“ಇಡೀ ಪ್ರಪಂಚದ ಅತ್ಯಂತ ಭವ್ಯವಾದ ಜೀವಿ, ಹುಲಿ” ಎಂದು ಜ್ಯಾಕ್ ಹನ್ನಾ ಹೇಳಿದ ಮಾತು ನಿಜಕ್ಕೂ ಅಕ್ಷರಶಃ ಸತ್ಯ.
ಹುಲಿಗಳ ವಾಸಸ್ಥಾನಗಳನ್ನು ರಕ್ಷಿಸಲು, ವಿಸ್ತರಿಸಲು ಹಾಗೂ ಸಂರಕ್ಷಣೆಯ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸುವುದು.ರಾಷ್ಟ್ರವು ತನ್ನ ಪ್ರಾಣಿಗಳನ್ನು ಹೇಗೆ ಪರಿಗಣಿಸುತ್ತದೆ ಎಂಬುದನ್ನು ನೋಡುವ ಮೂಲಕ ಅದರ ಹಿರಿಮೆ ಮತ್ತು ನೈತಿಕ ಪ್ರಗತಿಯನ್ನು ಅಳೆಯಲಿಕ್ಕೆ ಪ್ರತಿ ರ‍್ಷ ವಿಶ್ವದಾದ್ಯಂತ ಜುಲೈ 29 ರಂದು “ವಿಶ್ವ ಹುಲಿ” ದಿನವನ್ನು ಆಚರಿಸಲಾಗುತ್ತದೆ. ಅಪಾಯದಂಚಿನಲ್ಲಿರುವ ಹುಲಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಮತ್ತು ಹುಲಿ ಸಂರಕ್ಷಣೆಯನ್ನು ಉತ್ತೇಜಿಸುವುದು ಈ ಆಚರಣೆಯ ಹಿಂದಿನ ಪ್ರಮುಖ ಉದ್ದೇಶವಾಗಿದೆ. ಹುಲಿ ಇದು ಗಂಭೀರವಾದ ಮತ್ತು ಭವ್ಯವಾದ ಪ್ರಾಣಿ ಇದು ನಮ್ಮ ದೇಶದ ರಾಷ್ಟ್ರೀಯ ಪ್ರಾಣಿ. ಒಂದು ಹುಲಿ 13 ಅಡಿ ಉದ್ದ 300 ಕೆಜಿವರೆಗೂ ತೂಗುತ್ತದೆ. ಸಿಂಹದಂತೆ ಇದು ಗುಂಪಿನಲ್ಲಿ ಇರುವ ಪ್ರಾಣಿಯಲ್ಲ. ಒಂಟಿಯಾಗಿ ಇರಲು ಬಯಸುವ ಬುದ್ಧಿವಂತ ಜೀವಿ.ಭಾರತದ ಮಟ್ಟಿಗೆ ಬಂಗಾಳದ ಹುಲಿಗಳಿಗೆ ಹೆಚ್ಚಿನ ಮಹತ್ವವಿದೆ. ಹಾಗೇ ನೋಡಿದರೆ ವಿಶ್ವದಲ್ಲಿ ಇರುವ ಶೇ. 70 ರಷ್ಟು ಹುಲಿಗಳು ಭಾರತದಲ್ಲೇ ಇವೆ.
ಜಾಗತಿಕ ಹುಲಿ ದಿನದ ಇತಿಹಾಸ:
ವಿಶ್ವದಲ್ಲಿ ಜುಲೈ 29 ಒಂದು ಐತಿಹಾಸಿಕ ದಿನ.ಏಕೆಂದರೆ ಈ ದಿನದಂದು ಹಲವಾರು ದೇಶಗಳು 2010 ರಲ್ಲಿ ರಷ್ಯಾದಲ್ಲಿ ನಡೆದ ಸೇಂಟ್ ಪೀರ‍್ಸ್ಬರ‍್ಗ್ ಟೈಗರ್ ಶೃಂಗಸಭೆಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿದವು. ಜಾಗತಿಕವಾಗಿ ಕಡಿಮೆಯಾಗುತ್ತಿರುವ ಹುಲಿಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಹುಲಿಗಳ ನೈರ‍್ಗಿಕ ಆವಾಸಸ್ಥಾನವನ್ನು ಕಾಪಾಡುವುದು ಈ ಒಪ್ಪಂದದ ಪ್ರಮುಖ ಅಂಶವಾಗಿದೆ. ಅಲ್ಲದೆ 2022ರ ಅಂತ್ಯದ ವೇಳೆಗೆ ಹುಲಿ ಜನಸಂಖ್ಯೆಯ ದೇಶಗಳು ಹುಲಿ ಜನಸಂಖ್ಯೆಯನ್ನು ದ್ವಿಗುಣವಾಗುವಂತೆ ಮಾಡುತ್ತೇವೆ ಎಂದೂ ವಿವಿಧ ದೇಶಗಳ ಪ್ರತಿನಿಧಿಗಳು ಅಂದು ಘೋಷಿಸಿದರು. ಅದರಂತೆ 2018 ರ ವಿಶ್ವ ವನ್ಯಜೀವಿ ನಿಧಿ (ಡಬ್ಲ್ಯುಡಬ್ಲ್ಯುಎಫ್) ಪ್ರಕಾರ ಪ್ರಪಂಚದಲ್ಲಿ ಹುಲಿಗಳ ಸಂಖ್ಯೆ ಕೇವಲ 3890.ಇವುಗಳ ಪೈಕಿ 2967 ಹುಲಿಗಳು ಭಾರತದಲ್ಲಿವೆ.ಅವುಗಳ ಉಳಿವು ನಮ್ಮ ಕೈಯಲ್ಲಿದೆ. 2018 ರ ಜಾಗತಿಕ ಹುಲಿ ಗಣತಿಯ ಪ್ರಕಾರ ವಿಶ್ವದಲ್ಲಿನ ಹುಲಿಗಳ ಪೈಕಿ ಶೇ 70 ರಷ್ಟು ಹುಲಿಗಳು ಭಾರತದಲ್ಲಿವೆ ಎಂದು ಕೇಂದ್ರ ರ‍್ಕಾರ ತಿಳಿಸಿದೆ.
ವಿವಿಧ ಬಗೆಯ ಹುಲಿಗಳು:
ಬಿಳಿ ಹುಲಿ, ಕಪ್ಪು ಪಟ್ಟೆಗಳೊಂದಿಗೆ ಕಂದು ಹುಲಿ, ಕಪ್ಪು ಪಟ್ಟೆಗಳೊಂದಿಗೆ ಬಿಳಿ ಹುಲಿ, ಮತ್ತು ಚಿನ್ನದ ಬಣ್ಣದ ಅಥವಾ ಗೋಲ್ಡನ್ ಹುಲಿ – ಹೀಗೆ ನಾನಾ ಬಣ್ಣಗಳ ಹುಲಿಗಳಿವೆ.
ಇಂದು ಜಗತ್ತಿನಲ್ಲಿರುವ ಐದು ಹುಲಿಗಳ ಪ್ರಬೇಧಗಳು ಅವುಗಳೆಂದರೆ..
೧)ರಾಯಲ್ ಬೆಂಗಾಲ್ ಹುಲಿ
೨)ದಕ್ಷಿಣ ಚೀನಾ ಹುಲಿ
೩)ಇಂಡೋಚೈನೀಸ್ ಹುಲಿ
೪)ಸುಮಾತ್ರಾ ಹುಲಿ ಮತ್ತು
೫)ಸೈಬೀರಿಯನ್ ಹುಲಿ.
ಮನುಷ್ಯನ ಆಸೆಗೆ ಬಲಿಯಾಗಿ ಈಗ ಸಂತತಿಯೇ ಅಳಿದಿರುವ ಹುಲಿಗಳ ಪ್ರಬೇಧಗಳೆಂದರೆ…
ಇಲ್ಲಿಯವರೆಗೆ ಬಾಲಿ ಟೈಗರ್, ಕ್ಯಾಸ್ಪಿಯನ್ ಟೈಗರ್, ಜವಾನ್ ಟೈಗರ್, ಮತ್ತು ಟೈಗರ್ ಹೈಬ್ರಿಡ್ಸ್ ಸೇರಿದಂತೆ ನಾಲ್ಕು ಜಾತಿಯ ಹುಲಿಗಳ ಸಂಖ್ಯೆ ನಾಶವಾಗಿದೆ ಅಥವಾ ಅಳಿದುಹೋಗಿದೆ. ಆದ್ದರಿಂದ ಈಗಿರುವ ಹುಲಿಗಳನ್ನು ಉಳಿಸಲು ಬಹಳಷ್ಟು ಯೋಜನೆಗಳನ್ನು ಅನುಷ್ಠಾನಗೊಳಿಸಬೇಕಾದ ಅನಿವರ‍್ಯತೆ ಉಂಟಾಗಿದೆ.
ನಮ್ಮ ದೇಶದ ರಾಜ್ಯವಾರು ಹುಲಿಗಳ ಸಂಖ್ಯೆ:
ಭಾರತದ ಹುಲಿಗಳ ಸಂಖ್ಯೆಯ ಬೆಳವಣಿಗೆಯ ದರಕ್ಕೆ ಅನುಗುಣವಾಗಿ ಮಧ್ಯಪ್ರದೇಶವು ಅತಿ ಹೆಚ್ಚು ಅಂದರೆ 526 ಹುಲಿಗಳನ್ನು ಹೊಂದಿದೆ. ದ್ವಿತೀಯ ಸ್ಥಾನ ಪಡೆದ ರ‍್ನಾಟಕದಲ್ಲಿ 524 ಹುಲಿಗಳಿವೆ ಹಾಗೂ ಉತ್ತರಾಖಂಡವು 442 ಹುಲಿಗಳೊಂದಿಗೆ 3 ನೇ ಸ್ಥಾನದಲ್ಲಿದೆ. 2022 ರ ಗಡುವುಗಿಂತ ಮುಂಚಿತವಾಗಿ ಸೇಂಟ್ ಪೀರ‍್ಸ್ಬರ‍್ಗ್ ಘೋಷಣೆಗೆ ತನ್ನ ಬದ್ಧತೆಯನ್ನು ಸಾಧಿಸಲು ಪರಿಸರ ಇಲಾಖೆಯ ಪ್ರಯತ್ನಗಳು ಪ್ರರ‍್ಧಮಾನಕ್ಕೆ ಬರುತ್ತಿರುವುದರಿಂದ, ಭಾರತವು 2022ರ ಗುರಿಗಿಂತ ಮೊದಲೇ ಈಗಾಗಲೇ ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿದೆ. ಈ ಹಿನ್ನೆಲೆಯಲ್ಲಿ ನಮ್ಮ ದೇಶಕ್ಕೆ ಮತ್ತು ರ‍್ನಾಟಕ ರಾಜ್ಯಕ್ಕೆ ಇದು ಹೆಮ್ಮೆಯ ವಿಷಯವಾಗಿದೆ.
ದೇಶದಲ್ಲಿ ಹೆಚ್ಚುತ್ತಿದೆ ಹುಲಿಗಳ ಸಂತತಿ:
ಹುಲಿ ಸಂತತಿ ಹೆಚ್ಚಿದ್ದು ಹೀಗೆ-
2006 ರಲ್ಲಿ 1441 ಹುಲಿಗಳು
2010 ರಲ್ಲಿ 1726 ಹುಲಿಗಳು
2014 ರಲ್ಲಿ 2226 ಹುಲಿಗಳು
2018 ರಲ್ಲಿ 2967 ಹುಲಿಗಳು ಏತನ್ಮಧ್ಯೆ 2012-2019 ರವರೆಗಿನ ಹುಲಿಗಳ ಸಾವಿನ ಸಂಖ್ಯೆ 750.ಅದೆ ರೀತಿ ಈ ಮೇಲಿನ ರ‍್ಷಗಳಲ್ಲಿ ಹುಲಿ ದಾಳಿಗೆ ಸಿಲುಕಿ ಮೃತಪಟ್ಟ ವ್ಯಕ್ತಿಗಳ ಸಂಖ್ಯೆ 383 ಈ ಅಂಕಿ ಅಂಶಗಳು ವಿಷಾದನೀಯ ಸಂಗತಿಗಳಾಗಿವೆ.
ಅಪಾಯದಂಚಿನಲ್ಲಿರುವ ಹುಲಿಗಳು:
ಮರಗಳನ್ನು ಕಡಿಯುವುದರಿಂದ ಆವಾಸಸ್ಥಾನಗಳ ನಷ್ಟ, ಬೇಟೆ ಮತ್ತು ಹುಲಿಯ ದೇಹದ ಭಾಗಗಳ ಅಕ್ರಮ ವ್ಯಾಪಾರ – ಇವುಗಳು ಹುಲಿಗಳ ಸಂಖ್ಯೆಯ ಕುಸಿತದ ಹಿಂದಿನ ಕೆಲವು ಪ್ರಮುಖ ಅಂಶಗಳಾಗಿವೆ. ದುರದೃಷ್ಟವಶಾತ್, ಅಳಿವಿನ ಅಂಚಿನಲ್ಲಿರುವಯ ಪ್ರಾಣಿಗಳ ಪ್ರಭೇದಗಳಲ್ಲಿ ಹುಲಿಯೂ ಒಂದು.
ರ‍್ನಾಟಕದಲ್ಲಿ 5 ಹುಲಿ ಸಂರಕ್ಷಿತ ಪ್ರದೇಶಗಳಿವೆ ಅವುಗಳೆಂದರೆ
ಬಂಡೀಪುರ,ನಾಗರಹೊಳೆ,ಭದ್ರಾ,ದಾಂಡೇಲಿ-ಅಣಶಿ ಹಾಗೂ ಬಿಳಿಗಿರಿರಂಗನ ಬೆಟ್ಟದ (ಬಿ ಆರ್ ಟಿ) ಹುಲಿ ಸಂರಕ್ಷಿತ ಪ್ರದೇಶಗಳು. ಅದೇ ರೀತಿ ಭಾರತದಲ್ಲಿ 50 ಹುಲಿ ಸಂರಕ್ಷಿತ ಅಭಯಾರಣ್ಯಗಳಿವೆ.
ಒಟ್ಟಾರೆಯಾಗಿ ಹುಲಿ ಸಂರಕ್ಷಣೆಯಲ್ಲಿ ಆಸಕ್ತಿ ತೋರುವ ರಾಷ್ಟ್ರಗಳಿಗೆ ಅಗತ್ಯ ತರಬೇತಿ, ಮರ‍್ಗರ‍್ಶನ ನೀಡಲು ಭಾರತ ಸಿದ್ಧವಿದೆ ಎಂದು ಕೇಂದ್ರ ರ‍್ಕಾರ ಹೇಳಿದೆ.ಏಕೆಂದರೆ ಭಾರತದಲ್ಲಿ ಹುಲಿಗಳ ರಕ್ಷಣೆಗೆ ಹಾಕಿಕೊಂಡ ಸಂರಕ್ಷಣೆಯ ಮರ‍್ಗೋಪಾಯ ಜಾಗೃತಿ ಮೂಡಿಸುವ ಕರ‍್ಯಕ್ರಮಗಳೇ ಇದಕ್ಕೆ ಸಾಕ್ಷಿಯಾಗಿದೆ.
ಕೊನೆಯ ಮಾತು:
“ನೀವು ಒಮ್ಮೆ ನೋಡುವ ಮೊದಲು ಹುಲಿ ನಿಮ್ಮನ್ನು ನೂರು ಬಾರಿ ನೋಡುತ್ತದೆ” ಎಂದು ಜಾನ್ ವೈಲಂಟ್ ಹೇಳಿಕೆಯಂತೆ ಹುಲಿಗಳನ್ನು ಸಂರಕ್ಷಣೆ ಮಾಡಿದಾಗ ಮಾತ್ರ ಅದು ನಮ್ಮನ್ನು ನೂರು ಬಾರಿ ನೋಡಿಯೇ ನೋಡುತ್ತದೆ ಎನ್ನುವುದು ನನ್ನೊಳಗಿನ ಆಶಯ.
