ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇಂದು ಕೂಡ ಸೋಂಕಿತರ ಸಂಖ್ಯೆ ಶತಕ ದಾಟಿದೆ.
ಇಂದು ಬರೋಬ್ಬರಿ 105 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ 1,710ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಮರಳಿರುವ ಜನರಲ್ಲಿ ಸೋಂಕು ಹೆಚ್ಚಾಗಿ ಕಾಣಿಸುತ್ತಿದೆ. ಹಾಸನ ಹಾಗೂ ಮಂಡ್ಯ ಜಿಲ್ಲೆ ಮಹಾರಾಷ್ಟ್ರ ಕೊರೊನಾ ಸಂಕಷ್ಟ ಉಂಟು ಮಾಡಿದೆ. ಪರಿಣಾಮ ರಾಜ್ಯದಲ್ಲಿ ಇಂದು ಒಂದೇ ದಿನ 105 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿದ ಬುಲೆಟಿನ್ ಪ್ರಕಾರ, ಇಂದು ಚಿಕ್ಕಬಳ್ಳಾಪುರ 45, ಹಾಸನ 14, ತುಮಕೂರು 8, ಬೀದರ್ 6, ಬೆಂಗಳೂರು, ಚಿಕ್ಕಮಗಳೂರು ಜಿಲ್ಲೆಯಲ್ಲಿ ತಲಾ 5, ವಿಜಯಪುರ, ಬೆಂಗಳೂರು ಗ್ರಾಮಾಂತರ 4, ದಾವಣಗೆರೆ, ಹಾವೇರಿ, ಮಂಡ್ಯ ಜಿಲ್ಲೆಯಲ್ಲಿ ತಲಾ 3, ಧಾರವಾಡ 2, ಬಾಗಲಕೋಟೆ, ಚಿತ್ರದುರ್ಗ, ದಕ್ಷಿನ ಕನ್ನಡ, ಉತ್ತರ ಕನ್ನಡ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.

Leave a Reply

Your email address will not be published. Required fields are marked *

You May Also Like

ರಾಜ್ಯದಲ್ಲಿಂದು 1105 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ರಾಜ್ಯದಲ್ಲಿಂದು 1105 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 14295 ಕ್ಕೆ ಏರಿಕೆಯಾದಂತಾಗಿದೆ.

6 ತಿಂಗಳ ನಂತರವೂ ಕೇಂದ್ರಕ್ಕೆ ಗೊಂದಲವೇ?: ಕವಾಟವಿರುವ ಎನ್-95 ಮಾಸ್ಕ್ ಅಪಾಯಕಾರಿ’

ಕೇಂದ್ರ ಆರೋಗ್ಯ ಸೇವೆಗಳ ಡೈರೆಕ್ಟರ್ ಜನರಲ್ ಹೊರಡಿಸಿದ ಸುತ್ತೋಲೆ ಈಗ ಜನರನ್ನು ಗೊಂದಲಕ್ಕೆ ತಳ್ಳಿದೆ.ಸದ್ಯ ಬಳಕೆಯಲ್ಲಿರುವ ಕವಾಟ ಅಥವಾ ರಂಧ್ರಗಳಿರುವ ಎನ್-95 ಮಾಸ್ಕ್ ಸೋಂಕು ತಡೆಯಲಾರವು.

ಆಲಮಟ್ಟಿಗೆ ಸಿಎಂ ಆಗಮನ – ಬಿಗಿ ಭದ್ರತೆ ನಿಯೋಜನೆ

ಆಲಮಟ್ಟಿ : ರಾಜ್ಯದ ದೊರೆ ಆಗಮನದ ಹಿನ್ನೆಲೆಯಲ್ಲಿ ಉದ್ಯಾನ ನಗರಿ ಆಲಮಟ್ಟಿ ಸಕಲ ಭದ್ರತಾ ಸಿದ್ದತೆಯೊಂದಿಗೆ…