ಬೆಂಗಳೂರು: ಪ್ರತಿ ವರ್ಷ ಜೂನ್ 1ಕ್ಕೆ ನೈರುತ್ಯ ಮುಂಗಾರು ಕೇರಳ ಪ್ರವೇಶಿಸಿ ನಂತರ ರಾಜ್ಯಕ್ಕೆ ಆಗಮಿಸುತ್ತಿತ್ತು. ಆದರೆ, ಈ ಬಾರಿ ಜೂ. 5ರಂದು ಕೇರಳಕ್ಕೆ ಮುಂಗಾರು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಜ್ಯಕ್ಕೆ ಜೂನ್ 5ರ ನಂತರ 9ರ ಮಧ್ಯೆ ಯಾವ ದಿನವಾದರೂ ಪ್ರವೇಶವಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಆರಂಭದಲ್ಲಿ ಮುಂಗಾರು ಮಳೆ ದಕ್ಷಿಣ ಅಂಡಮಾನ್ ಸಮುದ್ರದತ್ತ ಬೀಸಿ ನಂತರ ಉತ್ತರಾಭಿಮುಖವಾಗಿ ಪಶ್ಚಿಮ ಭಾಗಕ್ಕೆ ಬಂಗಾಳ ಕೊಲ್ಲಿ ಮೂಲಕ ವಿಸ್ತಾರಗೊಳ್ಳಲಿದೆ. ಅಂಡಮಾನ್ ಸಮುದ್ರ ತೀರದಲ್ಲಿ ಸಾಮಾನ್ಯವಾಗಿ ಮೇ. 22ರ ಹೊತ್ತಿಗೆ ನೈರುತ್ಯ ಮುಂಗಾರು ಪ್ರವೇಶವಾಗುತ್ತದೆ. ಪ್ರಸ್ತುತ ಆಗ್ನೇಯ ಬಂಗಾಳ ಕೊಲ್ಲಿ ಮತ್ತು ನೆರೆಹೊರೆ ಪ್ರದೇಶಗಳಲ್ಲಿ ಕಡಿಮೆ ಒತ್ತಡವಿದೆ.

ದಕ್ಷಿಣ ಬಂಗಾಳ ಕೊಲ್ಲಿಯ ಕೇಂದ್ರ ಭಾಗದಲ್ಲಿ ನಾಳೆ ಚಂಡಮಾರುತ ಏಳುವ ಸಾಧ್ಯತೆಯಿದೆ. ಸಾಮಾನ್ಯವಾಗಿ ಅಂಡಮಾನ್ ಗೆ ತಲುಪಿದ 10 ದಿನಗಳ ನಂತರ ಕೇರಳಕ್ಕೆ ಮುಂಗಾರು ಮಳೆ ಪ್ರವೇಶವಾಗುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

Leave a Reply

Your email address will not be published. Required fields are marked *

You May Also Like

ಅಭಿವೃದ್ಧಿಗಾಗಿ ಪ್ರತ್ಯೇಕ ರಾಜ್ಯದ ಕೂಗು ಎತ್ತಿದ್ದು ನಿಜ- ಸಚಿವ ಉಮೇಶ್ ಕತ್ತಿ

ಆಲಮಟ್ಟಿ: ಉತ್ತರ ಕರ್ನಾಟಕದ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊ0ಡಾಗ ತಾವು ಸಹಜವಾಗಿಯೇ ಪ್ರತ್ಯೇಕ ರಾಜ್ಯದ ಕೂಗೆತ್ತಿರುವುದು…

ರಾಕಿ ಬಾಯ್ ಚಿತ್ರವನ್ನು ಅಕ್ರಮವಾಗಿ ಪ್ರಸಾರ ಮಾಡಿದ ತೆಲುಗು ಚಾನಲ್!

ಕೆಜಿಎಫ್ ಚಿತ್ರವನ್ನು ಅಕ್ರಮವಾಗಿ ಪ್ರಸಾರ ಮಾಡಿದ್ದ ತೆಲುಗು ಟಿವಿ ಚಾನಲ್ ಒಂದರ ವಿರುದ್ಧ ಕಾನೂನು ಹೋರಾಟ ನಡೆಸಲು ಚಿತ್ರ ತಂಡ ತೀರ್ಮಾನಿಸಿದೆ.

ಅಗಡಿ ಕಾಲೇಜಿನಲ್ಲಿ ಸಿಇಟಿ ಸಹಾಯ ಕೇಂದ್ರ ಆರಂಭ

ನಗರದ ಪ್ರತಿಷ್ಠಿತ ಶ್ರೀಮತಿ.ಕಮಲಾ ಹಾಗೂ ಶ್ರೀ.ವೆಂಕಪ್ಪ ಎಂ ಅಗಡಿ ಇಂಜನೀಯರಿಂಗ್ ಕಾಲೇಜು,ಲಕ್ಷ್ಮೇಶ್ವರದಲ್ಲಿ ಸಿಇಟಿ ಆಪ್ಷನ್ ಎಂಟ್ರಿ ಸಹಾಯ ಕೇಂದ್ರ ಆರಂಭಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದಂತಹ ಡಾ.ಉದಯಕುಮಾರ ಹಂಪಣ್ಣವರ ತಿಳಿಸಿದ್ದಾರೆ.

ತ್ರಿಪುರಾದಲ್ಲಿ ಸೈನಿಕರಿಗೆ ಮಾತ್ರ ಕಂಡು ಬಂದ ಸೋಂಕು!

ತ್ರಿಪುರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಸಾಗುತ್ತಿದೆ. ಮತ್ತೆ 24 ಜನ ಬಿಎಸ್ ಎಫ್ ಯೋಧರಲ್ಲಿ ಕೊರೊನಾ ಸೋಂಕು ಕಂಡು ಬಂದಿದ್ದು, ರಾಜ್ಯದಲ್ಲಿ ಒಟ್ಟು ಪ್ರಕರಣ 88 ಕ್ಕೆ ತಲುಪಿವೆ .