ಉತ್ತರ ಪ್ರಭ ಸುದ್ದಿ
ರೋಣ : ಪಟ್ಟಣದ ಸರಕಾರಿ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯ ಶಿಥಿಲಾವಸ್ಥೆಯಲ್ಲಿರುವ ಕಟ್ಟಡವನ್ನು ಶೀಘ್ರವೇ ದುರಸ್ಥಿಗೊಳಿಸುವಂತೆ ಆಗ್ರಹಿಸಿ ರೋಣ ತಾಲೂಕ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ತಹಸೀಲ್ದಾರ್ ಮುಖಾಂತರ ಮುಖ್ಯ ಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಸರಕಾರಿ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು ದಿನೇ ದಿನೇ ಮೇಲ್ಚಾವಣೆ ಖುಸಿಯುತ್ತಿದೆ ಇಂತಹ ಕಟ್ಟಡದಲ್ಲಿ ಭಯದ ವಾತಾವರಣದಲ್ಲಿ ಉಪನ್ಯಾಸಕರು ಪಾಠಬೋಧನೆ ಮಾಡುತ್ತಿದ್ದರೆ ಆತಂಕದಲ್ಲಿಯೇ ವಿದ್ಯಾರ್ಥಿಗಳು ಕುಳಿತುಕೊಳ್ಳುವ ಸ್ಥಿತಿ ಇದ್ದರೂ ಕೂಡಾ ಯಾವೊಬ್ಬ ಜನಪ್ರತಿನಿಧಿಯಾಗಲಿ ಅಧಿಕಾರಿಯಾಗಲಿ ಇತ್ತ ಕಡೆ ಗಮನ ನೀಡದೇ ಇರುವುದರಿಂದ ವಿದ್ಯಾರ್ಥಿಗಳ ಪಾಡು ಏನಾಗುವುದು ಎಂದು ಎಬಿವಿಪಿ ತಾಲೂಕ ಸಂಚಾಲಕ ಸಚಿನ ಪಾಟೀಲ ಆಕ್ರೋಶ ವ್ಯಕ್ತ ಪಡಿಸಿದನು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಆಶೀಪ್ ಶಿರೋಳ, ಆಕಾಶ ರೋಣದ, ಬಸವರಾಜ ಪತ್ತಾರ, ಮೇಘರಾಜ ಜಿ ಗಳೂರ. ಕಿರಣ ಕಡಿಯವರ,ಮಾಲತೇಶ್ ಜೋಗಣ್ಣವರ,ವಿದ್ಯಾರ್ಥಿನಿಯರಾದ ಶೈಲಾ ರೋಣದ, ಸುನಿತಾ ಜಾಧವ, ರಂಜಿತಾ ಬಂಡಿವಡ್ಡರ, ಸಂಗಮ್ಮ ಮಾದರ, ಸಾನಿಯಾ ಕೋಲ್ಕಾರ.ಇನ್ನಿತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You May Also Like

ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಸಭೆ ಸಮಾರಂಭಗಳನ್ನು ಮುಂದೂಡಲು ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ಒಂದು ವಾರದ ಹಿಂದೆ ಧಾರವಾಡ ಎಸ್ ಡಿ ಎಮ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಕೊರೋನಾ…

ಮನೆ ಬಾಗಿಲಿಗೆ ಬರಲಿದೆ ಅಯ್ಯಪ್ಪಸ್ವಾಮಿ ಪ್ರಸಾದ

450 ರೂಪಾಯಿ ಪಾವತಿಸಿದರೆ ಮನೆಬಾಗಿಲಿಗೆ ಅಯ್ಯಪ್ಪ ಸ್ವಾಮಿ ಪ್ರಸಾದ ತಲುಪಿಸಲಾಗುತ್ತದೆ. ಭಾರತೀಯ ಅಂಚೆ ಇಲಾಖೆ ತಿರುವಾಂಕೂರು ದೇವಸ್ಥಾನ ಮಂಡಳಿಯೊಂದಿಗೆ ಈ ಬಗ್ಗೆ ಒಪ್ಪಂದ ಮಾಡಿಕೊಂಡಿದೆ.

ಸೂರ್ಯಕಾಂತಿಗೆ ಕೋರಿ ಹುಳಗಳ ದಾಳಿ-ರೈತರು ಕಂಗಾಲು

ಉತ್ತರಪ್ರಭ ಸುದ್ದಿಆಲಮಟ್ಟಿ: ಮುಂಗಾರು ಹಂಗಾಮಿನಲ್ಲಿ ಬಿತ್ತನೆಗೊಂಡಿರುವ ಸೂರ್ಯಕಾಂತಿ ಬೆಳೆ ಹುಲುಸಾಗಿ ಬೆಳೆದು ನಿಂತಿದೆ. ಹಚ್ಚು ಹಸಿರಾಗಿ…

ಸಿಂಧನೂರು: ಬಾಬುಗೌಡ ಬಾದರ್ಲಿ ನೇತೃತ್ವದಲ್ಲಿ ಕೊರೋನ್ ಜಾಗೃತಿ

ಜಿಲ್ಲಾ ಪಂಚಾಯತ ಸದಸ್ಯ ಕಾಂಗ್ರೆಸ್ ಪಕ್ಷದ ಮುಖಂಡ ಬಾಬುಗೌಡ ಬಾದರ್ಲಿ ನೇತೃತ್ವದಲ್ಲಿ ಕೊರೋನ್ ವೈರಸ್ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾಸ್ಕ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.