ನವದೆಹಲಿ: ಕೊರೋನಾ ಸೋಂಕು ಇಡೀ ಜಗತ್ತನ್ನು ತಲ್ಲಣಗೊಳಿಸಿದೆ. ಇದಕ್ಕೆ ಹಿರಿಯಣ್ಣ ಅಮೇರಿಕಾ ಕೂಡ ಹೊರತಾಗಿಲ್ಲ. ಕೊರೋನಾ ಅಟ್ಟಹಾಸಕ್ಕೆ ಅಮೇರಿಕಾ ಕೂಡ ನಲುಗಿದೆ. ಈಗಾಗಲೇ ಈ ವಿಚಾರವಾಗಿ ಚೈನಾ ಜಗತ್ತಿನ ಕೆಂಗಣ್ಣಿಗೆ ಗುರಿಯಾಗಿದೆ. ಆದರೆ ಅಮೇರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಟ್ವೀಟ್ ಮಾಡಿ ಭಾರತಕ್ಕೆ ವೆಂಟಿಲೇಟರ್ ದಾನ ನೀಡುವ ಬಗ್ಗೆ ತಿಳಿಸಿದ್ದಾರೆ.

ನಾನು ಹೆಮ್ಮೆಯಿಂದ ಹೇಳುವುದೇನೆಂದರೆ ಅಮೇರಿಕಾವು ನನ್ನ ಸ್ನೇಹಿತ ರಾಷ್ಟ್ರ ವಾದ ಭಾರತಕ್ಕೆ ವೆಂಟಿಲೇಟರ್ ಗಳನ್ನು ದಾನ ಮಾಡುತ್ತದೆ. ನಾವು ಕೂಡ ಭಾರತ ದೇಶ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿಯ ಜೊತೆಗೆ ಈ ಮಹಾಮಾರಿ ರೋಗದೊಂದಿಗೆ ಹೋರಾಡಲು ಸದಾ ಸಿದ್ಧವಾಗಿದ್ದೇವೆ. ಅದರೊಂದಿಗೆ ಲಸಿಕೆಯನ್ನು ಅಭಿವೃದ್ಧಿ ಪಡಿಸಲು ಸಹಕರಿಸುವ ವೈದ್ಯರೊಂದಿಗೆ ಕಾಣದ ಶತ್ರುವನ್ನು ಮಟ್ಟ ಹಾಕೋಣ ಎಂದು ಟ್ರಂಪ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.