ನವದೆಹಲಿ: ನಾಳೆ ಮೂರನೇ ಹಂತದ ಲಾಕ್ ಡೌನ್ ಗೆ ಕೊನೆಯ ದಿನ. ಹೀಗಾಗಿ ನಾಲ್ಕನೇ ಹಂತದ ಲಾಕ್ ಡೌನ್ ಬಗ್ಗೆ ಜನರು ಚಿಂತಿಸುತ್ತಿದ್ದಾರೆ.
ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಇದು ವಿಭಿನ್ನವಾಗಿ ಇರಲಿದೆ ಎಂದು ಹೇಳಿದ್ದಾರೆ. ಹೀಗಾಗಿ ಜನರು ಈ ಕುರಿತು ಚರ್ಚೆ ನಡೆಸುತ್ತಿದ್ದಾರೆ. ನಾಲ್ಕನೇ ಹಂತದ ಲಾಕ್ಡೌನ್ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಪರಿಷ್ಕೃತ ಮಾರ್ಗಸೂಚಿಗಳು ಪ್ರಕಟವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಕಂಟೈನ್ಮೆಂಟ್ ಜೋನ್ ಹೊರತು ಪಡಿಸಿ ಎಲ್ಲ ಆರ್ಥಿಕ ಚಟುವಟಿಕೆಗಳಿಗೆ ಆದ್ಯತೆ ನೀಡಬಹುದು. ಬಸ್ ಸಂಚಾರಕ್ಕೆ ಅನುಮತಿ ಸಿಗಬಹುದು. ರೆಡ್ ಝೋನ್ ನಲ್ಲಿ ಆಟೋ, ಕ್ಯಾಬ್ ಗೆ ಅವಕಾಶ ನೀಡಬಹುದು. ಹಂತ ಹಂತವಾಗಿ ರೈಲು, ದೇಶಿಯ ವಿಮಾನ ಯಾನಕ್ಕೆ ಅವಕಾಶ ಸಿಗಬಹುದು. ಮೆಟ್ರೋ, ಲೋಕಲ್ ರೈಲಿಗೆ ಷರತ್ತುಬದ್ಧ ಅನುಮತಿ ಸಿಗಬಹುದು. ರೆಡ್ ಝೋನ್ ನಲ್ಲಿ ಸಲೂನ್, ಸ್ಪಾಗೆ ಅನುಮತಿ ಸಿಗಬಹುದು. ಐಟಿ, ಎಂಎನ್ಸಿ ಕಂಪನಿಗಳಲ್ಲಿ ಪೂರ್ಣ ಸಿಬ್ಬಂದಿಯೊಂದಿಗೆ ಕೆಲಸ ಮಾಡುವಂತೆ ಸೂಚಿಸಬಹುದು. ರಾತ್ರಿ ಸಂಚಾರದ ಮೇಲಿನ ಕರ್ಫ್ಯೂ ತೆರವು ಮಾಡಬಹುದು.

ಶಾಪಿಂಗ್ ಮಾಲ್, ಕಾಂಪ್ಲೆಕ್ಸ್, ಸ್ಪೋರ್ಟ್ಸ್, ಥಿಯೇಟರ್, ದೇಗುಲ, ಜಾತ್ರೆ, ಸಂತೆ, ಉತ್ಸವ ಧಾರ್ಮಿಕ, ರಾಜಕೀಯ, ಸಾಂಸ್ಕೃತಿಕ ಕಾರ್ಯಕ್ರಮ ಹೋಟೆಲ್ ಗಳಲ್ಲಿ ಪಾರ್ಸೆಲ್ ಗೆ ಅವಕಾಶ ನೀಡಬಹುದು. ಮೇ ಬಳಿಕವಷ್ಟೇ ಶಾಲಾ-ಕಾಲೇಜು ಆರಂಭ ಮಾಡಬಹುದು.