ಬೆಂಗಳೂರು: ರಾಜ್ಯ ಚುನಾವಣಾ ಆಯೋಗವು ರಾಜ್ಯದ 30 ಜಿಲ್ಲೆಗಳಲ್ಲಿನ ಒಟ್ಟು 6004 ಗ್ರಾಮ ಪಂಚಾಯತಿಗಳಲ್ಲಿ ಅವಧಿ ಮುಕ್ತಾಯವಾಗದ 162 ಗ್ರಾಮ ಪಂಚಾಯತಿಗಳು, ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿರುವ 6 ಗ್ರಾಮ ಪಂಚಾಯತಿಗಳು ಮತ್ತು 33 ಗ್ರಾಮ ಪಂಚಾಯತಿಗಳು ಪೂರ್ಣವಾಗಿ ಹಾಗೂ 41 ಗ್ರಾಮ ಪಂಚಾಯತಿಗಳು ಬಹುಶಃ ನಗರ ಸ್ಥಳೀಯ ಸಂಸ್ಥೆಗೆ ಸೇರ್ಪಡೆಯಾಗಿರುವುದರಿಂದ ಒಟ್ಟು 74 ಗ್ರಾಮ ಪಂಚಾಯತಿಗಳು ಒಟ್ಟಾರೆ 242 ಗ್ರಾಮ ಪಂಚಾಯತಿಗಳನ್ನು ಹೊರತು ಪಡೆಸಿ ಉಳಿದ ಎಲ್ಲ 5762 ಗ್ರಾಮ ಪಂಚಾಯತಿಗಳ 35,884 ಕ್ಷೇತ್ರಗಳಿಂದ ಒಟ್ಟು 92121 ಸ್ಥಾನಗಳಿಗೆ ಈ ಕೆಳಕಂಡ ವೇಳಾ ಪಟ್ಟಿಯಂತೆ ಚುನಾವಣೆ ನಡೆಸಲಾಗುವುದು.

ಮೊದಲ ಹಂತದ ಚುನಾವಣೆ

            ಗದಗ ಜಿಲ್ಲೆಯಲ್ಲಿ ಗದಗ ತಾಲೂಕಿನಲ್ಲಿ 26 ಗ್ರಾಮ ಪಂಚಾಯತಿಗಳು, ಶಿರಹಟ್ಟಿ ತಾಲೂಕಿನ 14 ಗ್ರಾಮ ಪಂಚಾಯತಿ ಹಾಗೂ ಲಕ್ಷ್ಮೇಶ್ವರ ತಾಲೂಕಿನಲ್ಲಿ 13 ಗ್ರಾಮ ಪಂಚಾಯತಿ ಸೇರಿ 3 ತಾಲೂಕುಗಳ ಪೈಕಿ 53 ಗ್ರಾಮ ಪಂಚಾಯಿಗೆ ಮೊದಲ ಹಂದಲ್ಲಿ ಚುನಾವಣೆ ನಡೆಯಲಿದೆ.

ಎರಡನೇ ಹಂತದ ಚುನಾವಣೆ

            ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ 18 ಗ್ರಾಮ ಪಂಚಾಯತಿ, ರೋಣ ತಾಲೂಕಿನ 24 ಗ್ರಾಮ ಪಂಚಾಯತಿ, ಗಜೇಂದ್ರಗಡ ತಾಲೂಕಿನ 9 ಗ್ರಾಮ ಪಂಚಾಯತಿ ಹಾಗೂ ನರಗುಂದ ತಾಲೂಕಿನ 13 ಗ್ರಾಮ ಪಂಚಾಯತಿಗಳು ಸೇರಿ ಒಟ್ಟು 4 ತಾಲೂಕುಗಳ 64 ಗ್ರಾಮ ಪಂಚಾಯತಿಗಳಿಗೆ ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದೆ.

ಚುನಾವಣಾ ವೇಳಾ ಪಟ್ಟಿ

1, ಮೊದಲ ಹಂತದ ಚುನಾವಣೆ

ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಹೊರಡಿಸುವ ದಿನಾಂಕ ಮತ್ತು ದಿನ 07-12-2020 ಸೋಮವಾರ ಆಗಿದ್ದು, 11-12-2020 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ನಾಮ ಪತ್ರ ಪರಿಶೀಲನೆ 12-12-2020 ಕ್ಕೆ ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು 14-12-2020 ಕೊನೆಯ ದಿನವಾಗಿರುತ್ತದೆ. ಮತದಾನ ಅವಶ್ಯವಿದ್ದರೇ 22-12-2020 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಸಲಾಗುವುದು. ಮರು ಮತದಾನ ಇದ್ದಲ್ಲಿ ಮತದಾನ ದಿನಾಂಕ 24-12-2020 ರಂದು ನಡೆಸಲಾಗುವುದು. 30-12-2020 ರಂದು ಮತ ಎಣಿಕೆ ಪ್ರಕ್ರಿಯೇ ನಡೆಯಲಿದೆ.

2, ಎರಡನೇ ಹಂತದ ಚುನಾವಣೆ

ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಹೊರಡಿಸುವ ದಿನಾಂಕ ಮತ್ತು ದಿನ 11-12-2020 ಆಗಿದ್ದು, 16-12-2020 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ನಾಮ ಪತ್ರ ಪರಿಶೀಲನೆ 17-12-2020 ಕ್ಕೆ ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು 19-12-2020 ಕೊನೆಯ ದಿನವಾಗಿರುತ್ತದೆ. ಮತದಾನ ಅವಶ್ಯವಿದ್ದರೇ 27-12-2020 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಸಲಾಗುವುದು. ಮರು ಮತದಾನ ಇದ್ದಲ್ಲಿ ಮತದಾನ ದಿನಾಂಕ 29-12-2020 ರಂದು ನಡೆಸಲಾಗುವುದು. 30-12-2020 ರಂದು ಮತ ಎಣಿಕೆ ಪ್ರಕ್ರಿಯೇ ನಡೆಯಲಿದೆ.

ಇಂದಿನಿಂದಲೇ ಚುನಾವಣಾ ವ್ಯಾಪ್ತಿಯ ಗ್ರಾಮಗಳಲ್ಲಿ ನೀತಿ ಸಂಹಿತೆ ಜಾರಿ

1, ಚುನಾವಣೆ ನಡೆಯುವ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ದಿನಾಂಕ 30-11-2020 ರಿಂದ 31-12-2020 ರಂದು ಸಂಜೆ 5 ಗಂಟೆವರೆಗೆ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ.

2, ನೀತಿ ಸಂಹಿತೆಯೂ ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆ, ನಗರಪಾಲಿಕೆ, ಮಹಾನಗರ ಪಾಲಿಕೆ ಪ್ರದೇಶಗಳಿಗೆ ಅನ್ವಯವಾಗುವುದಿಲ್ಲ.

3, ಗ್ರಾಮ ಪಂಚಾಯತಿಯ ಚುನಾವಣೆ ಪಕ್ಷರಹಿತ, ಚುನಾವಣೆಯಾಗಿದೆ.

4, ರಾಜ್ಯದಲ್ಲಿ ಒಟ್ಟು 2,97,15,048 ಗ್ರಾಮ ಪಂಚಾಯತಿ ಮತದಾರರು ಇರುತ್ತಾರೆ.

5, ಕೋವಿಡ್-19 ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗವೂ ಚುನಾವಣೆ ನಡೆಸಲು ಮಾರ್ಗಸೂಚಿ ತಯಾರಿಸಿದೆ. ಸದರಿ ಎಸ್.ಒ.ಪಿಯಲ್ಲಿನ ಸೂಚನೆಗಳನ್ನು ಅಳವಡಿಸಿಕೊಂಡು ಚುನಾವಣೆ ನಡೆಸಲು ಆದೇಶಿಸಿದೆ.

6, ಮತದಾರರು ಯಾವುದೇ ಆತಂಕವಿಲ್ಲದೇ ತಮ್ಮ ಮತದಾನ ಮಾಡಬಹುದು.

7, ಪ್ರತಿ ಜಿಲ್ಲೆಯಲ್ಲಿ ತಾಲೂಕುವಾರು ಎರಡು ಹಂತದಲ್ಲಿ ಚುನಾವಣೆಯನ್ನು ನಡೆಸಲಾಗುತ್ತಿದೆ.

8, ಪ್ರತೀ ಮತಗಟ್ಟೆಯಲ್ಲಿ ಮತದಾರರ ಸಂಖ್ಯೆಯನ್ನು ಗರೀಷ್ಠ 1000ಕ್ಕೆ ಮಿತಗೊಳಿಸಲಾಗಿದೆ.

9, ಮತದಾರರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮತಗಟ್ಟೆ ಪ್ರವೇಶಿಸುವ ಮೊದಲು ತಮ್ಮ ಕೈಗಳನ್ನು ಸ್ಯಾನಿಟೈಸ್ ಮಾಡಿಕೊಂಡು ಮತ ಚಲಾಯಿಸುವುದು.

10, ಕೋವಿಡ್ ಸೋಂಕಿತರು ಹಾಗೂ ಕೋವಿಡ್ ಶಂಕಿತರನ್ನು ಅಗತ್ಯ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ, ಸಂಬಂಧಪಟ್ಟ ಮತಗಟ್ಟೆಗಳಲ್ಲಿ ಮತದಾನದ ಕೊನೆಯ ಒಂದು ಘಂಟೆಯ ಅವಧಿಯಲ್ಲಿ ಮತದಾನ ಮಾಡಲು ಅವಕಾಶ ಕಲ್ಪಿಸಿದೆ.

11, ಬೀದರ್ ಜಿಲ್ಲೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳ(ಇವಿಎಂ) ಮೂಲಕ ಇತರೇ ಜಿಲ್ಲೆಗಳಲ್ಲಿ ಮತಪೆಟ್ಟಿಗೆಗಳ ಮೂಲಕ ಚುನಾವಣೆ ನಡೆಸಲಾಗುವುದು.

12, ಅಂದಾಜು 5847 ಚುನಾವಣಾ ಅಧಿಕಾರಿಗಳನ್ನು ಹಾಗೂ 6085 ಸಹಾಯಕ ಚುನಾವಣಾಧಿಕಾರಿಯನ್ನು ನೇಮಿಸಲಾಗಿದೆ.

13, 45128 ಮತಗಟ್ಟೆಗಳಿಗೆ ಸುಮಾರು 2,70,768 ಮತಗಟ್ಟೆ ಅಧಿಕಾರಿ/ಸಿಬ್ಬಂದಿಗಳನ್ನು ನೇಮಿಸಲಾಗಿದೆ.

14, ಕೋವಿಡ್ 19 ಹಿನ್ನೆಲೆಯಲ್ಲಿ ಚುನಾವಣೆಗಾಗಿ ಅಂದಾಜು 45,000 ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳ ಸೇವೆಯನ್ನು ಪಡೆದುಕೊಳ್ಳಲಾಗುತ್ತಿದೆ.

ವಿವರಗಳಿಗಾಗಿ 01-12-2020ರ ಉತ್ತರಪ್ರಭ ದಿನಪತ್ರಿಕೆ ಓದಿರಿ  

Leave a Reply

Your email address will not be published. Required fields are marked *

You May Also Like

ಕೊರೊನಾ ಕಂಟಕದಲ್ಲಿ ಗದಗ ಜಿಲ್ಲೆ: ಇಂದು 82 ಕೊರೊನಾ ಪಾಸಿಟಿವ್!

ಜಿಲ್ಲೆಯಲ್ಲಿಂದು ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು ಈ ಮೂಲಕ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಒಟ್ಟು ಗುಣಮುಖ ಹೊಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರ

ಜುಲೈನಲ್ಲಿ ಪಿಯುಸಿ ಹಾಗೂ ಆಗಸ್ಟ್‌ ಮೊದಲ ವಾರದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ : ಶಿಕ್ಷಣ ಸಚಿವ ಸುರೇಶ್ ಕುಮಾರ್

ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಸದ್ಯ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತಿದೆ. ಜುಲೈನಲ್ಲಿ ಪಿಯುಸಿ ಪರೀಕ್ಷೆ ಫಲಿತಾಂಶ ಹಾಗೂ…

ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ

ರಾಮನಗರ: ಮೇಕೆದಾಟು ಯೋಜನೆಯನ್ನು ಕೂಡಲೇ ಕೈಗೆತ್ತಿಕೊಳ್ಳುವಂತೆ ಕರ್ನಾಟಕ ಸರ್ಕಾರವನ್ನು ಆಗ್ರಹಿಸಲು ಕಾಂಗ್ರೆಸ್ ಪಕ್ಷ ಜನವರಿ 9 ರಿಂದ…