ಬೆಂಗಳೂರು: ಕೆಜಿಎಫ್ ಅಂದ್ರೆ ಸಾಕು ಪಡ್ಡೆ ಹುಡುಗರ ಕೇಕೆ ಶುರುವಾಗುತ್ತೆ. ಈ ಕೊರೊನಾ ಸಂಕಷ್ಟದಲ್ಲಿ ರಾಕಿ ಬಾಯ್ ಫ್ಯಾನ್ಸ್ ಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಅಂದ್ಹಾಗೆ ಈ ಖುಷಿಗೆ ಕಾರಣ 18 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದ ಕೆಜಿಎಫ್-2 ಟೀಸರ್. ಹೌದು ಹೆಚ್ಚು ಜನರಿಂದ ವೀಕ್ಷಣೆಗೊಳಗಾದ ಭಾರತದ ಸಿನಿಮಾ ಟೀಸರ್ ಎನ್ನುವ ಖ್ಯಾತಿಗೆ ಈ ಟೀಸರ್ ಪಾತ್ರವಾಗಿದೆ. ಈ ವಿಷಯವನ್ನು ಹೊಂಬಾಳೆ ಫಿಲ್ಸ್ಂ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಕೆಜಿಎಫ್ 2 ಚಿತ್ರದ ಟೀಸರ್ಗೆ ಯೂಟ್ಯೂಬ್ನಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಜನ ಕಮೆಂಟ್ ಮಾಡಿದ್ದಾರೆ. 18 ಕೋಟಿಗೂ ಹೆಚ್ಚು ವೀಕ್ಷಣೆ ಕಂಡಿದೆ.
ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್ ಸೇರಿದಂತೆ ಹಲವರ ತಾರಾ ಬಳಗದ ಈ ಚಿತ್ರ, ಸಿನಿಮಾ ರಿಲೀಸ್ಗೂ ಮೊದಲೇ ಸಖತ್ ಸದ್ದು ಮಾಡುತ್ತಿದೆ. ಮೋಷನ್ ಪೋಸ್ಟರ್, ಫಸ್ಟ್ ಲುಕ್ ಜೊತೆ ರಾಕಿಂಗ್ ಸ್ಟಾರ್ ಹುಟ್ಟುಹಬ್ಬದ ದಿನ ರಿಲೀಸ್ ಆದ ಟೀಸರ್, ಕಡಿಮೆ ಅವಧಿಯಲ್ಲಿ ಹೆಚ್ಚು ಜನ ನೋಡಿದ ಟೀಸರ್ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.

Leave a Reply

Your email address will not be published. Required fields are marked *

You May Also Like

ಕೊರೊನಾ ಚಿಕಿತ್ಸಾ ವೆಚ್ಚಕ್ಕೆ ಸಿದ್ದರಾಮಯ್ಯ ವಿರೋಧ

ಬೆಂಗಳೂರು: ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆಗಾಗಿ @CMofKarnataka ನಿಗದಿಪಡಿಸಿರುವ ವೆಚ್ಚದ ವಿವರ ಸೋಂಕಿತರಿಗೆ ಹೃದಯಾಘಾತವಾಗುವಂತಿದೆ. ಒಂದು…

ಕೆಪಿಎಸ್ಇ ಪರೀಕ್ಷೆ ಬರೆಯುವವರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಈಗಾಗಲೇ ಜನೇವರಿ ತಿಂಗಳಲ್ಲೆ ನಡೆಯಬೇಕಿದ್ದ ಪ್ರಥಮ ದರ್ಜೆ ಸಹಾಯ (ಕೆಪಿಎಸ್ಇ) ಪರೀಕ್ಷೆಯನ್ನು ಫೆ.28ಕ್ಕೆ ನಿಗಧಿ ಪಡಿಸಲಾಗಿದೆ.

ಆಸ್ತಿ ತೆರಿಗೆ ಪರಿಷ್ಕರಣೆ ಮಸೂದೆ ; ವಿಧಾನ ಪರಿಷತ್ ಒಪ್ಪಿಗೆ

ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪರಿಷ್ಕರಣೆಗೆ ಅವಕಾಶ ಕಲ್ಪಿಸುವ ತಿದ್ಧುಪಡಿ ಮಸೂದೆಗಳಿಗೆ ವಿಧಾನ ಪರಿಷತ್ ಸೋಮವಾರ ಒಪ್ಪಿಗೆ ನೀಡಿದೆ. ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪರಿಷ್ಕರಣೆಗೆ ಅವಕಾಶ ಕಲ್ಪಿಸುವ ಕರ್ನಾಟಕ ನಗರ ಪಾಲಿಕೆಗಳ ತಿದ್ದುಪಡಿ ಮಸೂದೆ 2021 ಅನ್ನು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಮಂಡಿಸಿದರು.

ಲಕ್ಷ್ಮೇಶ್ವರ: ಜಯ ಕರ್ನಾಟಕ ಜನಪರ ವೇದಿಕೆಯಿಂದ ಮನವಿ

ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿರುವುದನ್ನು ಖಂಡಿಸಿ ಜಯ ಕರ್ನಾಟಕ ಜನಪರ ವೇದಿಕೆ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.