ಬೆಂಗಳೂರು: ನಟ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ -1 ಚಿತ್ರ ಅದ್ಭುತ ಯಶಸ್ಸು ಗಳಿಸಿದೆ. ಅಲ್ಲದೇ, ಚಾಪ್ಟರ್ -2 ಸಹ ಬಿಡುಗಡೆಗಾಗಿ ದಿನಗಣನೆ ಪ್ರಾರಂಭಗೊಂಡಿದೆ. ಈ ನಡುವೆ ಕೆಜಿಎಫ್ ಚಿತ್ರವನ್ನು ಅಕ್ರಮವಾಗಿ ಪ್ರಸಾರ ಮಾಡಿದ್ದ ತೆಲುಗು ಟಿವಿ ಚಾನಲ್ ಒಂದರ ವಿರುದ್ಧ ಕಾನೂನು ಹೋರಾಟ ನಡೆಸಲು ಚಿತ್ರ ತಂಡ ತೀರ್ಮಾನಿಸಿದೆ.

ತೆಲುಗು ವಾಹಿನಿ ಎವರಿ (Every) ಎಂಬ ಸ್ಥಳೀಯ ಚಾನಲ್ ಒಂದರಲ್ಲಿ ಕೆಜಿಎಫ್ ಚಾಪ್ಟರ್- 1 ರ ತೆಲುಗು ಅವತರಣಿಕೆಯನ್ನು ಅಕ್ರಮವಾಗಿ ಪ್ರಸಾರ ಮಾಡಿದೆ ಎನ್ನಲಾಗಿದೆ. ಸದ್ಯ ಚಾನಲ್ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿರುವ ಚಿತ್ರ ವಿತರಕ ಕಾರ್ತಿಕ್ ಗೌಡ ತಮ್ಮ ಟ್ವಿಟ್ ಮೂಲಕ ಈ ಮಾಹಿತಿ ಹಂಚಿಕೊಂಡಿದ್ದಾರೆ.

ಕೆಜಿಎಫ್ ಚಿತ್ರದ ಸ್ಯಾಟಲೈಟ್ ಹಕ್ಕುಗಳ ಬಗೆಗಿನ ಮಾತುಕತೆ ಅಂತಿಮ ಹಂತದಲ್ಲಿರುವ ವೇಳೆ ಈ ಘಟನೆ ನಡೆದಿದೆ. ನಾವು ಈ ಕುರಿತು ಕಾನೂನು ಹೋರಾಟ ನಡೆಸಲಿದ್ದೇವೆ. ನಮ್ಮ ಬಳಿ ಟಿವಿ ಚಾನಲ್ ಚಿತ್ರ ಪ್ರಸಾರ ಮಾಡಿದ್ದರ ಬಗೆಗಿನ ಸ್ಕ್ರೀನ್ ಶಾಟ್, ವಿಡಿಯೋ ಸಾಕ್ಷಿಗಳಿದೆ” ಅವರು ಟ್ವೀಟ್ ನಲ್ಲಿ ಹೇಳಿದ್ದಾರೆ.

Leave a Reply

Your email address will not be published. Required fields are marked *

You May Also Like

ಮೋದಿ ಸರ್ಕಾರಕ್ಕೆ ಒಂದು ವರ್ಷ: ದೇಶವಾಸಿಗಳಿಗೆ ಪ್ರಧಾನಿ ಪತ್ರ

ಕೇಂದ್ರದ ನರೇಂದ್ರ ಮೋದಿ ನರೆತೃತ್ವದ ಸರ್ಕಾರ ಒಂದು ವರ್ಷ ಅವಧಿ ಪೂರ್ಣಗೊಳಿಸಿದೆ. ಈ ಹಿನ್ನೆಲೆ ಪ್ರಧಾನಿ…

ನೀವು ಸರ್ಕಾರಿ ಜಮೀನು ಲೀಜ್ ಪಡೆದಿದ್ದಿರಾ? ಆ ಜಮೀನು ನಿಮ್ಮದಾಗಲಿದೆ..!

ಬೆಂಗಳೂರು: ಗುತ್ತಿಗೆಯಡಿಯಲ್ಲಿ ನೀಡಿದ್ದ ಸರ್ಕಾರಿ ಜಮೀನನ್ನು ಖಾಯಂ ಆಗಿ ಅವರ ಹೆಸರಿಗೆ ಮಾರ್ಪಡಿಸಲು ರಾಜ್ಯ ಸರ್ಕಾರ…

ಹೊಸ ಆಯಾಮದ ಕಥೆಯನ್ನು ಹೇಳಲು ಹೊರಟ ಅಂಬರೀಶ್

ಚಂದನವದಲ್ಲಿ ಹೊಸಬರ ಸಿನಿಮಾಗಳು ಸಾಕಷ್ಟು ನಿರೀಕ್ಷೆ ಮೂಡಿಸುತ್ತಿವೆ. ಇದರ ಜೊತೆಗೆ, ಸಿನಿಮಾಗಳಲ್ಲಿ ಹೊಸಹೊಸ ಪ್ರಯೋಗಗಳನ್ನು ನಡೆಸುವ ನಿರ್ದೇಶಕರಿಗೆ ಕನ್ನಡ ಚಿತ್ರರಂಗ ಕಾಲಕಾಲಕ್ಕೆ ವೇದಿಕೆ ಒದಗಿಸುತ್ತಿದೆ.

ಕೊರೊನಾ ಹಾವಳಿಯ ಮಧ್ಯೆಯೇ ಶಾಲೆಗಳು ಆರಂಭವಾಗಲಿವೆಯೇ?

ದೇಶದಲ್ಲಿ ಕೊರೊನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೂ ಜನ ಜೀವನ ಎಂದಿನಂತೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಮುಚ್ಚಿದ್ದ ಶಾಲಾ – ಕಾಲೇಜುಗಳನ್ನು ಮರಳಿ ತೆರೆಯುವ ಚಿಂತನೆ ನಡೆದಿದೆ.