ಬೆಂಗಳೂರು: ವೆವ್ರ ಸಂಸ್ಥೆ ಮತ್ತು ಪೋರ್ಚುಗೀಸ್ ನ ಇನೋವೇವ್ ಗ್ರೂಪ್ ಸಹಯೋಗದಲ್ಲಿ ಆರಂಭಿಸಿರುವ ಹೆಲ್ತ್ ಕೇರ್ ಪಾಡ್ ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಚಾಲನೆ ನೀಡಿದರು.

ನಗರದಲ್ಲಿ ಆನ್ ಲೈನ್ ಮೂಲಕ ನಡೆದ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ವೆವ್ರ ಪಾಡ್ ಸೌಲಭ್ಯವನ್ನು ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, “ಈ ಪಾಡ್ ಗಳು ಚಲಿಸುವ ಆಸ್ಪತ್ರೆಯಂತಿದ್ದು, ಎಲ್ಲಿ ಬೇಕಾದರೂ ಅಳವಡಿಸಬಹುದಾಗಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಒಳಗೊಂಡಿರುವ ಈ ವ್ಯವಸ್ಥೆಯಿಂದ ರೋಗ ಹರಡುವಿಕೆಯನ್ನು ತಡೆಗಟ್ಟಬಹುದಾಗಿದೆ.

ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದ ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಸುಧಾರಣೆಯನ್ನೇ ತರಬಹುದು. ತಂತ್ರಜ್ಞಾನ ಕ್ಷೇತ್ರದ ನವೋದ್ಯಮಗಳು ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಕಡಿಮೆ ವೆಚ್ಚದಲ್ಲಿ ಜನರಿಗೆ ಸೌಲಭ್ಯಗಳನ್ನು ಮಾಡಿಕೊಡುವ ಪ್ರಯತ್ನ ಮಾಡಬೇಕು” ಎಂದರು.

ಪಾಡ್ ನಲ್ಲಿ ಏನಿದೆ?
ಒಂದು ಪಾಡ್ ನಲ್ಲಿ 4 ರಿಂದ 9 ಹಾಸಿಗೆಗಳಿರುತ್ತವೆ. ಈ ಪಾಡ್ ಗಳನ್ನು ಅಳವಡಿಸಲು 500 ಚದರ ಅಡಿ ಜಾಗ ಬೇಕಾಗುತ್ತದೆ. ಇವುಗಳನ್ನು ಆಸ್ಪತ್ರೆ, ಪಾರ್ಕಿಂಗ್ ಅಥವಾ ಯಾವುದೇ ಸುರಕ್ಷಿತವಾದ ಜಾಗದಲ್ಲಿ ಅಳವಡಿಸಬಹುದು.

ಕಾರ್ಯಕ್ರಮದಲ್ಲಿ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್, ಎಂಸಿಐ ಸದಸ್ಯ ಡಾ.ವಿವೇಕ್ ಜವಳಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

You May Also Like

ಗ್ರಾ.ಪಂ ಸದಸ್ಯರ ಸರ್ವಾಧಿಕಾರ ಖಂಡಿಸಿ ರೈತರ ಆಕ್ರೋಶ

ಉತ್ತರಪ್ರಭ ಮುಳಗುಂದ: ಗ್ರಾಮ ಪಂಚಾಯ್ತಿ ಯಿಂದ ಕೇಂದ್ರ ಸರ್ಕಾರದ ವರೆಗೂ ಕಾರ್ಯವೈಕರಿಯನ್ನ ಪ್ರಶ್ನಿಸುವ ಮತ್ತು ಸೌಲಭ್ಯಗಳನ್ನ…

ಗದಗ ಜಿಲ್ಲೆಯಲ್ಲಿಂದು 39 ಪಾಸಿಟಿವ್ : ಸೋಂಕಿನ ಮಿಂಚಿನ ಓಟ!

ಜಿಲ್ಲೆಯಲ್ಲಿಂದು 39 ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 370 ಕ್ಕೆ ಏರಿಕೆಯಾಗಿದೆ. ಒಟ್ಟು ಗುಣಮುಖ ಹೊಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರ ಸಂಖ್ಯೆ 194.

ಅತಿಥಿ ಉಪನ್ಯಾಸಕರು: ಅವೈಜ್ಞಾನಿಕ ಹೊಸ ಆದೇಶ ರದ್ದು ಪಡಿಸಲು ಆಗ್ರಹ

ಉತ್ತರಪ್ರಭ ಸುದ್ದಿ ನರೇಗಲ್:‌ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ…

ಕಾಂಗ್ರೆಸ್ ಆಕಾಂಕ್ಷಿಗಳಿಗೆ ಅರ್ಜಿ ಸಲ್ಲಿಸಲು ಮೂಂದುಡಲು ಕಾರಣವೆನು…?

ಉತ್ತರಪ್ರಭಚುನಾವಣೆ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಈಗಾಗಲೇ ಸಾಕಷ್ಟು ಸಂಚಲನ ಮೂಡಿಸಿದ್ದ. ಸಿದ್ದರಾಮಯ್ಯ, ಡಿಕೆಶಿ…