ಧಾರವಾಡ : ಹೊಸಯಲ್ಲಾಪುರ ಬಳಿಯ ಕೋಳಿಕೆರೆ ಪ್ರದೇಶದಲ್ಲಿನ ವ್ಯಕ್ತಿಗೆ ಕೊರೊನಾ ಸೋಂಕು ನಿನ್ನೆ ಕಂಡು ಬಂದಿದ್ದು, ಜಿಲ್ಲಾಡಳಿತ ಆ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ ಕಲೆ ಹಾಕಿದೆ.

ಸೋಂಕಿತ ವ್ಯಕ್ತಿ ಮಾ. 5 ರಿಂದ 9 ರ ವರೆಗೆ ನಗರದ ಶ್ರವ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ. ಮಾ. 9 ರಿಂದ 17ರ ವರೆಗೆ ನಗರದ ಸಪ್ತಾಪುರದಲ್ಲಿನ ಸ್ಪಂದನಾ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದಾನೆ.

ಏಪ್ರೀಲ್ 30 ರಂದು ಹಾಗೂ ಮೇ.1 ರಂದು ಜಿಲ್ಲಾಸ್ಪತ್ರೆಗೆ ಹೋಗಿದ್ದಾನೆ. ಮೇ.1 ರಂದು ಪುನಃ ಚಿಕಿತ್ಸೆಗಾಗಿ ಸ್ಪಂದನಾ ಆಸ್ಪತ್ರೆಗೆ ಹೋಗಿದ್ದು, ಮರಳಿ ಅಲ್ಲಿಂದ ಅದೇ ದಿನ ಹುಬ್ಬಳ್ಳಿಯ ಕಿಮ್ಸ್ ಗೆ ಚಿಕಿತ್ಸೆಗೆಂದು ದಾಖಲಾಗಿದ್ದಾನೆ. ಈ ಸಂದರ್ಭದಲ್ಲಿ ಆತನಲ್ಲಿ ಸೋಂಕು ಇರುವುದು ಖಚಿತವಾಗಿದೆ.

ಈ ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡಿದ ವೈದ್ಯರಿಗೂ ಸಂಕಷ್ಟ ಶುರುವಾಗಿದೆ. ಈ ವ್ಯಕ್ತಿ ಕಳೆದ ತಿಂಗಳಿನಲ್ಲಿ ಹೊಸಯಲ್ಲಾಪುರ, ಶೀಲವಂತರ ಓಣಿ, ಮುರುಘಾಮಠ, ಕೊಪ್ಪದಕೆರೆ, ಎಂ.ಬಿ.ನಗರ ಹಾಗೂ ಹುಬ್ಬಳ್ಳಿ ಎಪಿಎಂಸಿ ಮಾರುಕಟ್ಟೆ ಪ್ರದೇಶದಲ್ಲಿ ಸಂಚರಿಸಿರುವುದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

You May Also Like

ಶಿರಹಟ್ಟಿ ಪಟ್ಟಣ ಪಂಚಾಯ್ತಿಗೆ ಅವಿರೋಧ ಆಯ್ಕೆ: ಪರಮೇಶ ಅಧ್ಯಕ್ಷ, ಇಸಾಕ ಉಪಾಧ್ಯಕ್ಷ

ಸ್ಥಳೀಯ ಪಟ್ಟಣ ಪಂಚಾಯ್ತಿ ಚುನಾವಣೆ ನಡೆದು 23 ತಿಂಗಳ ನಂತರ ಶನಿವಾರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಎರಡು ಸ್ಥಾನಗಳು ಅವಿರೋಧವಾಗಿ ಆಯ್ಕೆಯಾದವು.

ಶಾಕಿಂಗ್ ನ್ಯೂಸ್: ಕರ್ನಾಟಕವೀಗ ಸೋಂಕು ಅತಿ ವೇಗದಲ್ಲಿ ಹರಡುತ್ತಿರುವ ರಾಜ್ಯ: ಕೇಸ್-ಲೋಡ್ ಸಂಖ್ಯೆಯಲ್ಲಿ 5ನೆ ಸ್ಥಾನ

ಸೋಂಕಿತರ ಸಂಖ್ಯೆಯ ಆಧಾರದ ಪಟ್ಟಿಯಲ್ಲಿ (ಕೇಸ್-ಲೋಡ್) ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. 6ನೆ ಸ್ಥಾನದಲ್ಲಿದ್ದ ಕರ್ನಾಟಕ ಶನಿವಾರ ಉತ್ತರಪ್ರದೇಶವನ್ನು ದಾಟಿ 5ನೆ ಸ್ಥಾನಕ್ಕೆ ಏರಿದೆ.

ಡ್ಯಾರೆನ್ ಜನಾಂಗೀಯ ನಿಂದನೆಗೆ ಒಳಗಾಗಿದ್ದು ಸತ್ಯವೇ?

ಹೈದರಾಬಾದ್:  ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಜನಾಂಗೀಯ ನಿಂದನೆಗೆ ಒಳಗಾಗಿದ್ದೆ ಎಂದು ವೆಸ್ಟ್…

ಗದಗ ಜಿಲ್ಲೆಯಲ್ಲಿಂದು 73 ಕೊರೊನಾ ಪಾಸಿಟಿವ್!

ಈ ಮೂಲಕ ಒಟ್ಟು ಈವರೆಗೆ 1140 ಸೋಂಕಿತರು ಪತ್ತೆಯಾದಂತಾಗಿದೆ. ಇಂದು 56 ಜನ ಗುಣಮುಖ ಹೊಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಒಟ್ಟು 438 ಜನ ಈವರೆಗೆ ಬಿಡುಗಡೆ ಹೊಂದಿದ್ದಾರೆ.