ಬೆಂಗಳೂರು: ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪ ರೈ(68) ಇಂದು (ಶುಕ್ರವಾರ) ಬೆಳಿಗ್ಗೆ ನಿಧನರಾಗಿದ್ದಾರೆ.

ಕಳೆದ ಎರಡು ವರ್ಷದಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಮುತ್ತಪ್ಪ ರೈ ಒಂದು ವಾರದ ಹಿಂದೆಯಷ್ಟೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರೆ. ಇಂದು ಸಂಜೆ 4 ಗಂಟೆಗೆ ರಾಮನಗರ ತಾಲೂಕಿನ ಬಿಡದಿಯಲ್ಲಿರುವ ಫಾರ್ಮ ಹೌಸ್ ನಲ್ಲಿ ಮುತ್ತಪ್ಪ ರೈ ಅವರ ಅಂತ್ಯಕ್ರಿಯೇ ನಡೆಯಲಿದೆ.
ಕೊರೋನಾ ಭೀತಿ ಇರುವ ಹಿನ್ನೆಲೆ ಕೇವಲ ಕುಟುಂಬಸ್ಥರಿಗೆ ಕೇವಲ 25 ಜನರಿಗೆ ಮಾತ್ರ ಅಂತ್ಯಕ್ರಿಯೇಯಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿದೆ. ರೈ ಜಯಕರ್ನಾಟಕ ಸಂಘಟನೆ ಸಂಸ್ಥಾಪಕರು ಹಾಗೂ ಎಮ್.ಆರ್.ಆರ್ ಗ್ರೂಪ್ ನ ಮಾಲಿಕರು ಆಗಿದ್ದರು. ಹೀಗಾಗಿ ಸಂಘಟನೆ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ನಿರೀಕ್ಷೆಯಿದೆ. ನಗರದ ಮಣಿಪಾಲ್ ಆಸ್ಪತ್ರೆ ಬಳಿ ಬಿಗಿ ಪೊಲೀಸ್ ಭದ್ರತೆ ನೀಡಲಾಗಿದೆ.

ಮುತ್ತಪ್ಪ ರೈ ಅವರಿಗೆ ಇಬ್ಬರು ಮಕ್ಕಳು, ಮೂರು ಜನ ಸಹೋದರರು ಹಾಗೂ ಒರ್ವ ಸಹೋದರಿ ಇದ್ದಾರೆ. ಕಳೆದ ಎರಡು ವರ್ಷದಿಂದ ಕ್ಯಾನ್ಸರ್ ಖಾಯಿಲೆಗೆ ದೆಹಲಿ, ಚನ್ನೈ, ಉಡುಪಿ, ಮಣಿಪಾಲ್, ಬೆಂಗಳೂರು ಸೇರಿದಂತೆ ವಿವಿಧ ಕಡೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು. ಇವರಿಗಿದ್ದ ಲಿವರ್ ಕ್ಯಾನ್ಸರ್ ಗುಣಮುಖವಾಗಿತ್ತು. ಆದರೆ ಮೆದುಳಿನಲ್ಲಿ ಕ್ಯಾನ್ಸರ್ ಗಡ್ಡೆ ಸಾವಿನ ಸನಿಹಕ್ಕೆ ತಂದೊಡ್ಡಿತು.

ಖಾಸಗಿ ಚಾನೆಲ್ವೊಂದಕ್ಕೆ ಮುತ್ತಪ್ಪ ರೈ ಅವರು ನೀಡಿದ ಸಂದರ್ಶನ

Leave a Reply

Your email address will not be published. Required fields are marked *

You May Also Like

ಸಾರಿಗೆ ಸಿಬ್ಬಂಧಿಗಳ ಸಮಸ್ಯೆ ಕುರಿತು ಸರ್ಕಾರದ ಗಮನ ಸೆಳೆದ ಸಾರಿಗೆ ನೌಕರರ ಮಹಾ ಮಂಡಳ

ಬೆಂಗಳೂರು: ಕೋವಿಡ್-19ರ ದುಷ್ಪರಿಣಾಮದಿಂದ ಸಾರಿಗೆ ಸಂಸ್ಥೆಗಳ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸಾರಿಗೆ ಸಂಸ್ಥೆಗಳನ್ನು ಪುನಶ್ಚೇತನಗೊಳಿಸುವ…

ರಾಜ್ಯದಲ್ಲಿಂದು 453 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ಬೆಂಗಳೂರು: ರಾಜ್ಯದಲ್ಲಿಂದು 453 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 9150…

ಮಸ್ಕಿ: ಬಂಜಾರ ಭವನ ನಿರ್ಮಾಣಕ್ಕೆ 2ಕೋಟಿ ಮಂಜೂರು

ತಾಲೂಕ ಬಂಜಾರ ಭವನ ನಿರ್ಮಾಣಕ್ಕೆ 2ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್ ಭರವಸೆ ನೀಡಿದರು.

ಬಿಡುಗಡೆಗೂ ಮುನ್ನವೇ ಸದ್ದು ಮಾಡ್ತಿದೆ ಕೆಜಿಎಫ್-2 ಚಿತ್ರ

ಬೆಂಗಳೂರು: ಕೆಜಿಎಫ್ ಅಂದ್ರೆ ಸಾಕು ಪಡ್ಡೆ ಹುಡುಗರ ಕೇಕೆ ಶುರುವಾಗುತ್ತೆ. ಈ ಕೊರೊನಾ ಸಂಕಷ್ಟದಲ್ಲಿ ರಾಕಿ ಬಾಯ್ ಫ್ಯಾನ್ಸ್ ಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಅಂದ್ಹಾಗೆ ಈ ಖುಷಿಗೆ ಕಾರಣ 18 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದ ಕೆಜಿಎಫ್-2 ಟೀಸರ್.