ಭೋಪಾಲ್: ಲಾಕ್ ಡೌನ್ ನಿಂದಾಗಿ ಕಾರ್ಮಿಕರು ಇನ್ನಿಲ್ಲದ ಸಂಕಷ್ಟ ಪಡುತ್ತಿದ್ದಾರೆ. ಹಲವರಂತೂ ತಮ್ಮ ಊರು ತಲುಪಲು ಪಡಬಾರದ ಕಷ್ಟ ಪಡುತ್ತಿದ್ದಾರೆ. ಇನ್ನೂ ಹಲವರು ಕಳ್ಳ ಹಾದಿ ಹಿಡಿದು ಊರು ಸೇರುತ್ತಿದ್ದಾರೆ. ಆದರೆ, ಇಲ್ಲೊಬ್ಬ ವ್ಯಕ್ತಿ ತನ್ನ ಗರ್ಭಿಣಿ ಪತ್ನಿಯನ್ನು ಗಾಡಿ ಬಂಡಿಯಲ್ಲಿ ಕೂರಿಸಿಕೊಂಡು ಸುಮಾರು 700 ಕಿ.ಮೀ ಎಳೆದುಕೊಂಡು ಬಂದಿರುವ ಘಟನೆ ನಡೆದಿದೆ.
ತನ್ನ ಪತ್ನಿ ಹಾಗೂ ಮಗುವನ್ನು ಗಾಡಿ ಬಂಡಿಯಲ್ಲಿ ಕುರಿಸಿಕೊಂಡು ಎಳೆದುಕೊಂಡು ಬಂದಿರುವ ಕಾರ್ಮಿಕನನ್ನು ರಾಮು ಘೋರ್ಮರೆ ಎಂದು ಗುರುತಿಸಲಾಗಿದೆ. ಈ ವ್ಯಕ್ತಿ ಮಾ. 17ರಂದು ಕೆಲಸವನ್ನು ಹುಡುಕಿಕೊಂಡು ಕುಟುಂಬ ಸಮೇತ ತೆಲಂಗಾಣಕ್ಕೆ ಹೋಗಿದ್ದರು. ಆದರೆ, ಈ ಕುಟುಂಬ ಬಂದ ಐದೇ ದಿನದಲ್ಲಿ ಲಾಕ್ ಡೌನ್ ಘೋಷಣೆಯಾಯಿತು. ಹೀಗಾಗಿ ಮರಳಿ ಊರು ಸೇರಬೇಕೆಂದು ನಿರ್ಧರಿಸಿದ್ದಾರೆ. ಆದರೆ, ಗರ್ಭಿಣಿ ತುಂಬು ಗರ್ಭಿಣಿಯಾಗಿದ್ದರಿಂದಾಗಿ ಮಗು, ಚಿಕ್ಕದಿರುವದರಿಂದಾಗಿ ಇಬ್ಬರನ್ನೂ ಬಂಡೆಯಲ್ಲಿ ಕೂರಿಸಿಕೊಂಡು ಪತಿರಾಯ ಹೆಜ್ಜೆ ಹಾಕಿದ್ದಾರೆ.
ಕೇವಲ ಒಂದು ಹೊತ್ತಿನ ಊಟ ತಿಂದು ದಿನ ಪೂರ್ತಿ ತನ್ನ ಗರ್ಭಿಣಿ ಹೆಂಡತಿಯ ಜೊತೆ ಮಗುವನ್ನು ಎಳೆದುಕೊಂಡು ಬಂದ ರಾಮುವನ್ನು ಮಧ್ಯಪ್ರದೇಶದಲ್ಲಿ ಪೊಲೀಸರು ವಿಚಾರಿಸಿ ನಂತರ ಅವನಿಗೆ ತಿನ್ನಲು ಊಟ ಮತ್ತು ಬಿಸ್ಕೆಟ್ ಕೊಟ್ಟಿದ್ದಾರೆ.