ಬೆಂಗಳೂರು: ಕೊರೊನಾ ವೈರಸ್ ಗೆ ಸಂಬಂಧಿಸಿದಂತೆ ಹೈಕೋರ್ಟ್‌ನ ಮೇಲ್ವಿಚಾರಣ ಸಮಿತಿ ನೀಡಿರುವ ಸಲಹೆ ಮತ್ತು ಸೂಚನೆಗಳನ್ನು ಉಲ್ಲಂಘಿಸಿದರೆ ಕಾನೂನು ರೀತಿ ಕ್ರಮ ಜರಗಿಸಲಾಗುವುದು ಎಂದು ಕೋರ್ಟ್‌ ಸಿಬಂದಿಗೆ ಹೈಕೋರ್ಟ್‌ ಎಚ್ಚರಿಕೆ ನೀಡಿದೆ.

ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ್‌ ಅವರ ಆದೇಶದ ಮೇರೆಗೆ ರಿಜಿಸ್ಟ್ರಾರ್‌ ಜನರಲ್‌ ರಾಜೇಂದ್ರ ಬದಾಮಿಕರ್‌ ಈ ಸೂಚನೆ ಹೊರಡಿಸಿದ್ದಾರೆ.

ಏ. 21ರಂದು ಕೊರೊನಾಗೆ ಸಂಬಂಧಿಸಿದ ಸಲಹೆ ಮತ್ತು ಸೂಚನೆಗಳ ಕುರಿತು ಹೈಕೋರ್ಟ್ ಸೂಚನೆ ಹೊರಡಿಸಿತ್ತು. ಈ ಸಲಹೆ, ಸೂಚನೆಗಳನ್ನು ಹೈಕೋರ್ಟ್‌ ಸಹಿತ ರಾಜ್ಯದ ಎಲ್ಲ ನ್ಯಾಯಾಲಯಗಳ ಅಧಿಕಾರಿಗಳು ಮತ್ತು ಸಿಬಂದಿ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಲಾಗಿತ್ತು.

ಈಗ ಮತ್ತೊಂದು ಸುತ್ತೋಲೆ ಹೊರಡಿಸಿರುವ ಹೈಕೋರ್ಟ್‌ ಈ ಹಿಂದೆ ತಿಳಿಸಿರುವ ಸೂಚನೆಗಳನ್ನು ಅಧಿಕಾರಿಗಳು ಅಥವಾ ಸಿಬಂದಿ ಉಲ್ಲಂಘಿಸಿದರೆ ಅದನ್ನು ಸೇವಾ ದುರ್ನಡತೆ ಎಂದು ಪರಿಗಣಿಸಿ ಕಾನೂನು ರೀತಿ ಕ್ರಮ ಜರಗಿಸಲಾಗುವುದು ಎಂದು ತಿಳಿಸಿದೆ.

Leave a Reply

Your email address will not be published.

You May Also Like

ಶೇಂಗಾ ಚಿಕ್ಕಿಗೀಗ ಜಿಐ ಮಾನ್ಯತೆ

ಶೇಂಗಾ ಚಿಕ್ಕಿ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಶೇಂಗಾ ಚಿಕ್ಕಿ ರುಚಿಯ ಜೊತೆಗೆ ಪೌಷ್ಟಿಕವೂ ಹೌದು. ಅಂತಹ ಶೇಂಗಾ ಚಿಕ್ಕಿಗೀಗ ಜಿಐ ಮಾನ್ಯತೆ ದೊರೆತಿದೆ. ಏನಿದು ಐಜಿ ಮಾನ್ಯತೆ ಎಂದರೆ…??

ಕೊರೋನಾ ಜಾಗೃತಿ: ಹಣ್ಣು, ತರಕಾರಿ ತೊಳೆಯುವಾಗ ಎಚ್ಚರ!

ಕೊರೋನಾ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ವೈರಸ್ ನಿರ್ಮೂಲನೆಗೆ ಶುಚಿತ್ವ ಕಾಪಾಡಿಕೊಳ್ಳುವುದು ಅಗತ್ಯ. ದಿನಕ್ಕೆ ಐದಾರು ಸಲ…

ಕೊರೋನಾ ಕಾವ್ಯ-8

ನಂರುಶಿ ಅವರು ಗಜಲ್ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕರಾದ ಕೃತಿಗಳು ಈಗಾಗಲೇ ಹೊರತಂದಿದ್ದು, ತಮ್ಮ ಗಜಲ್ ಮೂಲಕ ಕೊರೋನಾ ವೈರಸ್ ನಿಂದಲೇ ಮಾತನಾಡಿಸಿದ್ದಾರೆ.

ಭಾರತೀಯ ಟೆಕ್ಕಿಗಳಿಗೆ ಪೌರತ್ವ: ಮಹತ್ವದ ಆದೇಶಗಳಿಗೆ ಬೈಡನ್ ಸಹಿ

ವಾಷಿಂಗ್ಟನ್: ಅಮೆರಿrಕಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರಿಸಿದ ಬೆನ್ನಲ್ಲೇ 15 ಮಹತ್ವದ ಆದೇಶಗಳಿಗೆ ಬೈಡೆನ್ ಸಹಿ ಮಾಡಿದ್ದಾರೆ.…