಕೆ ಬೇಕು? ಈ ಟೋಲ್ ಗೇಟ್ ಪ್ರಾರಂಭವಾದ ದಿನದಿಂದ ಗದಗ-ಮುಂಡರಗಿ ಮತ್ತು ಗದಗ ದಿಂದ ಇತರೇ ಹಳ್ಳಿಗಳಿಗೆ ಹೋಗುವ ಎಲ್ಲ ಬಸ್ ದರಗಳನ್ನು ಏರಿಕೆ ಮಾಡಿದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ.

ಈಗಾಗಲೇ ಟೋಲ್ ಗೇಟ್ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗಿದ್ದವು. ಲಾಕ್ ಡೌನ್ ಹಿನ್ನೆಲೆ ಬಂದ್ ಆಗಿದ್ದ ಟೋಲ್ ಗೇಟ್ 31-05-2020 ರಂದು ಮತ್ತೆ ಆರಂಭವಾಗಿದ್ದು ಕೊರೊನಾದ ಈ ಸಂಕಷ್ಟದಲ್ಲಿ ಜನರಿಗೆ ಆರ್ಥಿಕ ಹೊರೆಯೇ ಸರಿ. ಡೋಣಿ, ಡಂಬಳ, ಪಾಪನಾಶಿ, ಕದಾಂಪೂರ, ಮುಂಡರಗಿ ಹಾಗೂ ಅಕ್ಕಪಕ್ಕದ ಹಳ್ಳಿಗಳ ರೈತರು ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಟೋಲ್ ಗೇಟ್ ತೆರುವುಗೊಳಿಸಿ ಜನರಿಗೆ ನೆಮ್ಮದಿ ಒದಗಿಸಬೇಕು. ಶಿಘ್ರ ಟೋಲ್ ಗೇಟ್ ತೆರುವುಗೊಳಿಸದೇ ಇದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಜಯಕರ್ನಾಟಕ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ್ ಚೌವ್ಹಾಣ್, ಜಿಲ್ಲಾದ್ಯಕ್ಷ ಹಾಲಪ್ಪ ವರವಿ, ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *

You May Also Like

ವಿಪ ಸದಸ್ಯ ಪ್ರಸನ್ನಕುಮಾರ್ ಅವರ ಪುತ್ರ ನಿಧನ!

ಶಿವಮೊಗ್ಗ : ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್ ಅವರ ಪುತ್ರ ಸುಹಾಸ್ (31) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಎ.ಪಿ.ಎಮ್.ಸಿ ಅಧ್ಯಕ್ಷರ ಆಯ್ಕೆ: ತಡೆಯಾಜ್ಞೆ ತೆರವು ಗೊಳಸಿ ಪ್ರಕರಣ ಮುಂದುವರೆಸಿದ ನ್ಯಾಯಾಲಯ

ಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೇ ನಡೆದಿತ್ತು. ಇದರಲ್ಲಿ ಬಿಜೆಪಿಯ ರವೀಂದ್ರ ಉಪ್ಪಿನಬೆಟಗೇರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ನಂತರದ ಬೆಳವಣಿಗೆಯಲ್ಲಿ ಈ ಬಗ್ಗೆ ಚುನಾವಣೆ ಪ್ರಕ್ರಿಯೇ ಪ್ರಶ್ನಿಸಿ ಹಿಂದಿನ ಅವಧಿಯ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ್ ನ್ಯಾಯಾಲಯ ಮೆಟ್ಟಿಲೇರಿದ್ದರು. ಇದರಿಂದ ಜಿಲ್ಲಾ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು.

ಲಕ್ಷ್ಮೇಶ್ವರದಲ್ಲಿ ಜನೌಷಧಿ ಕೇಂದ್ರ ಉದ್ಘಾಟಿಸಿದ ಸುನೀಲ್ ಮಹಾಂತಶೆಟ್ಟರ್

ಜನರಿಗೆ ಅಗ್ಗದ ದರದಲ್ಲಿ ಗುಣಮಟ್ಟದ ಔಷಧಿಗಳನ್ನು ಕೊಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದ್ದು, ಜನೌಷಧಿ ಮೂಲಕ ಜನರಿಗೆ ಶೇ.10 ರಿಂದ ಶೇ.90ರವರೆಗೆ ರಿಯಾಯತಿ ದರದಲ್ಲಿ ಔಷಧಿ ವಿತರಿಸಲಾಗುತ್ತಿದೆ ಎಂದು ಕೆಸಿಸಿ ಬ್ಯಾಂಕ ನಿರ್ದೇಶಕ ಸುನೀಲ ಮಹಾಂತಶೆಟ್ಟರ ಹೇಳಿದರು.