ನವದೆಹಲಿ: ಅಂಫಾನ್ ಚಂಡಮಾರುತಕ್ಕೆ ಕಂಗಾಲಾಗಿರುವ ಪಶ್ಚಿಮ ಬಂಗಾಳಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ ನೀಡಿದ್ದು, ಪರಿಸ್ಥಿತಿ ಅವಲೋಕನ ನಡೆಸುತ್ತಿದ್ದಾರೆಂದು ವರದಿಗಳಿಂದ ಶುಕ್ರವಾರ ತಿಳಿದು ಬಂದಿದೆ.

ನಿನ್ನೆಯಷ್ಟೇ ವೈಮಾನಿಕ ಸಮೀಕ್ಷೆ ನಡೆಸಲು ಪಶ್ಚಿಮಬಂಗಾಳಕ್ಕೆ ತೆರಳುತ್ತೇನೆಂದು ತಿಳಿಸಿದ್ದ ಪ್ರಧಾನಿ ಮೋದಿಯವರು ಇಂದು ಬೆಳಿಗ್ಗೆ ನವದೆಹಲಿಯಿಂದ ಪಶ್ಚಿಮ ಬಂಗಾಳಕ್ಕೆ ತೆರಳಿದ್ದಾರೆ. ಇದರಂತೆ ರಾಜ್ಯಕ್ಕೆ ಆಗಮಿಸಿದ ಪ್ರಧಾನಮಂತ್ರಿಗಳನ್ನು ಸ್ವತಃ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರೇ ಸ್ವಾಗತಿಸಿದರು.

ಇದೀಗ ಮೋದಿಯವರು ವೈಮಾನಿಕ ಸಮೀಕ್ಷೆ ನಡೆಸುತ್ತಿದ್ದು, ಪ್ರಧಾನಮಂತ್ರಿಗಳಿಗೆ ಸಿಎಂ ಮಮತಾ ಬ್ಯಾನರ್ಜಿ ಕೂಡ ಸಾಥ್ ನೀಡಿದ್ದಾರೆ.

ಮಮತಾ ಬ್ಯಾನರ್ಜಿಯವರೊಂದಿಗೆ ಮಾತುಕತೆ ನಡೆಸಿದ ಬಳಿಕ, ಪ್ರಧಾನಿ ಮೋದಿಯವರು ವೈಮಾನಿಕ ಸಮೀಕ್ಷೆ ನಡೆಸಲಿದ್ದು, ಅಧಿಕಾರಿಗಳಿಂದ ಪರಿಸ್ಥಿತಿ ಕುರಿತು ಮಾಹಿತಿ ಪಡೆಯಲಿದ್ದಾರೆ. ಪರಿಸ್ಥಿತಿ ಅವಲೋಕನ ನಡೆಸಿದ ಬಳಿಕ ಸಭೆ ನಡೆಸಲಿರುವ ಮೋದಿಯವರು ನಿರಾಶ್ರಿತ ಕೇಂದ್ರ ಹಾಗೂ ಪರಿಹಾರ ಕುರಿತು ಘೋಷಣೆ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

Leave a Reply

Your email address will not be published.

You May Also Like

ಯಲಹಂಕ ಮೇಲ್ಸೇತುವೆ ಸಾವರ್ಕರ್ ಹೆಸರು: ವಿಪಕ್ಷಗಳ ವಿರೋಧ

ಯಲಹಂಕ ಮೇಲ್ಸೇತುವೆಗೆ ವಿನಾಯಕ ದಾಮೋದರ ಸಾವರ್ಕರ್ ಹೆಸರಿಡಲು ನಿರ್ಧರಿಸಲಾಗಿದೆ. ಆದರೆ, ಇದು ವಿಪಕ್ಷಗಳ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದು, ಹೊಸ ವಿವಾದಕ್ಕೆ ನಾಂದಿ ಹಾಡಿದೆ.

ನೇಪಾಳ ಮತ್ತು ಲಂಕಾದಲ್ಲಿ ಇಂಧನ ಬೆಲೆ ಅಗ್ಗವೇಕೆ: ವಿಶ್ವಂಭರ ಪ್ರಸಾದ್

ಸೀತೆಯ ನೇಪಾಳ ಹಾಗೂ ರಾವಣನ ಲಂಕಾದಲ್ಲಿ ಪೆಟ್ರೋಲ್ ದರ ಏಕೆ ಅಗ್ಗವಾಗಿದೆ ಎಂದು ಸಮಾಜವಾದಿ ಪಕ್ಷದ ಸಂಸದ ವಿಶ್ವಂಭರ ಪ್ರಸಾದ್ ನಿಶಾದ್ ಬುಧವಾರ ರಾಜ್ಯಸಭೆಯಲ್ಲಿ ಪ್ರಶ್ನೆ ಮಾಡಿದರು. ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಪ್ರಶ್ನಿಸಿದ ವಿಶ್ವಂಭರ ಪ್ರಸಾದ್, ಪೆಟ್ರೋಲ್ ದರವು ಸೀತಾ ಮಾತೆಯ ನೇಪಾಳ ಹಾಗೂ ರಾವಣರ ಲಂಕಾದಲ್ಲಿ ಅಗ್ಗವಾಗಿದೆ. ಹಾಗಿದ್ದರೆ ರಾಮ ಜನ್ಮಭೂಮಿ ಭಾರತದಲ್ಲಿ ಯಾವಾಗ ಕಡಿಮೆ ಮಾಡುತ್ತೀರಿ? ಎಂದು ಕೇಳಿದರು.

ತವರು ಜಿಲ್ಲೆಯ ಆರೋಗ್ಯ ಇಲಾಖೆ ಕಾರ್ಮಿಕನಿಗೆ ನ್ಯಾಯ ವದಗಿಸುವರೆ ಸಚಿವ ಶ್ರೀರಾಮುಲು..?

ಸ್ವತಃ ತಮ್ಮ ತವರು ಜಿಲ್ಲೆಯಲ್ಲಿಯೇ ಕಾರ್ಮಿಕನೊಬ್ಬನಿಗೆ ಅದರಲ್ಲೂ ತಮ್ಮ ಇಲಾಖೆಯಲ್ಲಿಯೇ ಆದ ಅನ್ಯಾಯವನ್ನು ಆರೋಗ್ಯ ಸಚಿವ ಶ್ರೀರಾಮುಲು ಸರಿ ಪಡಿಸುತ್ತಾರಾ?