ಹಿರಿಯರು ದೇವರ ಹೆಸರಿನಲ್ಲಿ ಉಪವಾಸ ಎಂಬ ಪದ್ಧತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಆದರೆ, ಅದರ ಹಿಂದೆ ವೈಜ್ಞಾನಿಕ ಸತ್ಯವೂ ಇದೆ.

ನಿರ್ದಿಷ್ಟ ಅವಧಿಯ ವರೆಗೆ ಘನ ಆಹಾರ, ನಿಕೋಟಿನ್ ಮತ್ತು ಕೆಫೀನ್ ನಂತಹ ಅಂಶಗಳನ್ನು ಸೇವಿಸದೇ ಇರುವುದು ಉಪವಾಸದ ಕ್ರಮ. ಈ ಮಾತು ದೀರ್ಘಕಾಲದ ಕಾಯಿಲೆಗಳನ್ನು ಗುಣಪಡಿಸುವಲ್ಲಿ, ಈಗಲೂ ಉಪಯುಕ್ತವೆನ್ನುವುದನ್ನು ವೈದ್ಯಕೀಯ ಕ್ಷೇತ್ರ ಅಂಗೀಕರಿಸಿದೆ.

ವೈದ್ಯಕೀಯ ಡಾಟಾ ಹಾಗೂ ಸಂಶೋಧಾನೆ ಆಧಾರಿತ ಅಂಶಗಳಿಂದ ಕ್ಯಾಲೊರಿಗಳಿಗೆ ಕಡಿವಾಣ ಹಾಕುವುದು ಹಾಗೂ ಉಪವಾಸ ಮಾಡುವುದರಿಂದ ಅಧಿಕ ರಕ್ತದೊತ್ತಡ, ಚಯಾಪಚಯ ಸಮಸ್ಯೆಗಳು, ಉರಿಯೂತದ ಕಾಯಿಲೆಗಳು, ಮಾನಸಿಕ ಅಸ್ವಸ್ಥತೆಗಳು ಮತ್ತು ಅಟೊಪಿಕ್ ಸಮಸ್ಯೆಗಳಿಗೆ ವೈದ್ಯಕೀಯ ಪ್ರಯೋಜನಗಳಾಗುವುದು ಸ್ಪಷ್ಟವಾಗಿದೆ. 

ಭಾರತದಲ್ಲಿ ಶೇ.61 ರಷ್ಟು ಸಾವುಗಳು ಸಾಂಕ್ರಾಮಿಕವಲ್ಲದ ಆರೋಗ್ಯ ಸಮಸ್ಯೆಗಳಿಂದ ಸಂಭವಿಸುತ್ತಿದ್ದು, ಈ ರೀತಿಯ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವುದಕ್ಕೆ ಹಾಗೂ ತಡೆಗಟ್ಟುವುದಕ್ಕೆ ಉಪವಾಸ ವಿಧಾನ ಅತ್ಯವಶ್ಯ ಎಂದು ವೈದ್ಯಕೀಯ ಲೋಕ ಹೇಳುತ್ತಿದೆ.

ಇದನ್ನು ಕ್ರಮಬದ್ಧವಾಗಿ ಆಚರಿಸಿದರೆ ಹೊಸ ಚೈತನ್ಯ ಮೂಡಿ, ಬಯಕೆಗಳನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ಉಪವಾಸದ ಅವಧಿಯಲ್ಲಿ ತಾಜಾ ಹಣ್ಣಿನ ಜ್ಯೂಸ್, ನಿಂಬೆ ಹಣ್ಣಿನ ರಸ, ಜೇನುತುಪ್ಪ, ವೆಜಿಟೆಬಲ್ ಸೂಪ್ ಗಳನ್ನು ಸೇವಿಸುವ ಮೂಲಕ ದಿನವೊಂದಕ್ಕೆ ಕ್ಯಾಲೋರಿಯನ್ನು ಗರಿಷ್ಠ 300ಕ್ಕೆ ಸೀಮಿತಗೊಳಿಸಬಹುದಾಗಿದ್ದು ಈ ಪ್ರಕ್ರಿಯೆ  ಪಿತ್ತಜನಕಾಂಗ, ಮೂತ್ರಪಿಂಡಗಳು, ಕರುಳುಗಳು, ಚರ್ಮ ಮತ್ತು ಶ್ವಾಸಕೋಶಗಳ ಸ್ವಾಸ್ಥ್ಯವಾಗಿರಿಸುತ್ತದೆ.

ಉಪವಾಸದ ಅವಧಿಯಲ್ಲಿ ಚಟುವಟಿಕೆಗಳು ಹಾಗೂ ವಿಶ್ರಾಂತಿಯ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಗಮನಾರ್ಹ ಸಂಗತಿ. ಒಮ್ಮೆ ಉಪವಾಸದ ನಂತರ ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳುವುದಕ್ಕೆ ಸಾವಧಾನದಿಂದ ಘನ ಆಹಾರಗಳನ್ನು ಪುನಃ ಸೇವಿಸಬೇಕಾಗುತ್ತದೆ. ಉಪವಾಸ ಪ್ರಕ್ರಿಯೆ ಚಯಾಪಚಯ, ಹೃದಯರಕ್ತನಾಳದ ಮತ್ತು ಮಾನಸಿಕ ಪರಿಣಾಮಗಳನ್ನು ಹೊಂದಿರುತ್ತದೆಯಾದ್ದರಿಂದ ಇವುಗಳ ಬಗ್ಗೆ ಸಂಪೂರ್ಣ ನಿಗಾವಹಿಸಬೇಕಾಗುತ್ತದೆ.

Leave a Reply

Your email address will not be published. Required fields are marked *

You May Also Like

GTTC ಸಂಸ್ಥೆ ಧಾರವಾಡದಲ್ಲಿ ಯೋಗ ದಿನಾಚರಣೆ

ಉತ್ತರಪ್ರಭಧಾರವಾಡ: ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ರಾಯಾಪುರ ಧಾರವಾಡದಲ್ಲಿ 8 ನೇ ಅಂತಾರಾಷ್ಟ್ರೀಯ ಯೋಗ…

ಅಪ್ರಾಪ್ತೆ ಅಪಹರಿಸಿದ್ದವನಿಗೂ ಬಂತು ಕೊರೊನಾ – ಪೊಲೀಸರು ಕ್ವಾರಂಟೈನ್!

ಮಂಗಳೂರು : ಅಪ್ರಾಪ್ತೆಯನ್ನು ಅಪಹರಿಸಿ ಮದುವೆಯಾದ ಆರೋಪಿಗೆ ಕೊರೊನಾ ಸೋಂಕು ತಗುಲಿದ ಘಟನೆ ದಕ್ಷಿಣ ಕನ್ನಡ…

ಬಾಲೆಹೊಸೂರಿನಲ್ಲಿ ಬಾಳೇ ಬಲು ಕಷ್ಟ: ಸೀಲ್ ಡೌನ್ ಏರಿಯಾವೊಂದರ ಅಳಲು

ಗದಗ: ಇದು ಒಂದು ಸೀಲ್ ಡೌನ್ ಕಥೆಯಲ್ಲ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸೂರಿನಲ್ಲಿ ಪಾಸಿಟಿವ್…

ಗೋಲ್ಡನ್ ಸ್ಟಾರ್ ಗೆ ಅಡ್ವಾನ್ಸ್ ವಿಶ್ ಮಾಡಿದ ಕಿಚ್ಚ

ಬೆಂಗಳೂರು : ಕಿಚ್ಚ ಸುದೀಪ್ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಅಡ್ವಾನ್ಸ್ ವಿಶ್ ಮಾಡಿದ್ದಾರೆ. ಗೋಲ್ಡನ್…