ಬೆಂಗಳೂರು: ನಾನು ತಳಮಟ್ಟದಿಂದ ಬಂದವನು. ಯಾರ ಬಗ್ಗೆಯೂ ಲಘುವಾಗಿ ಮಾತಾಡಲ್ಲ. ನಾಗಮಂಗಲ ಶಾಸಕ ಸುರೇಶ್ ಗೌಡ ಅವರ ಬಗ್ಗೆ ನಾನು ಸಿಡಿ ವಿಚಾರ ಏನು ಹೇಳಿಲ್ಲ. ಅವರು ಏಕೆ ಹಾಗೆ ಮಾತಾಡಿದ್ರೊ ನನಗೆ ಗೊತ್ತಿಲ್ಲ. ನನಗೆ ಕೆಲಸ ಮಾಡೋದಷ್ಟೆ ಗೊತ್ತು, ನನಗೆ ಯಾವುದೇ ಭಯ ಇಲ್ಲ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ಹೇಳಿದರು.

ವಿಕಾಸ ಸೌಧದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಸಚಿವರು, ನಾನು ಶಾಸಕ ಸುರೇಶ್ ಗೌಡ ಅವರ ಸಿಡಿ ಬಿಡುಗಡೆ ಮಾಡುತ್ತೇನೆ, ಸಿಡಿ ಇದೆ ಎಂಬ ವಿಚಾರ ಹೇಳಿಲ್ಲ‌. ಸಿಡಿ ಮಾಡೋದು, ಮಾಡಿಸೋದು ನನ್ನ ಸ್ವಭಾವ ಅಲ್ಲ. ಯಾವತ್ತೂ ಅಂತ ಕೆಲಸ ಮಾಡೋದಿಲ್ಲ. ಹೊಟ್ಟೆ ಬಟ್ಟೆಗಾಗಿ ದೇಶಾಂತರ ಹೋದವನು ನಾನು. ಮಹಾರಾಷ್ಟ್ರದಲ್ಲೆ ಎಲ್ಲವನ್ನು ಎದುರಿಸಿಯೇ ಬದುಕು ಕಟ್ಟಿಕೊಂಡಿದ್ದೇನೆ. ಯಾವುದಕ್ಕೂ ಹೆದರುವ ಜಾಯಮಾನ ನನ್ನದಲ್ಲ. ಜಿಲ್ಲೆಯಲ್ಲಿ ಒಳ್ಳೆ ಕೆಲಸ ಮಾಡಿ, ಸರ್ಕಾರಕ್ಕೂ ಉತ್ತಮ ಹೆಸರು ತರುವುದು ನನ್ನ ಉದ್ದೇಶ ಅಷ್ಟೆ.

ನಾವೆಲ್ಲರೂ ಒಂದೇ ಪಕ್ಷದಲ್ಲಿ ಇದ್ದವರು. ಆದರೂ ನಾನು ಮಾತ್ರ ಈಗ ಅವರೆಲ್ಲರ ಸಹಮತದೊಂದಿಗೇ ಮಂಡ್ಯ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಈಗಲೂ ಜಿಲ್ಲೆಯ ಎಲ್ಲ ಶಾಸಕರು ಪ್ರೀತಿಯಿಂದ ಮಾತನಾಡುತ್ತಾರೆ. ಆದರೆ ಮಾಧ್ಯಮದ ಎದುರು ಬಂದಾಗ ಮಾತ್ರ ನನ್ನ ಬಗ್ಗೆ ಕಿಡಿಕಾರುತ್ತಾರೆ‌. ಇದಕ್ಕೆ ಏನು ಕಾರಣವೊ ಗೊತ್ತಿಲ್ಲ. ನಾನು ಎಸ್ಕಾಟ್ ನೊಂದಿಗೆ ಓಡಾಡೋದನ್ನ ನೋಡಿ ಬೇಸರವಾಗಿದ್ದಾರೋ ಗೊತ್ತಿಲ್ಲ. ಮೈಶುಗರ್ ಸಕ್ಕರೆ ಕಾರ್ಖಾನೆಯನ್ನ ಖಾಸಗಿಗೆ ಕೊಡುವ ನಿರ್ಧಾರ ಕೈ ಬಿಡಲಾಗಿದೆ. ಈ ವಿಚಾರವನ್ನ ಸಿಎಂ ಜೊತೆ ಚರ್ಚಿಸಿದ್ದೇನೆ. ಆದರೆ ಮೈಶುಗರ್ ಸಕ್ಕರೆ ಕಾರ್ಖಾನೆ ವಿಚಾರ ಮಾತಾಡಲು ಶಾಸಕರನ್ನ ಸಿಎಂ ಬಳಿ ಕರೆದೊಯ್ಯಬೇಕು ಎಂಬ ಆಶಯ ಅವರಲ್ಲಿತ್ತು. ಸಮಸ್ಯೆ ಇತ್ಯರ್ಥ ಆದ ಮೇಲೆ ಶಾಸಕರನ್ನ ಸಿಎಂ ಬಳಿ ಯಾಕೆ ಕರೆದೊಯ್ಯಬೇಕು? ಎಂದರು.

Leave a Reply

Your email address will not be published. Required fields are marked *

You May Also Like

25ನೇ ವಾರ್ಡಿನ ಮಾನವಿ ಮತ್ತು 8ನೇ ವಾರ್ಡ ಕಾಂಗ್ರೆಸ್ ಅಭ್ಯರ್ಥಿ ಪೂರ್ಣಿಮಾ ಮತ್ತು 13ಮತ್ತು 19ನೇ ವಾರ್ಡ ಬಿಜೆಪಿ ಗೆ ಜಯ

ಗದಗ:: ಗದಗ ಬೆಟಗೇರಿ ನಗರ ಸಭೆ ಚುನಾವಣೆ ಮತ ಎಣಿಕೆ ಗದಗ ನಗರದ ಗುರು ಬಸವ…

ಎಸ್.ಪಿ.ಬಿ. ಜನ್ಮದಿನ: ಟ್ವೀಟರ್ ನಲ್ಲಿ ಶುಭಾಶಯಗಳ ಸುರಿಮಳೆ

ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸುಮಾರು 40,000ಕ್ಕೂ ಹೆಚ್ಚು ಚಿತ್ರಗೀತೆಗಳನ್ನು ಹಾಡಿರುವ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಮ್ ಅವರಿಗೆ ಇಂದು 73ನೇ ಜನ್ಮದಿನದ ಸಂಭ್ರಮ.

ವಿದ್ಯಾರ್ಥಿಗಳಿಗೆ ಬಸ್ ಪಾಸ್ ಅವಧಿ ಫೆ.28 ರವರೆಗೆ ವಿಸ್ತರಣೆ

ರಾಜ್ಯದಲ್ಲಿ ಶಾಲಾ-ಕಾಲೇಜು ಆರಂಭದ ನಂತ್ರ ವಿದ್ಯಾರ್ಥಿಗಳ ಉಚಿತ ಬಸ್ ಪಾಸ್ ಅವಧಿ ಮುಕ್ತಾಯಗೊಂಡಿದ್ದರೂ, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಠಿಯಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಜ.31 ರ ವರೆಗೆ ಅವಕಾಶ ನೀಡಿ ಕೆಎಸ್‌ಆರ್‌ಟಿಸಿ ಆದೇಶ ನೀಡಿತ್ತು.

ಶಿರಹಟ್ಟಿ ತಾಲೂಕಿನಲ್ಲಿ ಗಣರಾಜ್ಯೋತ್ಸವ ಆಚರಣೆ ಬಗ್ಗೆ ತಹಶೀಲ್ದಾರ ನೀಡಿದ ಮಾಹಿತಿ

ಶಿರಹಟ್ಟಿ: ಪ್ರಸ್ತುತ ವರ್ಷದಲ್ಲಿ ಕೊರೊನಾ ನಿಯಮಾನುಸಾರ ಸರಳವಾಗಿ ಗಣರಾಜ್ಯೋತ್ಸವ ಆಚರಣೆ ಮಾಡಲಾಗುತ್ತದೆ ಎಂದು ತಹಶೀಲ್ದಾರ ಯಲ್ಲಪ್ಪ…