ಆಲಮಟ್ಟಿ: ಉತ್ತರ ಕರ್ನಾಟಕದ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊ0ಡಾಗ ತಾವು ಸಹಜವಾಗಿಯೇ ಪ್ರತ್ಯೇಕ ರಾಜ್ಯದ ಕೂಗೆತ್ತಿರುವುದು ನಿಜ. ಈ ಕೂಗು ಇಂದು ಹೊಸದೆನ್ನಲ್ಲ ಎಂದು ಸಚಿವ ಉಮೇಶ್ ಕತ್ತಿ ಸ್ಪಷ್ಟಪಡಿಸಿದರು. ಆಲಮಟ್ಟಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಕಳೆದ ಎರಡು ದಶಕಗಳಿಂದಲೂ ಉ.ಕ.ಅಭಿವೃದ್ಧಿ ಬಗ್ಗೆ ಹೋರಾಟ, ಧ್ವನಿ ಎತ್ತುತ್ತಲ್ಲಿರುವೆ ಎಂದರು. ಈ ಭಾಗದಲ್ಲಿ ಪ್ರಗತಿಪರ ಕೆಲಸ,ಕಾರ್ಯಗಳು ಅಗದಿದ್ದಾಗ ಅನಿವಾರ್ಯವಾಗಿ ಈಗಲೂ, ಮುಂದೆಯೂ ಪ್ರತ್ಯೇಕ ರಾಜ್ಯದ ಕೂಗೆತ್ತುವೆ. ಅಭಿವೃದ್ಧಿ ದೃಷ್ಟಿಯಿಂದ ಇಲ್ಲಿ ಅನ್ಯಾಯ ಅಗಕೂಡದು.ಅದಕ್ಕೆ ನನ್ನ ವ್ಯಯುಕ್ತಿಕ ಸಹಮತ ಇಲ್ಲ. ಹೀಗಾಗಿ ನನ್ನ ಧ್ವನಿಕೂಗು ನಿರಂತರ ಇರಲಿದೆ. ಉ.ಕ.ಬಗ್ಗೆ ತಾತ್ಸಾರಭಾವ ಯಾರೇ ಹೊಂದಿದರು ಸಹಿಸಿಕೊಳ್ಳಲಾಗದು. ಇದಕ್ಕಾಗಿ ಪ್ರತ್ಯೇಕ ರಾಜ್ಯದ ಕೂಗು ಮೊಳಗಿಸುವಲ್ಲಿ ತಪ್ಪೆನಿಲ್ಲ ಎಂದರು.
ಅಭಿವೃದ್ಧಿ ದೃಷ್ಟಿಯಿಂದ ಪ್ರತ್ಯೇಕ ರಾಜ್ಯದ ಬೇಡಿಕೆ ಈ ಭಾಗದ ಜನತೆಯ ಒಮ್ಮತದ ಬೇಡಿಕೆಯೂ ಅಗಿದೆ. ಆ ಹಿನ್ನೆಲೆಯಲ್ಲಿ ಪ್ರತ್ಯೇಕ ರಾಜ್ಯ ಮಾಡಲು ಯಾವುದೇ ಅಡ್ಡಿಯಿಲ್ಲ. ತಾವು ಈಗಲೂ ಸಮರ್ಥಿಸಿಕೊಳ್ಳವೆ. ತಾವೊಬ್ಬ ಜನಪ್ರತಿನಿಧಿ. ಹೀಗಾಗಿ ಜನತೆಯ ಹಿತ ಕಾಯುವುದು ನನ್ನ ಮುಖ್ಯ ಧ್ಯೇಯ. ಆ ನಿಟ್ಟಿನಲ್ಲಿ ಪ್ರತ್ಯೇಕ ರಾಜ್ಯದ ಕೂಗು ವ್ಯಯಕ್ತಿಕವಾಗಿ ಎಬ್ಬಿಸಿ ಹೇಳಲ್ಲಿಚ್ಚಿಸುತ್ತಿರುವೆ. ನನ್ನ ಧ್ವನಿಗೆ ಯಾರೇ ಸ್ಪಂದಿಸಿ ಧ್ವನಿಗೂಡಿಸಿದರೂ ಅಷ್ಟೇ. ಬಿಟ್ಟರು ಅಷ್ಟೇ ನನ್ನ ಕೂಗು ಮಾತ್ರ ಅನ್ಯಾಯವಾದಾಗ ಪ್ರತಿಧ್ವನಿಸುತ್ತದೆ. ಈ ಕೂಗು ನಿಲ್ಲದು ಎಂದರು. ನನ್ನ ಧ್ವನಿಗೆ ಈ ಭಾಗದ ಶಾಸಕರು ಧ್ವನಿಗೂಡಿಸುವವರು ಇದ್ದಾರೆ. ಅದರೆ ಬಾಯಿ ಬಿಡಲು ಸದ್ಯ ತಯಾರಿಲ್ಲ ಅಷ್ಟೇ ಎಂದು ಮೊನಚಾಗಿ ಹಸನ್ಮುಖದಿಂದ ನುಡಿದರು.
ಈ ಭಾಗದಲ್ಲಿ ತೊಂದರೆವಾದಲ್ಲಿ ನನ್ನ ಕೂಗು ಇದಿದ್ದೆ. ನನಗಿಗ 60 ವರ್ಷ. ಇನ್ನೂ 15 ವರ್ಷದವರೆಗೆ ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿ ಸಾಮಾಜಿಕ ಕೆಲಸದೊಂದಿಗೆ ಶಾಸಕನಾಗಿ ಇರುವ ಸಾಮಥ್ರ‍್ಯ ಇದೆ ಎಂದು ಉಮೇಶ್ ಕತ್ತಿ ಹೇಳಿದರು. ಜನಪರ ಯೋಜನೆಗಳೇ ನಮಗೆ ಶ್ರೀರಕ್ಷೆ: ರಾಜ್ಯ ಬಿಜೆಪಿಯಲ್ಲಿ ಸಮರ್ಥ ನಾಯಕರಿದ್ದಾರೆ,ಸಚಿವರಿದ್ಗಾರೆ,ಶಾಸಕರಿದ್ದಾರೆ. ಮೇಲಾಗಿ ಬಲಾಢ್ಯ ಕಾರ್ಯಕರ್ತರ ಶಕ್ತಿಯೂ ಇದೆ. ಇದರ ಪರಿಣಾಮ ಬಿಜೆಪಿ ಸಮರ್ಥನೀಯ ಅಭಿವೃದ್ಧಿ ಪರ ಕೆಲಸ,ಕಾರ್ಯಗಳನ್ನು ನಿರ್ವಹಿಸುತ್ತಿದೆ. ಜನಪರ ಯೋಜನೆಗಳ ಚಾರಣದೊಂದಿಗೆ ಮುಂಬರುವ ವಿಧಾನಸಭೆ ಚುನಾವಣೆಗೆ ಸನ್ನದ್ದುವಾಗಲ್ಲಿದೆ. ಚುನಾವಣೆಯಲ್ಲಿ ಜಯಭೇರಿ ಬಾರಿಸಿ ಮತ್ತೆ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಬಿಜೆಪಿ ಎಂದರು.
ಸಿದ್ದು- ಡಿಕೆಶಿಗೆ ಏನಾಗಿದೆಯೋ ಗೊತ್ತಿಲ್ಲ ? ಕಾಂಗ್ರೆಸ್ ಪರಸ್ಥಿತಿ ಸದ್ಯ ಸರಿಯಿಲ್ಲ. ಸಿ.ಎಂ.ಹುದ್ದೆಗಾಗಿ ಈಗಲೇ ಮುಸುಕಿನ ಗುದ್ದಾಟ ನಡೆದಿದೆ. ಸಿದ್ದರಾಮಯ್ಯ ಹಾಗು ಡಿ.ಕೆ.ಶಿವಕುಮಾರ್ ನಡುವೆ ಫೈಟ್ ಒಳಗೊಳಗೆ ಸಾಗುತ್ತಿದೆ. ವಿಪಕ್ಷ ನಾಯಕರು ಕನಸಿನ ಲೋಕದಲ್ಲಿ ವಿಹರಿಸುತ್ತಿದ್ದಾರೆ. ಇವರಿಬ್ಬರಿಗೂ ಏನಾಗಿದೆಯೋ ಗೊತ್ತಿಲ್ಲ. ಅಧಿಕಾರದ ಹುಚ್ಚು ಹಿಡಿದಿದೆ ಎಂದು ಉಮೇಶ್ ಕತ್ತಿ ವ್ಯಂಗ್ಯವಾಡಿ ಟೀಕಿಸಿದರು.

Leave a Reply

Your email address will not be published. Required fields are marked *

You May Also Like

ಹುಬ್ಬಳ್ಳಿ ಗುರುಸ್ವಾಮಿ ಬೆತ್ತಲೆ ವಿಡಿಯೋಗೆ ಸಿಕ್ಕ ಸ್ಪಷ್ಟನೆ!

ಶಬರಿ ನಗರದ ಅಯ್ಯಪ್ಪ ಸ್ವಾಮೀಜಿ ಮಠದ ಪೀಠಾದೀಶನ ಬೆತ್ತಲೆ ಪುರಾಣದ ಬಗ್ಗೆ ಸ್ವತಃ ಅವರೇ ಸ್ಪಷ್ಟನೆ ನೀಡಿದ್ದಾರೆ.

ಆಲಮಟ್ಟಿ 26 ಗೇಟ್ ಓಪನ್ – ಅಪಾರ ನೀರು ಹೊರಕ್ಕೆ

ಉತ್ತರಪ್ರಭ ಸುದ್ದಿಆಲಮಟ್ಟಿ: ನೆರೆಯ ಮಹಾರಾಷ್ಟ್ರ ಕೃಷ್ಣಾ ಕಣಿವೆಯಲ್ಲಿ ಸುರಿಯುತ್ತಿರುವ ವ್ಯಾಪಕ ಮಳೆಯಿಂದ ಕೃಷ್ಣಾ ನದಿ ಹರಿವಿನಲ್ಲಿ…

ನಾನು ಪತ್ರಕರ್ತೆ ಎಂದು ಸಪ್ಲೈಯರ್ ಥಳಿಸಿದ ಮಹಿಳೆ.!

ಹಾವೇರಿ: ಕ್ಷುಲ್ಲಕ ಕಾರಣಕ್ಕೆ ಹೋಟೆಲ್ ಸಪ್ಲೈಯರ್ಗೆ ಅಪರಿಚಿತ ಮಹಿಳೆಯೊಬ್ಬರು ಕಪಾಳಕ್ಕೆ ಹೊಡೆದ ಘಟನೆ ಹಾವೇರಿ ಜಿಲ್ಲೆಯ…

ಕೊರೊನಾ ಪಾಸಿಟಿವ್ – ಜೆಡಿಎಸ್ ನಾಯಕನ ಹೈಡ್ರಾಮಾ!

ಮಂಡ್ಯ : ಜೆಡಿಎಸ್ ಮುಖಂಡರೊಬ್ಬರಿಗೆ ಕೊರೊನಾ ವೈರಸ್ ದೃಢಪಟ್ಟಿದ್ದು, ಆಸ್ಪತ್ರೆಗೆ ಹೋಗಲು ಕಿರಿಕ್ ಮಾಡಿರುವ ಘಟನೆ…